ಮಹದೇವಪುರ : ದಲಿತರ ಏಳಿಗೆಯಿಂದ ದೇಶದ ಪ್ರಗತಿ ಸಾಧ್ಯ ಅದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಪಾಲಿಸಬೇಕೆಂದು ಮಾಜಿ ಭೂ ನ್ಯಾಯಮಂಡಳಿ ಸದಸ್ಯರಾದ  ಪಟ್ಟಂದೂರು ಬಿ. ಕೃಷ್ಣಪ್ಪ  ತಿಳಿಸಿದರು.

ಕರ್ನಾಟಕ ರಿಪಬ್ಲಿಕ್ ಸೇನಾವತಿಯಿಂದ  ಕಾಡುಗುಡಿ ವಾರ್ಡಿನ  ಬೆಳತ್ತೂರು ಕಾಲೋನಿಯಲ್ಲಿ ಭಾರತ ರತ್ನ ಡಾ. ಅಂಬೇಡ್ಕರ್ ಅವರ 127ನೇ‌  ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ದಲಿತ ನಾಯಕರು ಮಾತ್ರವಲ್ಲದೇ ಎಲ್ಲಾ ಜಾತಿ ಜನಾಂಗದ ರಾಷ್ಟ್ರ ನಾಯಕರು.  ಅಂಬೇಡ್ಕರ್ ಎಲ್ಲ ದಲಿತರಂತೆ ಬಾಲ್ಯದಲ್ಲಿ ಸಮಾಜದ ವಿಕತ ಶೋಷಣೆಗೆ ಒಳಪಟ್ಟರೂ ತಮ್ಮ ಸ್ವಾಭಿಮಾನದ ಗುಣದಿಂದ ಅಂದಿನ ನೆಹರೂ ಸಂಪುಟದಲ್ಲಿ ಅತ್ಯಂತ ಹೆಚ್ಚು ವಿದ್ಯಾವಂತರಾಗಿದ್ದರು. ಸ್ವಾತಂತ್ರ್ಯ, ಸಮಾನತೆ, ಭ್ರಾತತ್ವದಿಂದ ಕೂಡಿದ ಉತ್ತಮ ಸಂವಿಧಾನವನ್ನು ಭಾರತಕ್ಕೆ ನೀಡಿದರು. ಜಗತ್ತಿನಲ್ಲಿಯೇ ದಲಿತರಿಗೆ ಮೀಸಲಾತಿಯನ್ನು ಮೊದಲ ಬಾರಿಗೆ ಸಂವಿಧಾನಾತ್ಮಕವಾಗಿ ನೀಡಿದವರು.  ದಲಿತರ ಹಿತಕ್ಕಾಗಿ ನ್ಯಾಯಾಧೀಶರ ಹುದ್ದೆಯನ್ನು ತ್ಯಜಿಸಿದರು ಇಂತಹ ಮಹಾನ್ ವ್ಯಕ್ತಿಗಳ ದಿನವನ್ನು ಸಂವಿಧಾನದ ದಿನವೆಂದು ನಾವು ಪ್ರತಿವರ್ಷ ವಿಶೇಷವಾಗಿ ಬಾಬಾ ಸಾಹೇಬ್ರ ಹಬ್ಬವನ್ನು ಆಚರಿಸುತ್ತೆವೆ ಎಂದು ತಿಳಿಸಿದರು.

ರಿಪಬ್ಲಿಕ್ ಸೇನೆಯ ಮುಖಂಡರಾದ  ಬೆಳತ್ತೂರು ವೆಂಕಟೇಶ್ ಮಾತನಾಡಿ,  ದಲಿತರು ಹಕ್ಕಿನ ಕುರಿತು ಪ್ರಜ್ಞೆ ಬೆಳೆಸಿಕೊಳ್ಳಬೇಕು. ದಲಿತರ ಶೋಷಣೆ ಇಂದಿಗೂ ನಿಂತಿಲ್ಲ. ಅನೇಕ ಕಾನೂನುಗಳು ದಲಿತರ ರಕ್ಷಣೆಗೆ ಇದ್ದರೂ ಆಡಳಿತದ ನಿರ್ಲಕ್ಷ್ಯದಿಂದಾಗಿ ಜಾರಿಯಲ್ಲಿ ತೊಡಕು ಉಂಟಾಗಿದೆ. ಹೋರಾಟ, ಶಿಕ್ಷಣದಿಂದ ದಲಿತರು ರಕ್ಷಣೆ ಪಡೆದುಕೊಳ್ಳಬೇಕು ಎಂದರು. ಅಂಬೇಡ್ಕರ್ ಜಯಂತಿಯನ್ನು ನಾವು ಹಬ್ಬದ ರೀತಿಯಲ್ಲಿ ಆಚರಿಸಿ ಸಾರ್ವಜನಿಕರಿಗೆ ಸಹಿ ವಿತರಣೆ ಮಾಡಲಾಗಿದೆ ಎಂದರು.

ಇದೆ ಸಂದರ್ಭದಲ್ಲಿ  ಮಾಜಿ ನಗರ ಸಭಾ ಸದಸ್ಯ ಶಂಭಪ್ಪ,  ಆರಾಧನ ಸಮಿತಿ ಸದಸ್ಯರಾದ ರಮೇಶ್,  ರಿಪಬ್ಲಿಕ್ ಸೇನೆಯ  ಮುಖಂಡರಾದ ಗೋಪಾಲ್, ರಾಜು, ಗಜೇಂದ್ರ, ಚಂದ್ರಶೇಖರ್, ನಿರ್ಮಾಲ, ಸೇನೆಯ ಪದಾಧಿಕಾರಿಗಳು ಮುಂತಾದವರು ಇದ್ದರೂ.

Please follow and like us:
0
http://bp9news.com/wp-content/uploads/2018/04/Ambedkar-BP9-News-Web-Portal.jpeghttp://bp9news.com/wp-content/uploads/2018/04/Ambedkar-BP9-News-Web-Portal-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಮಹದೇವಪುರ : ದಲಿತರ ಏಳಿಗೆಯಿಂದ ದೇಶದ ಪ್ರಗತಿ ಸಾಧ್ಯ ಅದರಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅವರ ಆದರ್ಶಗಳನ್ನು ಪಾಲಿಸಬೇಕೆಂದು ಮಾಜಿ ಭೂ ನ್ಯಾಯಮಂಡಳಿ ಸದಸ್ಯರಾದ  ಪಟ್ಟಂದೂರು ಬಿ. ಕೃಷ್ಣಪ್ಪ  ತಿಳಿಸಿದರು. ಕರ್ನಾಟಕ ರಿಪಬ್ಲಿಕ್ ಸೇನಾವತಿಯಿಂದ  ಕಾಡುಗುಡಿ ವಾರ್ಡಿನ  ಬೆಳತ್ತೂರು ಕಾಲೋನಿಯಲ್ಲಿ ಭಾರತ ರತ್ನ ಡಾ. ಅಂಬೇಡ್ಕರ್ ಅವರ 127ನೇ‌  ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ದಲಿತ ನಾಯಕರು...Kannada News Portal