ಬೆಂಗಳೂರು : ರಾಜ್ಯ ಶಿಕ್ಷಣ ಸಚಿವರಾದ ಎನ್​. ಮಹೇಶ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಮೊದಲ ಸಚಿವರ ವಿಕೆಟ್​ ಪತನವಾಗಿದೆ. ಬಹುಜನ ಸಮಾಜವಾದಿ ಪಕ್ಷ ವರಿಷ್ಠೆಯ ಮಾತಿಗೆ ರಾಜೀನಾಮೆ ನೀಡಿದ್ದಾರೆ.


ಜೆಡಿಎಸ್​ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜವಾದಿ ಪಕ್ಷ, ಗೆದ್ದ ಅಭ್ಯರ್ಥಿ ಎನ್​. ಮಹೇಶ್​ರಿಗೆ ಜೆಡಿಎಸ್​ – ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಜತೆ ಕೈಗೂಡಿಸುವಂತೆ ತಿಳಿಸಿತ್ತು. ಆದರೆ ಕಳೆದ ಕೆಲ ದಿನಗಳಿಂದ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಕಾಂಗ್ರೆಸ್​ ನಡುವಿನ ಭಿನ್ನಾಭಿಪ್ರಾಯ ಹೆಚ್ಚಾಗುತ್ತಲೇ ಬಂದಿತ್ತು.


ಕಾಂಗ್ರೆಸ್​ನ ರಾಷ್ಟ್ರೀಯ ನಾಯಕ ದಿಗ್ವಿಜಯ್​ ಸಿಂಗ್​ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಏಜೆಂಟ್​ ಎಂಬುದಾಗಿ ಮಾಯಾವತಿ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಮಹಾಘಟ್​ ಬಂಧನದಿಂದ ಮಾಯಾವತಿ ಹಿಂದೆ ಸರಿಯುವ ನಿರ್ಧಾರ ಮಾಡಿದ್ದರು.  ಎಲ್ಲಾ ಮಿತ್ರ ಪಕ್ಷಗಳಿಗೂ ಕಾಂಗ್ರೆಸ್​ ಪಕ್ಷವನ್ನು ದೇಶಾದ್ಯಂತ ಬುಡಸಮೇತ ನಿರ್ಮೂಲನೆ ಮಾಡುವಂತೆ ಕರೆ ನೀಡಿದ್ದರು.

ಮಾಯಾವತಿ ಹೇಳಿಕೆಯ ಸಂಬಂಧ ಪ್ರತಿಕ್ರಿಯೆ ನೀಡಿದ್ದ ಎನ್​ ಮಹೇಶ್​ ಕಾಂಗ್ರೆಸ್​ ಪಕ್ಷದ ವಿರುದ್ಧ ಛಾಟಿ ಬೀಸಿದ್ದರು. ಅದಾಗಿ ವಾರ ಕಳೆಯುವ ಮೊದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಿಎಸ್​ಪಿ ಕಾಂಗ್ರೆಸ್​ ಪಕ್ಷದಿಂದ ಅಧಿಕೃತವಾಗಿ ಮೈತ್ರಿಯನ್ನು ಕಡಿದುಕೊಂಡಿದೆ.

ಎನ್​ಡಿಎ ಮೈತ್ರಿಕೂಟವನ್ನು ಹೊರತುಪಡಿಸಿ ಎಲ್ಲಾ ಪ್ರಾದೇಶಿಕ ಮತ್ತು ಕಾಂಗ್ರೆಸ್​ ಪಕ್ಷ ಒಂದಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಸೋಲಿಸಲ ಪಣ ತೊಟ್ಟಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್​ ಮತ್ತು ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷದ ನಡುವೆ ಭಿನ್ನಮತ ಆರಂಭವಾಗಿತ್ತು. ಈ ಬಗ್ಗೆ ಮಾಯಾವತಿಯವರು ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದರು. ಕಾಂಗ್ರೆಸ್​ ಪಕ್ಷದ ಜತೆ ಮೈತ್ರಿ ಮಾಡಿಕೊಂಡರೆ ಉಳಿಗಾಲವಿಲ್ಲ ಎಂದು ಮಾಯಾವತಿ ಹೇಳಿದ್ದರು.

ಮಹಾ ಮೈತ್ರಿಯ ಬಗ್ಗೆ ಬಿಜೆಪಿ ಮುಖಂಡ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಸೋಮವಾರ ಮಾತನಾಡಿ, ಮಹಾ ಮೈತ್ರಿ ವಿಫಲವಾಗಿ ಯಾವುದೋ ಕಾಲವಾಗಿದೆ ಎಂದಿದ್ದರು. ಮಹಾ ಮೈತ್ರಿ ಹಲವು ಬಾರಿ ಪರೀಕ್ಷೆಗೆ ಒಳಪಟ್ಟಿದ್ದು, ಇದೊಂದು ವಿಫಲ ಯತ್ನ ಎಂದು ಮೂದಲಿಸಿದ್ದರು. ಆ ಮಾತು ಸತ್ಯವಾಗುವಂತೆ ಈಗ ಕರ್ನಾಟಕ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದ ಬಿಎಸ್​ಪಿ ಶಾಸಕ ಎನ್​ ಮಹೇಶ್​ ರಾಜೀನಾಮೆ ನೀಡಿದ್ದಾರೆ.


ರಾಜೀನಾಮೆ ನೀಡಿದ ನಂತರ ಮಾತನಾಡಿದ ಎನ್​ ಮಹೇಶ್​, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಜತೆಗೆ ಎನ್​ ಮಹೇಶ್​ ಸಮ್ಮಿಶ್ರ ಸರ್ಕಾರದ ಬಗ್ಗೆ ತಮಗ್ಯಾವುದೇ ಬೇಸರವಿಲ್ಲ ಎಂದಿದ್ದಾರೆ. “ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದು ಸುಳ್ಳು. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಶಿಕ್ಷಣ ಇಲಾಖೆಯಲ್ಲಿದ್ದ ನ್ಯೂನ್ಯತೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಮುಂದೆ ಈ ಸ್ಥಾನಕ್ಕೆ ಯಾರು ಬರುತ್ತಾರೋ ಅವರೂ ಒಳ್ಳೆಯ ಕೆಲಸವನ್ನು ಮುಂದುವರೆಸಲಿ ಎಂದು ಆಶಿಸುತ್ತೇನೆ,” ಎಂದರು.

ರಾಜೀನಾಮೆ ನೀಡುವ ಮುನ್ನ ಎನ್​ ಮಹೇಶ್​ ಬಿಎಸ್​ಪಿಯ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಖುದ್ದು ಮುಖ್ಯಸ್ಥೆ ಮಾಯಾವತಿ ಸೂಚನೆ ಮೇರೆಗೆ ಮಹೇಶ್​ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/10/mayawati-1.jpghttp://bp9news.com/wp-content/uploads/2018/10/mayawati-1-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು : ರಾಜ್ಯ ಶಿಕ್ಷಣ ಸಚಿವರಾದ ಎನ್​. ಮಹೇಶ್​ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸಮ್ಮಿಶ್ರ ಸರ್ಕಾರದ ಮೊದಲ ಸಚಿವರ ವಿಕೆಟ್​ ಪತನವಾಗಿದೆ. ಬಹುಜನ ಸಮಾಜವಾದಿ ಪಕ್ಷ ವರಿಷ್ಠೆಯ ಮಾತಿಗೆ ರಾಜೀನಾಮೆ ನೀಡಿದ್ದಾರೆ. ಜೆಡಿಎಸ್​ ಜೊತೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜವಾದಿ ಪಕ್ಷ, ಗೆದ್ದ ಅಭ್ಯರ್ಥಿ ಎನ್​. ಮಹೇಶ್​ರಿಗೆ ಜೆಡಿಎಸ್​ - ಕಾಂಗ್ರೆಸ್​ ಸಮ್ಮಿಶ್ರ ಸರ್ಕಾರದ ಜತೆ ಕೈಗೂಡಿಸುವಂತೆ ತಿಳಿಸಿತ್ತು. ಆದರೆ ಕಳೆದ...Kannada News Portal