ಬೆಂಗಳೂರು: ಕಾಂಗ್ರೆಸ್‌ ತನ್ನ ಶಾಸಕರನ್ನು ಸೇಫ್‌ ಮಾಡಲು ರೆಸಾರ್ಟ್‌ನತ್ತ ಹೊರಟಿದೆ. ಈ ಹಿನ್ನಲೆಯಲ್ಲಿ ತನ್ನ 78 ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲಿದೆ. ಬಿಜೆಪಿಯ ಕುದುರೆ ವ್ಯಾಪಾರದಿಂದ ತಪ್ಪಿಸಲು ರೆಸಾರ್ಟ್‌ ರಾಜಕಾರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ.

ರೆಸಾರ್ಟ್‌ ರಾಜಕಾರಣದ ಸಂಪೂರ್ಣ ಜವಾಬ್ದಾರಿಯನ್ನು  ಜಿ ಪರಮೇಶ್ವರ ಮತ್ತು ಡಿಕೆಶಿಯವರಿಗೆ ವಹಿಸಲಾಗಿದೆ. ಎಲ್ಲಾ ಕಾಂಗ್ರೆಸ್‌ ಶಾಸಕರನ್ನು ಕಾಯುವ ಹೊಣೆಯನ್ನು  ಡಿಕೆಶಿ ಖುದ್ದು ವಹಿಸಿಕೊಂಡಿದ್ದಾರೆ. ಈ ಶಾಸಕರನ್ನು ವರ್ಮಾ ಟ್ರಾವಲ್ಸ್‌ನ KO1AB 2678 ಸಂಖ್ಯೆಯ ಬಸ್‌ನಲ್ಲಿ  ರಾಮನಗರ ತಾಲ್ಲೂಕಿನ ಕುಂಬಳಗೋಡಿನ ಈಗಲ್ಟನ್‌ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತಿದೆ. ರೆಸಾರ್ಟ್‌ಗೆ ಬಸ್‌ ವ್ಯವಸ್ಥೆಯನ್ನು ಜಮೀರ್‌ ಅಹಮದ್‌ ಮಾಡಿದ್ದಾರೆ. ಅದಕ್ಕಾಗಿ ಬೆಳಗಿನಿಂದ ಜಮೀರ್‌ ಅಹಮದ್‌  ಯಾವುದೇ ಕಾಂಗ್ರೆಸ್‌ ಸಭೆಗೆ ಬಂದಿರಲಿಲ್ಲ ಎನ್ನಲಾಗಿದೆ.

ಕೆಪಿಪಿಸಿ  ಕಛೇರಿಯಿಂದ ಖಾಸಗಿ ಬಸ್‌ನಲ್ಲಿ ಹೊರಡುವ ಶಾಸಕರು ಮೊದಲು ರಾಜಭವನಕ್ಕೆ ತೆರಳುತ್ತಾರೆ ಅನ್ನೋ ಮಾಹಿತಿ ಇದೆ. ಅಲ್ಲಿ ರಾಜಪಾಲರ ಮುಂದೆ ಪರೇಡ್‌ ಮಾಡಿ ತಮ್ಮ ಸಂಖ್ಯಾಬಲ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಲಿದ್ದಾರೆ. ನಂತರ ರೆಸಾರ್ಟ್‌ಗೆ ತೆರಳಲಿದ್ದೇವೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಶಾಸಕರ ಮೇಲೆ ಆಪರೇಷನ್ ಕಮಲ ಆಗಬಾರದು ಎಂದು ಈ  ರೀತಿಯ ಸರ್ಕಸ್‌ ಮಾಡುತ್ತಿದೆ. ಆನಂದ್‌ ಸಿಂಗ್‌, ಜಾರಕಿಹೋಳಿ ಬ್ರದರ್ಸ್‌ ಸೇರಿ 4 ಜನ ಶಾಸಕರನ್ನು ಬಿಟ್ಟು ಉಳಿದ ಎಲ್ಲಾ ಶಾಸಕರು ರೆಸಾರ್ಟ್‌ಗೆ  ತೆರಳುತ್ತಿದ್ದಾರೆ.

 

Please follow and like us:
0
http://bp9news.com/wp-content/uploads/2018/05/sharma-bus-3-e1526469121228.jpghttp://bp9news.com/wp-content/uploads/2018/05/sharma-bus-3-e1526469121228-150x150.jpgBP9 Bureauಪ್ರಮುಖಬೆಂಗಳೂರು: ಕಾಂಗ್ರೆಸ್‌ ತನ್ನ ಶಾಸಕರನ್ನು ಸೇಫ್‌ ಮಾಡಲು ರೆಸಾರ್ಟ್‌ನತ್ತ ಹೊರಟಿದೆ. ಈ ಹಿನ್ನಲೆಯಲ್ಲಿ ತನ್ನ 78 ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲಿದೆ. ಬಿಜೆಪಿಯ ಕುದುರೆ ವ್ಯಾಪಾರದಿಂದ ತಪ್ಪಿಸಲು ರೆಸಾರ್ಟ್‌ ರಾಜಕಾರಣ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್‌ ನಾಯಕರು ತಿಳಿಸಿದ್ದಾರೆ. ರೆಸಾರ್ಟ್‌ ರಾಜಕಾರಣದ ಸಂಪೂರ್ಣ ಜವಾಬ್ದಾರಿಯನ್ನು  ಜಿ ಪರಮೇಶ್ವರ ಮತ್ತು ಡಿಕೆಶಿಯವರಿಗೆ ವಹಿಸಲಾಗಿದೆ. ಎಲ್ಲಾ ಕಾಂಗ್ರೆಸ್‌ ಶಾಸಕರನ್ನು ಕಾಯುವ ಹೊಣೆಯನ್ನು  ಡಿಕೆಶಿ ಖುದ್ದು ವಹಿಸಿಕೊಂಡಿದ್ದಾರೆ. ಈ ಶಾಸಕರನ್ನು ವರ್ಮಾ ಟ್ರಾವಲ್ಸ್‌ನ KO1AB 2678 ಸಂಖ್ಯೆಯ...Kannada News Portal