ಮಹದೇವಪುರ : ಮಹದೇವಪುರ ಪೋಲಿಸರು 200 ಜನ ರೈತನ್ನು ಹಾಗೂ ಪಾಲಿಕೆ ಸದಸ್ಯರನ್ನು ಬಂಧನ ಮಾಡಿ ಕೆಲವು ಸಮಯದ ನಂತರ ಬಿಡುಗಡೆ ಮಾಡಿದರೆ‌‌.

ಉಳಿಮೆ ಭೂಮಿಗಾಗಿ ರೈತರ ಪ್ರತಿಭಟನೆ

ಕಳೆದ ಏಳು ದಶಕಗಳಿಂದ ಉಳಿಮೆ ಮಾಡುತ್ತಿದ್ದ ಭೂಮಿಗಾಗಿ ಬಡ ರೈತರು, ದಿನ್ನೂರಿನ  ದಲಿತ ಕುಟುಂಬದವರು ದನಕರುಗಳ ಸಮೇತ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದರು.

ದನಕರುಗಳನ್ನು ಹಿಡಿದುಕೊಂಡು ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿರುವ ಬೆಂಗಳೂರಿನ ಕಾಡುಗುಡಿಯ ದಿನ್ನೂರು ಪ್ಲಾಂಟೇಷನ್ ನಿವಾಸಿಗಳು ಇವರೆಲ್ಲ ಕಳೆದ 70 ವರ್ಷಗಳಿಂದ ಕಾಡುಗುಡಿ ದಿನ್ನೂರು ಪ್ಲಾಂಟೇಷನ್ ಜಾಗದಲ್ಲಿ ಉಳುಮೆ, ವ್ಯವಸಾಯ ಮಾಡಿಕೊಂಡು ಬರುತ್ತಿದ್ದರು. ಇವರ ಬಳಿ ಕಂಪ್ಯೂಟರ್ ದಾಖಲಾತಿ ಹೊರತು ಪಡಿಸಿ ಎಲ್ಲಾ ದಾಖಲೆಗಳಿದ್ದು, ತಮ್ಮ ಭೂಮಿಗೆ, ನಿವೇಷನಗಳಿಗೆ ಹಕ್ಕುಪತ್ರ ನೀಡುವಂತೆ ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗದ ಕಾರಣ ಇಂದು ನೂರಾರು ಗ್ರಾಮಸ್ಥರು ದನಕರುಗಳೊಂದಿಗೆ ಸಿಎಂ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದರು. ಇವರ ಪ್ರತಿಭಟನೆಗೆ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಮುನಿಸ್ವಾಮಿ ಸಾಥ್ ನೀಡಿದ್ದರು.

ಇನ್ನು ಬೆಳಗ್ಗೆ ದಿನ್ನೂರಿನಿಂದ ಹೊರಟ ಪ್ರತಿಭಟನಾ ಜಾಥಾ ವೈಟ್ ಫೀಲ್ಡ್‌’ನ  ಡೆಕ್ಯಾತ್ಲಾನ್ ಬಳಿ ಬರುವ ವೇಳೆಗೆ ಪೊಲೀಸರು ಇವರನ್ನು ತಡೆದು ನಿಲ್ಲಿಸಿದರು. ಜೊತೆಗೆ ತಮ್ಮ ಬೇಡಿಕೆ ವಿಷಯವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸುವುದಾಗಿ ಪೊಲೀಸರು ತಿಳಿಸಿದರೂ ರೈತರು ತಮ್ಮ ಹೋರಾಟ ಮುಂದುವರೆಸಿದರು. ಕೊನೆಗೆ ಪಟ್ಟು ಬಿಡದ ಪ್ರತಿಭಟನಾ ರೈತರು ಜಾಥಾವನ್ನು ಮುಂದುವರೆಸಲು ಮುಂದಾದಾಗ ಪಾಲಿಕೆ ಸದಸ್ಯ ಮುನಿಸ್ವಾಮಿ ಸೇರಿದಂತೆ ನೂರಾರು ಮಹಿಳಾ ಮತ್ತು ಪುರುಷರನ್ನು ಕಾನೂನು ಅಡಿಯಲ್ಲಿ ಬಂದಿಸಿದ್ದಾರೆ.

ಇನ್ನು ಈ ವೇಳೆ ಪೊಲೀಸರ ಹಾಗೂ ಪ್ರತಿಭಟನಾ ರೈತರ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಉದ್ವಿಘ್ನ ಪರಿಸ್ಥಿತಿ ಉಂಟಾಗಿತ್ತು. ಪಾಲಿಕೆ ಸದಸ್ಯರನ್ನು ಹಾಗೂ ರೈತ ಮುಖಂಡರನ್ನು ಬಂಧಿಸಿ ಕರೆದೊಯ್ಯುತ್ತಿದ್ದ ವಾಹನವನ್ನು ಮಹಿಳೆಯರು ತಡೆದು ನಿಲ್ಲಿಸಲು ಯತ್ನಿಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.

ಒಟ್ಟಾರೆ ಅವರೆಲ್ಲಾ ಏಳು ದಶಕಗಳಿಂದ ಹುಳುಮೆ ಮಾಡಿ ಇದೀಗ ಆ ಜಾಗಕ್ಕಾಗಿ ಹೋರಾಟ ನಡೆಸುತ್ತಿದ್ದು, ಮುಂದೆ ಯಾವ ರೀತಿ ನ್ಯಾಯ ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸುದ್ದಿ: ಪರಿಸರ ಮಂಜು, ಮಹದೇವಪುರ, ಕಾಡುಗುಡಿ.

Please follow and like us:
0
http://bp9news.com/wp-content/uploads/2018/03/BP9-News-Web-Portal-101.jpeghttp://bp9news.com/wp-content/uploads/2018/03/BP9-News-Web-Portal-101-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಮಹದೇವಪುರ : ಮಹದೇವಪುರ ಪೋಲಿಸರು 200 ಜನ ರೈತನ್ನು ಹಾಗೂ ಪಾಲಿಕೆ ಸದಸ್ಯರನ್ನು ಬಂಧನ ಮಾಡಿ ಕೆಲವು ಸಮಯದ ನಂತರ ಬಿಡುಗಡೆ ಮಾಡಿದರೆ‌‌. ಉಳಿಮೆ ಭೂಮಿಗಾಗಿ ರೈತರ ಪ್ರತಿಭಟನೆ ಕಳೆದ ಏಳು ದಶಕಗಳಿಂದ ಉಳಿಮೆ ಮಾಡುತ್ತಿದ್ದ ಭೂಮಿಗಾಗಿ ಬಡ ರೈತರು, ದಿನ್ನೂರಿನ  ದಲಿತ ಕುಟುಂಬದವರು ದನಕರುಗಳ ಸಮೇತ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದರು. ದನಕರುಗಳನ್ನು ಹಿಡಿದುಕೊಂಡು ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ನಡೆಸಿಕೊಂಡು ಬರುತ್ತಿರುವ ಬೆಂಗಳೂರಿನ ಕಾಡುಗುಡಿಯ ದಿನ್ನೂರು ಪ್ಲಾಂಟೇಷನ್ ನಿವಾಸಿಗಳು ಇವರೆಲ್ಲ...Kannada News Portal