ಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ  ಸರ್ಕಾರವನ್ನು  ಬೀಳಿಸಲು ಒಂದಲ್ಲಾ ಒಂದು ರಣತ್ರಂತ್ರವನ್ನು ರೂಪಿಸುತ್ತಿದ್ದಾರೆ  ಮಾಜಿ ಸಿಎಂ ಯಡಿಯೂರಪ್ಪ. ಈ ಬಾರಿ ದೊಡ್ಡದೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ.
ಬುಧವಾರ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯ ನಂತರ ಶಾಸಕರನೆಲ್ಲಾ ರೆಸಾರ್ಟ್​ಗೆ ಶಿಫ್ಟ್​ ಮಾಡಲು ಬಿ.ಎಸ್​.ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.  ಮೈತ್ರಿ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರ ರಚನೆಗೆ ಬಿಜೆಪಿ ತಯಾರಿ ನಡೆಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತವೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನ ಆಗುತ್ತದೆ ಎಂಬ ವಿಶ್ವಾಸದಲ್ಲಿರುವ ಬಿಜೆಪಿ ನಾಯಕರು, ಅದಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಆಪರೇಷನ್ ಹಸ್ತ, ಆಪರೇಷನ್ ತೆನೆಗೆ ಬಿಜೆಪಿ ಶಾಸಕರು ಒಳಗಾದದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಿರುವ ಬಿ.ಎಸ್​.ಯಡಿಯೂರಪ್ಪ ಅವರು ಅದಕ್ಕಾಗಿ ಬಿಜೆಪಿಯ ಎಲ್ಲ ಶಾಸಕರೂ ರೆಸಾರ್ಟ್​ಗೆ ಹೊರಡಲು ಸೂಚನೆ ಬಂದಿದೆ ಎಂದು ಹೇಳಲಾಗುತ್ತಿದೆ.

ರೆಸಾರ್ಟ್​ಗೆ ಹೋಗಲು ರೆಡಿಯಾಗಿ ಬರುವಂತೆ ಸೂಚನೆ  :

ಇದೇ ವಿಚಾರವಾಗಿ ಬಿಜೆಪಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆಯನ್ನು, ಬಿಜೆಪಿ ಜಿಲ್ಲಾ ಪ್ರಮುಖರು, ಜಿಲ್ಲಾಧ್ಯಕ್ಷರ ಸಭೆ ನಡೆಸಲು ನಿರ್ಧರಿಸಿತ್ತು. ಆದರೆ, ಆ ಸಭೆಯನ್ನು ಮಂಗಳವಾರದ ಬದಲಿಗೆ ಬುಧವಾರಕ್ಕೆ ನಿಗಧಿ ಪಡಿಸಲಾಗಿದೆ  ಹಾಗೂ ಸಭೆ ಮುಗಿದ ನಂತರ ನೇರವಾಗಿ ರೆಸಾರ್ಟ್​ಗೆ ಶಿಫ್ಟ್​ ಆಗುವ ಸಾಧ್ಯತೆಗಳು ಇದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಈ ವಿಚಾರ ಹರಿದಾಡುತ್ತಿದೆ.

ಇತ್ತ  ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಬಂಡಾಯದ ಬಿಸಿ, ಇನ್ನೂ ಬೂದಿ ಮುಚ್ಚಿದ ಕೆಂಡದಂತಿದೆ. ಕಾಂಗ್ರೆಸ್​ ಶಾಸಕರನ್ನು ಆಪರೇಷನ್ ಕಮಲ ಖೆಡ್ಡಾಗೆ ಬೀಳಿಸುವುದು ಮತ್ತು ಅವರ ರಾಜೀನಾಮೆ ಕೊಡಿಸುವ ಮೂಲಕ ಸರ್ಕಾರವನ್ನು  ಅಸ್ಥಿರಗೊಳಿಸುವ ತಂತ್ರ ಕಮಲ ನಾಯಕರದ್ದಾಗಿದೆ. ಬಿಜೆಪಿ ಸರ್ಕಾರ ರಚನೆ ಮಾಡುವುದು ಬಿ.ಎಸ್​.ಯಡಿಯೂರಪ್ಪ ಅವರ ಪ್ಲಾನ್​ ಆದರೆ. ಬಿಜೆಪಿ ಪ್ಲಾನ್​ಗೆ ಜೆಡಿಎಸ್​ ಮತ್ತು ಕಾಂಗ್ರೆಸ್​ ಪ್ರತ್ಯುತ್ತರ ನೀಡಿದೆ. ಬಿಜೆಪಿಯವರು ಕಾಂಗ್ರೆಸ್​, ಜೆಡಿಎಸ್​ನಿಂದ ಒಬ್ಬ ಶಾಸಕರನ್ನು ಕರೆದುಕೊಂಡು ಹೋದರೆ, ನಾವು ಅವರ ಪಕ್ಷದಿಂದ ಇಬ್ಬರು ಶಾಸಕರನ್ನು ಕರೆತರುತ್ತೇವೆ ಎಂದು ಎರಡೂ ಪಕ್ಷದವರೂ ಸವಾಲು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೆಲ್ಲ ಕಾಂಗ್ರೆಸ್​ ಮತ್ತು ಜೆಡಿಎಸ್​ ನಾಯಕರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳಲು ಯಡಿಯೂರಪ್ಪ ಅವರನ್ನೆಲ್ಲಾ ರೆಸಾರ್ಟ್​ಗೆ ಶಿಫ್ಟ್​ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.  ಒಟ್ಟಿನಲ್ಲಿ ರಾಜ್ಯ ರಾಜಕೀಯ ತೀವ್ರ ಕುತೂಹಲ ಕೆರಳಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಭಾರೀ ಬದಲಾವಣೆಗೆ ಸಾಕ್ಷಿಯಾಗುವ ಮುನ್ಸೂಚನೆ ಕಂಡು ಬರುವ ಸಾಧ್ಯತೆಗಳಿವೆ.

 

Please follow and like us:
0
http://bp9news.com/wp-content/uploads/2018/09/bjp-mlas.pnghttp://bp9news.com/wp-content/uploads/2018/09/bjp-mlas-150x150.pngBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು : ಕಾಂಗ್ರೆಸ್-ಜೆಡಿಎಸ್ ಮೈತ್ರಿ  ಸರ್ಕಾರವನ್ನು  ಬೀಳಿಸಲು ಒಂದಲ್ಲಾ ಒಂದು ರಣತ್ರಂತ್ರವನ್ನು ರೂಪಿಸುತ್ತಿದ್ದಾರೆ  ಮಾಜಿ ಸಿಎಂ ಯಡಿಯೂರಪ್ಪ. ಈ ಬಾರಿ ದೊಡ್ಡದೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿ ಸದ್ದು ಮಾಡುತ್ತಿವೆ. ಬುಧವಾರ ಪಕ್ಷದ ಶಾಸಕಾಂಗ ಸಭೆ ಕರೆಯಲಾಗಿದ್ದು, ಸಭೆಯ ನಂತರ ಶಾಸಕರನೆಲ್ಲಾ ರೆಸಾರ್ಟ್​ಗೆ ಶಿಫ್ಟ್​ ಮಾಡಲು ಬಿ.ಎಸ್​.ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.  ಮೈತ್ರಿ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರ ರಚನೆಗೆ ಬಿಜೆಪಿ ತಯಾರಿ ನಡೆಸುತ್ತಿದೆ...Kannada News Portal