ಕೆ.ಆರ್.ಪುರ :  ಸಮಾಜಸೇವೆ, ಜನಪರ ಕೆಲಸ, ನಾಡಿನ ಕಲೆ , ಸಾಹಿತ್ಯ, ಸಂಗೀತ, ನಾಟಕ, ಜನಪದ ಮುಂತಾದ ಸಂಸ್ಕೃತಿಯನ್ನು ಮುಂದಿನ ಯುವಪಿಳಿಗೆಗೆ ಪರಿಚಯಿಸಿ ಉಳಿಸಿಬೆಳಸುವ ಕೆಲಸ ಸಂಘ ಸಂಸ್ಥೆಗಳ ಮೇಲಿದ್ದೆ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು.

ಕೃಷ್ಣರಾಜಪುರ ಕ್ಷೇತ್ರದ ರಾಮಮೂರ್ತಿನಗರ  ಶಾಂತಿ ಬಡಾವಣೆಯಲ್ಲಿ ನೂತನ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ,  ನಾಡಿನ ಕಲೆ, ಸಾಹಿತ್ಯ, ಸಂಗೀತ ಉಳಿಸಿ ಬೆಳಸುವ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಸಂಘಸಂಸ್ಥೆಗಳು ಮಾಡಬೇಕಿದೆ.

ಸಮಾಜಸೇವೆ ಪರಮಗುರಿಯಾಗಲ್ಲಿ, ಜನರಿಗೆ ಬಡ ಕಲಾವಿದರಿಗೆ ಕೈಲಾದ ಸಹಯವನ್ನು ಟ್ರಸ್ಟ್ ಮಾಡಬೇಕಿದೆ, ರಕ್ತದಾನ,ಆರೋಗ್ಯ, ನೇತ್ರ ತಪಾಸಣೆ, ಮಹಿಳಾಮಕ್ಕಳ ಜಾಗೃತಿ ಮೂಡಿಸುವ ಶಿವಿರಗಳನ್ನು ಮಾಡಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಹಾಗೂ ಪರಿಸರ ಉಳಿಸುವ ಕೆಲಸಗಳನ್ನು ಮಾಡಿ ಎಂದು ಕಿವಿಮಾತು ಹೇಳಿದರು.

ಡಿ.ಎಸ್.ಎಸ್. ಮುಖಂಡರು ಹಾಗೂ ಟ್ರಸ್ಟ್’ನ ಅಧ್ಯಕ್ಷರಾದ ಎಂ.ಎನ್.ಶೇಖರ್ ಮಾತನಾಡಿ, ಬಡಮಕ್ಕಳಿಕ್ಕೆ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸದಾ ಸೇವೆಮಾಡಲು, ಮಕ್ಕಳ ರಕ್ಷಣೆ, ಮಕ್ಕಳ ಸಾಹಿತ್ಯ ಸಂಸ್ಕೃತಿಗಳನ್ನು ಪರಿಚಯಿಸಿ ಸಮಾಜದ ಉತ್ತಮ ನಾಗರಿಕರನಾಗಿಸುವುದು ನಮ್ಮ ಧ್ಯೇಯೆ ಎಂದರು‌.‌

ಇದೇವೇಳೆ ಶಾಂತಿ ಬಡಾವಣೆಯ ಸಮಸ್ಯೆಗಳಾದ ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ ಒಳಚರಂಡಿ, ಕಸ, ಕೆರೆ ಉದ್ಯಾನವನಕ್ಕೆ ದಾರಿ, ಸಿ.ಸಿ ಕ್ಯಾಮರಾ ಅಳವಡಿಸಿಕ್ಕೆಯ ಬಗ್ಗೆ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಸಮಾನ ಭಾರತೀಯರ ಶಿಕ್ಷಣ ಮತ್ತು ಸಂಸ್ಕೃತಿಕ ಟ್ರಸ್ಟ್’ನ ಅಧ್ಯಕ್ಷ ಎಂ.ಎನ್. ಶೇಖರ್, ಪದಾಧಿಕಾರಿಗಳಾದ ಹೀಭಿ, ಜುನಿಯತ್ ಖಾನ್, ಸರ್ವಣಾ,‌ಜಾಗಹೀಶ್ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/03/WhatsApp-Image-2018-03-28-at-8.33.18-AM.jpeghttp://bp9news.com/wp-content/uploads/2018/03/WhatsApp-Image-2018-03-28-at-8.33.18-AM-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಕೆ.ಆರ್.ಪುರ :  ಸಮಾಜಸೇವೆ, ಜನಪರ ಕೆಲಸ, ನಾಡಿನ ಕಲೆ , ಸಾಹಿತ್ಯ, ಸಂಗೀತ, ನಾಟಕ, ಜನಪದ ಮುಂತಾದ ಸಂಸ್ಕೃತಿಯನ್ನು ಮುಂದಿನ ಯುವಪಿಳಿಗೆಗೆ ಪರಿಚಯಿಸಿ ಉಳಿಸಿಬೆಳಸುವ ಕೆಲಸ ಸಂಘ ಸಂಸ್ಥೆಗಳ ಮೇಲಿದ್ದೆ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು. ಕೃಷ್ಣರಾಜಪುರ ಕ್ಷೇತ್ರದ ರಾಮಮೂರ್ತಿನಗರ  ಶಾಂತಿ ಬಡಾವಣೆಯಲ್ಲಿ ನೂತನ ಟ್ರಸ್ಟ್ ಉದ್ಘಾಟಿಸಿ ಮಾತನಾಡಿ,  ನಾಡಿನ ಕಲೆ, ಸಾಹಿತ್ಯ, ಸಂಗೀತ ಉಳಿಸಿ ಬೆಳಸುವ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಸಂಘಸಂಸ್ಥೆಗಳು ಮಾಡಬೇಕಿದೆ. ಸಮಾಜಸೇವೆ ಪರಮಗುರಿಯಾಗಲ್ಲಿ, ಜನರಿಗೆ...Kannada News Portal