ಬೆಂಗಳೂರು : ಗೋಸಂರಕ್ಷಣೆಯ ಕುರಿತಾಗಿ ಬದ್ಧತೆ ಹೊಂದಿರುವ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು Twitter ಮೂಲಕ ಸಮಸ್ತ ಜನತೆಗೆ ಕರೆನೀಡಿದ್ದಾರೆ.

“ಮತದಾನವನ್ನು ಸರಿಯಾಗಿ ಮಾಡಿದರೆ- ನಾಡನ್ನು ಒಳಿತು ಆಳುವಂತೆ- ಜನವೆಲ್ಲ ಸುಖದಲ್ಲಿ ಬಾಳುವಂತೆ- ವಿಶ್ವರಂಗದಲ್ಲಿ ನಮ್ಮ ರಾಷ್ಟ್ರವು, ರಾಷ್ಟ್ರರಂಗದಲ್ಲಿ ನಮ್ಮ ರಾಜ್ಯವು ರಾಮರಾಜ್ಯವಾಗಿ ರಾರಾಜಿಸುವಂತೆ ಆಗುವಲ್ಲಿ ನಾವು ಕಾರಣರಾಗಬಹುದು. ಅಂತೆಯೇ, ಮತದಾನವನ್ನು ಮಾಡದಿದ್ದರೆ ಅಥವಾ ಸಮರ್ಪಕವಾಗಿ ಮಾಡದಿದ್ದರೆ- ಕೆಡುಕು ನಾಡನ್ನೇ ಕೆಡಿಸಲು, ಜನಸುಖದ ಸರ್ವನಾಶವೇ ಘಟಿಸಲು, ರಾಜ್ಯ-ರಾಷ್ಟ್ರಗಳ ಮರ್ಯಾದೆಗೆ ಮಸಿ ಬಳಿಯಲೂ ಕಾರಣರು ನಾವೇ ಆಗುತ್ತೇವೆ” ಎಂದು ತಮ್ಮ ಬ್ಲಾಗಿನಲ್ಲಿ ಮತದಾನದ ಔಚಿತ್ಯವನ್ನು ತಿಳಿಸಿ ಮತಜಾಗೃತಿ ಮೂಡಿಸಿದ್ದಾರೆ.

ಮತದಾನವು ಪ್ರತಿಯೊಬ್ಬ ಪ್ರಜೆಯ ಆದ್ಯಕರ್ತವ್ಯ: ಸಮಸ್ತ ರಾಜ್ಯದ/ದೇಶದ ಒಳಿತು-ಕೆಡುಕುಗಳು ಮತದಾನವನ್ನವಲಂಬಿಸಿವೆ, ಎಂದರೆ ನಮ್ಮನ್ನೇ ಅವಲಂಬಿಸಿವೆ! ಆದುದರಿಂದ ನೀವೆಲ್ಲರೂ ಮತದಾನವನ್ನು ತಪ್ಪದೇ ಮಾಡಬೇಕು ಮತ್ತು ಯೋಗ್ಯರಿಗೇ ಮಾಡಬೇಕು ಎಂದು ಕರೆನೀಡಿರುವ ಶ್ರೀಗಳು, ಗೋಸಂರಕ್ಷಣೆಯ ಕುರಿತಾಗಿ ಅಭ್ಯರ್ಥಿಯ ಬದ್ಧತೆಯನ್ನು ಖಚಿತಪಡಿಸಿಕೊಂಡು ಆನಂತರ ಯೋಗ್ಯ ಅಭ್ಯರ್ಥಿಗೆ ಮತಚಲಾವಣೆ ಮಾಡುವಂತೆ Tweet ಮೂಲಕ ತಿಳಿಸಿದ್ದಾರೆ.

” ಮತದಾನದ ಮೊದಲು ನಿಮಗಿದು ಅಂತಿಮ ಸಂದೇಶ: ಮತವೀಯುವ ಮೊದಲು ಅಭ್ಯರ್ಥಿಯ ಗೋರಕ್ಷಣೆಯ ಬದ್ಧತೆಯನ್ನು ಖಚಿತಪಡಿಸಿಕೊಳ್ಳಿ.. ” ಎಂದು ಸಂದೇಶ ರವಾನಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/sfg-3.pnghttp://bp9news.com/wp-content/uploads/2018/05/sfg-3-150x150.pngBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು : ಗೋಸಂರಕ್ಷಣೆಯ ಕುರಿತಾಗಿ ಬದ್ಧತೆ ಹೊಂದಿರುವ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಶ್ರೀರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು Twitter ಮೂಲಕ ಸಮಸ್ತ ಜನತೆಗೆ ಕರೆನೀಡಿದ್ದಾರೆ. 'ಮತದಾನವನ್ನು ಸರಿಯಾಗಿ ಮಾಡಿದರೆ- ನಾಡನ್ನು ಒಳಿತು ಆಳುವಂತೆ- ಜನವೆಲ್ಲ ಸುಖದಲ್ಲಿ ಬಾಳುವಂತೆ- ವಿಶ್ವರಂಗದಲ್ಲಿ ನಮ್ಮ ರಾಷ್ಟ್ರವು, ರಾಷ್ಟ್ರರಂಗದಲ್ಲಿ ನಮ್ಮ ರಾಜ್ಯವು ರಾಮರಾಜ್ಯವಾಗಿ ರಾರಾಜಿಸುವಂತೆ ಆಗುವಲ್ಲಿ ನಾವು ಕಾರಣರಾಗಬಹುದು. ಅಂತೆಯೇ, ಮತದಾನವನ್ನು ಮಾಡದಿದ್ದರೆ ಅಥವಾ ಸಮರ್ಪಕವಾಗಿ ಮಾಡದಿದ್ದರೆ- ಕೆಡುಕು ನಾಡನ್ನೇ ಕೆಡಿಸಲು, ಜನಸುಖದ ಸರ್ವನಾಶವೇ ಘಟಿಸಲು,...Kannada News Portal