ಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​ ವಿಷಯಕ್ಕೆ ಈಗ ಹೈ ಕಮಾಂಡ್​ ಪ್ರವೇಶಿಸಿದ್ದು, ಮೈತ್ರಿ ಸರ್ಕಾರದ ಹಿತದೃಷ್ಟಿಯಿಂದ ಸುಮ್ಮನಿರುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಖಡಕ್​ ಸೂಚನೆ ನೀಡಿದೆ.

ಪಿಎಲ್ ಡಿ ಬ್ಯಾಂಕ್ ಚುನಾವಣೆ ವಿಚಾರವಾಗಿ ಶುರವಾಗಿರುವ ಬೆಳಗಾವಿ ಕೈ ನಾಯಕರ ಜಗಳ ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಮೈತ್ರಿ ಸರ್ಕಾರದ ಬುಡವನ್ನೇ ಅಲುಗಾಡಿಸುತ್ತಿದೆ. ಈ ದೃಷ್ಟಿಯಿಂದ ಈ ವಿಷಯವನ್ನು ಸ್ವ ಪ್ರತಿಷ್ಟೆಯಾಗಿ ತೆಗೆದುಕೊಳ್ಳದೇ ಸರ್ಕಾರದ ಹಿತವನ್ನು ಕಾಪಾಡುವುದು ಮುಖ್ಯವಾಗಿದೆ. ನಿಮ್ಮ ಜಗಳದಿಂದಾಗಿ ಮೈತ್ರಿ ಸರ್ಕಾರಕ್ಕೆ ಧಕ್ಕೆ ತರಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಕೂಡ ಎಚ್ಚರಿಕೆ ನೀಡಿದ್ದಾರೆ.

ಪಿಎಲ್​ಡಿ  ಚುನಾವಣೆ ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ಚುನಾವಣೆ ನಡೆಯಬೇಕು. ಇದಕ್ಕೆ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಮುಂದಾಗಬಾರದು ಎಂದು ಕೂಡ ಹೆಬ್ಬಾಳ್ಕರ್​ಗೆ ಸೂಚನೆ ನೀಡಲಾಗಿದೆ. ಈ ಮೂಲಕ ಈ ಕಿತ್ತಾಟದಲ್ಲಿ ಪಟ್ಟು ಬಿಡದ ಜಾರಕಿಹೊಳಿ ಸಹೋದರರಿಗೆ ಜಯಸಿಕ್ಕಂತೆ ಆಗಿದೆ.ಚುನಾವಣೆಯಲ್ಲಿ ಯಾವುದೇ ಅನಾಹುತಕ್ಕೆ ಕಾರಣವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಹೈ ಕಮಾಂಡ್​ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೆಳಗಾವಿಗೆ ಬಂದಿದ್ದು,ಸಂಧಾನ ಸಭೆ ನಡೆಸಿದ್ದಾರೆ.

ಪಿಎಲ್​ಡಿ ಬ್ಯಾಂಕ್​ ಚುನಾವಣೆ ಸೇರಿದಂತೆ ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆ ಸೇರಿದಂತೆ ನನ್ನ ಕ್ಷೇತ್ರದಲ್ಲಿ ಜಾರಕಿಹೊಳಿ ಸಹೋದರರು ಅನಗತ್ಯವಾಗಿ ಮೂಗು ತೂರಿಸಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಶಾಸಕಿ ಹೆಬ್ಬಾಳ್ಕರ್​ ಕೈ ನಾಯಕರ ಮುಂದೆ ದೂರು ನೀಡಿದ್ದರು.ಕಳೆದ ವಾರ ನಡೆದ ರಾಜ್ಯ ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ವೇಣುಗೋಪಾಲ್​ ಇವರ ಕಿತ್ತಾಟ ಬಗೆಹರಿಸಲು ಮುಂದಾಗಿದ್ದರು. ಅದು ಸಾಧ್ಯವಾಗಿರಲಿಲ್ಲ.

ಹೆಬ್ಬಾಳ್ಕರ್​ ಬೆನ್ನಿಗೆ ಪ್ರಭಾವಿ ಸಚಿವ ಡಿ.ಕೆ.ಶಿವಕುಮಾರ್​ ನಿಂತಾಗ ವಿವಾದ ಮತ್ತಷ್ಟು ತಾರಕಕ್ಕೆ ಏರಿತು.  “ಬೆಳಗಾವಿ ವಿಷಯಕ್ಕೆ ಯಾರಾದರೂ ತಲೆ ಹಾಕಿದರೆ, ಕಾಂಗ್ರೆಸ್​ಗೆ ರಾಜೀನಾಮೆ ನೀಡಿ ಹೊರಹೋಗಬೇಕಾಗುತ್ತದೆ. ಜೊತೆಗೆ 12 ಮಂದಿ ಶಾಸಕರನ್ನು ಕರೆದುಕೊಂಡು ಹೋಗುತ್ತೇನೆ” ಎಂದು ರಮೇಶ್​ ಜಾರಕಿಹೊಳಿ ಎಚ್ಚರಿಕೆ ನೀಡಿದ್ದರು.

ಮೈತ್ರಿ ಸರ್ಕಾರ ಉರುಳಿಸಿ, ಮತ್ತೆ ಅಧಿಕಾರ ಹಿಡಿಯಲು ಹವಣಿಸುತ್ತಿರುವ ಬಿಜೆಪಿ, ಕಾಂಗ್ರೆಸ್​ನ ಆಂತರಿಕ ಭಿನ್ನಮತದ ಲಾಭ ಪಡೆಯಲು ಯತ್ನಿಸುತ್ತಿದೆ. ತೆರೆ ಮರೆಯಲ್ಲೇ ಜಾರಕಿಹೊಳಿ ಸಹೋದರರು ಮತ್ತು ಇತರ 12 ಶಾಸಕರನ್ನು ಸೆಳೆದುಕೊಳ್ಳಲು ಯತ್ನಿಸುತ್ತಿದೆ. ಅದಕ್ಕಾಗಿ  ಜಾರಕಿ ಹೊಳಿಗೆ ಡಿಸಿಎಂ ಆಫರ್ ಹಾಗೂ 10 ಕೋಟಿ ನೀಡಲು​ ಕೂಡ ಬಿಜೆಪಿ ಮುಂದಾಗಿದೆ ಎಂಬ ಮಾತು ಕೂಡ ಕೇಳಿ ಬಂದಿತ್ತು.ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಕಾಂಗ್ರೆಸ್​ ಹೈ ಕಮಾಂಡ್​ ಈ ವಿಷಯಕ್ಕೆ ಈಗ ಮಧ್ಯ ಪ್ರವೇಶಿಸಿದ್ದು ಮೈತ್ರಿ ಸರ್ಕಾರದ ಉಳಿವಿಗೆ ಮುಂದಾಗಿದ್ದು,ಯಶಸ್ವಿಯಾಗುವ ಲಕ್ಷಣ ಕಾಣುತ್ತಿದೆ.

Please follow and like us:
0
http://bp9news.com/wp-content/uploads/2018/09/588.jpghttp://bp9news.com/wp-content/uploads/2018/09/588-150x150.jpgBP9 Bureauಪ್ರಮುಖಬೆಳಗಾವಿರಾಜಕೀಯಬೆಂಗಳೂರು: ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್​ ವಿಷಯಕ್ಕೆ ಈಗ ಹೈ ಕಮಾಂಡ್​ ಪ್ರವೇಶಿಸಿದ್ದು, ಮೈತ್ರಿ ಸರ್ಕಾರದ ಹಿತದೃಷ್ಟಿಯಿಂದ ಸುಮ್ಮನಿರುವಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಖಡಕ್​ ಸೂಚನೆ ನೀಡಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಪಿಎಲ್ ಡಿ ಬ್ಯಾಂಕ್ ಚುನಾವಣೆ...Kannada News Portal