ಬೆಂಗಳೂರು: ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾಗಿ ಎಂ.ಬಿ ಪಾಟೀಲ್‌ ಅವರಿಗೆ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಮೇಲೆ ಶಾಸಕ ಎಂ.ಬಿ ಪಾಟೀಲ್‌ ಮುನಿಸಿಕೊಂಡಿದ್ದಾರೆ. ಇವರ ಮುನಿಸನ್ನ ಶಮನ ಮಾಡಲು ಹಲವು ನಾಯಕರಾದಿಯಾಗಿ, ಕುಮಾರಸ್ವಾಮಿ, ಕಾಂಗ್ರೆಸ್​​ ರಾಷ್ಟ್ರಾಧ್ಯಕ್ಷರಾದ ರಾಹುಲ್​​ ಗಾಂಧಿ ಕೂಡಾ ಪ್ರಯತ್ನ ಪಟ್ಟರು ಆಗಲಿಲ್ಲ.

ಅತೃಪ್ತ ಶಾಸಕರ ನೇತೃತ್ವ ವಹಿಸಿರೋ ಎಂ.ಬಿ ಪಾಟೀಲ್‌ರನ್ನ ಸಮಾಧಾನಗೊಳಿಸಲು ಕಾಂಗ್ರೆಸ್​​​ ಇನ್ನಿಲ್ಲದ ಪ್ರಯತ್ನ ಮುಂದುವರೆಸಿದ್ದು, ಒಂದು ಮಾಸ್ಟರ್​​ ಪ್ಲ್ಯಾನ್​​ ಮಾಡಿದೆ.ಈಗ ಎಂ.ಬಿ ಪಾಟೀಲರನ್ನ ಸಮಾಧಾನ ಮಾಡಲು ಪಾಟೀಲ್​​​ ಮನೆಗೆ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿದ್ದಾರೆ.

ಆದರೆ ಎಂ.ಬಿ ಪಾಟೀಲರ ಜೊತೆ ಮಾತನಾಡಲು ಅಲ್ಲ. ಬದಲಾಗಿ ಅವರ  ಪತ್ನಿ  ಆಶಾ ಪಾಟೀಲ್ ಜೊತೆ‌ ಸಚಿವ ರಮೇಶ್ ಜಾರಕಿ ಹೊಳಿ ಚರ್ಚೆ ನಡೆಸಿದ್ದಾರೆ.  ಎಂ.ಬಿ ಪಾಟೀಲ್‌ ಅವರಿಗೆ  ಹೇಳಿ, ಎರಡನೇ ಬಾರಿಯ ಸಚಿವ ಸಂಪುಟ ವಿಸ್ತರಣೆ ವೇಳೆ ಅವರಿಗೆ ಸ್ಥಾನ ಸಿಗಲಿದೆ. ಯಾವುದೇ ದುಡುಕಿನ‌ ನಿರ್ಧಾರವನ್ನು ಕೈ ಗೊಳ್ಳದಂತೆ ತಿಳಿಸಿ ಎಂದು ರಮೇಶ್ ಜಾರಕಿ ಹೊಳಿ‌ ಆಶಾ ಪಾಟೀಲ್‌ಗೆ ಮನವಿ ಮಾಡಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್​​ ಎಂ.ಬಿ ಪಾಟೀಲರನ್ನ ಸಮಾಧಾನ ಮಾಡಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದು, ಈಗ ಎಂ.ಬಿ ಪಾಟೀಲರ ಪತ್ನಿ ಮೂಲಕ ಪಾಟೀಲ್​​ ಮುನಿಸಿಗೆ ಮುಲಾಮು ನೀಡಲು ಮುಂದಾಗಿದ್ದು, ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆ.

 

 

 

Please follow and like us:
0
http://bp9news.com/wp-content/uploads/2018/06/08bgvijayapuraGHF2KF8BO3jpgjpg.jpghttp://bp9news.com/wp-content/uploads/2018/06/08bgvijayapuraGHF2KF8BO3jpgjpg-150x150.jpgBP9 Bureauಪ್ರಮುಖರಾಜಕೀಯವಿಜಯಪುರಬೆಂಗಳೂರು: ರಾಜ್ಯ ಸರ್ಕಾರದ ನೂತನ ಸಚಿವ ಸಂಪುಟ ರಚನೆಯಾಗಿ ಎಂ.ಬಿ ಪಾಟೀಲ್‌ ಅವರಿಗೆ ಸಚಿವಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್​​ ಮೇಲೆ ಶಾಸಕ ಎಂ.ಬಿ ಪಾಟೀಲ್‌ ಮುನಿಸಿಕೊಂಡಿದ್ದಾರೆ. ಇವರ ಮುನಿಸನ್ನ ಶಮನ ಮಾಡಲು ಹಲವು ನಾಯಕರಾದಿಯಾಗಿ, ಕುಮಾರಸ್ವಾಮಿ, ಕಾಂಗ್ರೆಸ್​​ ರಾಷ್ಟ್ರಾಧ್ಯಕ್ಷರಾದ ರಾಹುಲ್​​ ಗಾಂಧಿ ಕೂಡಾ ಪ್ರಯತ್ನ ಪಟ್ಟರು ಆಗಲಿಲ್ಲ. ಅತೃಪ್ತ ಶಾಸಕರ ನೇತೃತ್ವ ವಹಿಸಿರೋ ಎಂ.ಬಿ ಪಾಟೀಲ್‌ರನ್ನ ಸಮಾಧಾನಗೊಳಿಸಲು ಕಾಂಗ್ರೆಸ್​​​ ಇನ್ನಿಲ್ಲದ ಪ್ರಯತ್ನ ಮುಂದುವರೆಸಿದ್ದು, ಒಂದು ಮಾಸ್ಟರ್​​ ಪ್ಲ್ಯಾನ್​​ ಮಾಡಿದೆ.ಈಗ ಎಂ.ಬಿ...Kannada News Portal