ಮಹದೇವಪುರ: ಪದವಿ, ಆಸ್ಪತ್ರೆ ಹಾಗೂ ಕಾಲೇಜು ತೆರೆಯುವುದು ಲಾಭದಾಯಕ ಹುದ್ದೆಯಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.ಭಾನುವಾರದ ರಜೆದಿನಂದೊಂದು  ವರ್ತೂರು-  ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿನ ಸಿದ್ದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಡಯಾಲಿಸಿಸ್ ಮತ್ತು ರೋಗನಿರ್ಣಯ ಕೇಂದ್ರ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು.

ವೈದ್ಯಕೀಯ ಕ್ಷೇತ್ರದಲ್ಲಿ  ಪದವಿ ಪಡೆಯುವುದು, ಆಸ್ಪತ್ರೆ ತೆರೆಯುವುದು ಹಾಗೂ ಮೆಡಿಕಲ್ ಕಾಲೇಜು ತೆರೆಯುವುದು  ಲಾಭದಾಯಕ ಹುದ್ದೆಯಲ್ಲ. ಖಾಸಗಿ ಆಸ್ಪತ್ರೆಯ ಉಪಕರಣಗಳು ಸಾಮಾನ್ಯವಾಗಿ ಹೆಚ್ಚುದಾರದಲ್ಲಿರುತ್ತಾದೆ. ಇದು ಅತ್ಯಾಧುನಿಕ ಸೌಲಭ್ಯ ಹೊಂದಿರುವ ಡಯಾಲಿಸಿಸ್ ಮತ್ತು ರೋಗನಿರ್ಣಯ ಕೇಂದ್ರವಾಗಿದೆ. ಈ ಭಾಗದಲ್ಲಿ ಇಂತಹ ಉತ್ತಮ ಕೇಂದ್ರ ಪ್ರಾರಂಭವಾಗಿರುವುದು ಜನಸಾಮಾನ್ಯರಿಗೆ ವಿವಿಧ ಆರೋಗ್ಯ ತಪಾಸಣೆ ಪರೀಕ್ಷೆ ಮಾಡುವ ಹೆಚ್ಚು ಉಪಯುಕ್ತ ಕೇಂದ್ರವಾಗಿದೆ ಜೊತೆಗೆ ಬಡವರಿಗೆ ರೀಯಾಹಿತಿದರದಲ್ಲಿ ಚಿಕಿತ್ಸೆ ನೀಡಿ ಮುಂದಿನ ದಿನಗಳಲ್ಲಿ ಒಂದು ಆಸ್ಪತ್ರೆಯನ್ನು ಪ್ರಾರಂಭಿಸಿ ಎಂದು ಡಾ. ಶೈಲಜಾ ರವರಿಗೆ ಶುಭ ಕೊರಿದರು‌.

ಇದೇವೇಳೆ ಕೇಂದ್ರ ಉದ್ಘಾಟನೆ ಸಮಯದಲ್ಲಿ ಸ್ಥಳೀಯ  ಮುಖಂಡರಾದ ರಾಜಾರೆಡ್ಡಿ, ಹೂಡಿ ವಿಜಯ್ ಕುಮಾರ್, ಸುರೇಶ್,  ಭೀಮಾ ಚಿನ್ನದ ಮಾಳಿಕೆ ಮುಖ್ಯಸ್ಥ ಡಾ. ಬಿ. ಗೋವಿಂದನ್ ,  ತ್ರಿಮೂರ್ತಿರಾಜು, ವಿ.ಮುನಿರಾಜು, ಬಾಲರಾಜು, ಜಯ, ಆರತಿ, ಡಾ. ಶೀಲಾ ಪ್ರವೀಣ್, ಡಾ.ಗುರುರಾಜ್ ರಾವ್, ಗೌತಮ್ ರಾಜು, ಮುಂತಾದವರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/03/BP9-News-Web-Portal-102.jpeghttp://bp9news.com/wp-content/uploads/2018/03/BP9-News-Web-Portal-102-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಮಹದೇವಪುರ: ಪದವಿ, ಆಸ್ಪತ್ರೆ ಹಾಗೂ ಕಾಲೇಜು ತೆರೆಯುವುದು ಲಾಭದಾಯಕ ಹುದ್ದೆಯಲ್ಲ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.ಭಾನುವಾರದ ರಜೆದಿನಂದೊಂದು  ವರ್ತೂರು-  ವೈಟ್ ಫೀಲ್ಡ್ ಮುಖ್ಯರಸ್ತೆಯಲ್ಲಿನ ಸಿದ್ದಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಡಯಾಲಿಸಿಸ್ ಮತ್ತು ರೋಗನಿರ್ಣಯ ಕೇಂದ್ರ ಕಟ್ಟಡ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು. ವೈದ್ಯಕೀಯ ಕ್ಷೇತ್ರದಲ್ಲಿ  ಪದವಿ ಪಡೆಯುವುದು, ಆಸ್ಪತ್ರೆ ತೆರೆಯುವುದು ಹಾಗೂ ಮೆಡಿಕಲ್ ಕಾಲೇಜು ತೆರೆಯುವುದು  ಲಾಭದಾಯಕ ಹುದ್ದೆಯಲ್ಲ. ಖಾಸಗಿ ಆಸ್ಪತ್ರೆಯ ಉಪಕರಣಗಳು ಸಾಮಾನ್ಯವಾಗಿ...Kannada News Portal