ನವದೆಹಲಿ: ಸಾಗರೋತ್ತರ ಸಾಲ ಹೆಚ್ಚಳ ಮತ್ತು ವಿದೇಶಿ ವಸ್ತುಗಳ ಆಮದಿನ ಮೇಲಿನ ಚಾಲ್ತಿ ಖಾತೆಯನ್ನು (ಸಿಎಡಿ) ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ದೇಶದ ರೂಪಾಯಿ ಮೌಲ್ಯದ ಕುಸಿತದ ನಡುವೆ, ದೇಶದ ಆರ್ಥಿಕತೆಯನ್ನು ಪರಿಗಣನೆಗೆ ತೆಗೆದುಕೊಂಡು ಪರಿಶೀಲನೆಗೆ ಗಮನ ಹರಿಸಲಾಗುವುದು ಎಂದಿದ್ದಾರೆ.ಸಿಎಡಿ ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ವಿದೇಶಿ ವಿನಿಮಯದ ಒಳಹರಿವಿನ ಹೆಚ್ಚಳದ ಮೇಲೆ ಚಾಲ್ತಿ ಖಾತೆ ವಿಸ್ತರಿಸಲಾಗುವುದು. ರಫ್ತುದಾರರನ್ನು ಉತ್ತೇಜಿಸಲು ಹಾಗೂ ಅನಗತ್ಯ ಆಮದುಗಳನ್ನು ನಿರ್ಬಂಧಿಸಲು ಕೇಂದ್ರ ಕ್ರಮ ಕೈಗೊಂಡಿದೆ.

ಆದರೆ ಯಾವ ವಸ್ತುಗಳ ಮೇಲೆ ನಿರ್ಬಂಧ ವಿಧಿಸಲಾಗುವುದು ಎಂಬುದರ ಬಗ್ಗೆ ಅರುಣ್ ಜೇಟ್ಲಿ ಬಹಿರಂಗಪಡಿಸಲಿಲ್ಲ. ಸಿಎಡಿಯಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ಕೇಂದ್ರ ಕ್ರಮ ತೆಗೆದುಕೊಳ್ಳುತ್ತದೆ. ಆಮದನ್ನು ಕಡಿತ ಮಾಡಲು ಮತ್ತು ರಫ್ತು ಹೆಚ್ಚಿಸಲು ಆಯಾಯ ಸರಕುಗಳಿಗೆ ಸಂಬಂಧಿಸಿದ ಸಚಿವಾಲಯಗಳ ಜೊತೆ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/09/new-year-eve.jpghttp://bp9news.com/wp-content/uploads/2018/09/new-year-eve-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ: ಸಾಗರೋತ್ತರ ಸಾಲ ಹೆಚ್ಚಳ ಮತ್ತು ವಿದೇಶಿ ವಸ್ತುಗಳ ಆಮದಿನ ಮೇಲಿನ ಚಾಲ್ತಿ ಖಾತೆಯನ್ನು (ಸಿಎಡಿ) ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಮತ್ತು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location !=...Kannada News Portal