ಬೆಂಗಳೂರು : ಇಂದು ಕನ್ನಡ ಚಿತ್ರ ರಸಿಕರಿಗೆ ಅಮೋಘ ದಿನ. ಕಾರಣ ಸೆಪ್ಟೆಂಬರ್ 18/09/2017ರಂದೇ   ಸ್ಯಾಂಡಲ್ ವುಡ್ ನ ಮೂರು ತಾರೆಗಳ ಹುಟ್ಟುಹಬ್ಬ ಬಂದಿದೆ. ನಾಗರಹಾವು,ಬಂಧನ,ಮುತ್ತಿನಹಾರ,ನಿಷ್ಕರ್ಷ, ಸಾಹಸ ಸಿಂಹ, ಯಜಮಾನ, ಸೂರ್ಯವಂಶ, ದಿಗ್ಗಜರು, ಸಿರಿವಂತ,ಆಪ್ತಮಿತ್ರ,ಮಾತಾಡು ಮಾತಾಡು ಮಲ್ಲಿಗೆ ಇನ್ನೂ ನೂರಾರು   ಚಿತ್ರಗಳ ಮುಖಾಂತರ ತಮ್ಮ ಕೋಟ್ಯಾಂತರ ಅಭಿಮಾನಿಗಳನ್ನು ಸಂಪತ್ತಾಗಿ ಪಡೆದ ಸಂಪತ್ ಕುಮಾರ್ ಅಂದ್ರೆ ಡಾ. ವಿಷ್ಣು ವರ್ಧನ್. ಇಂದು ಅವರು ನಮ್ಮೊಂದಿಗಿಲ್ಲ ಆದರೆ ಅವರ ನೆನೆಪು ಮಾತ್ರ ಅಮರ.

ಇವರ 68ನೇ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನ್ ಸ್ಟುಡಿಯೋದಲ್ಲಿ ಇರುವ ವಿಷ್ಣು ಅವರ ಸಮಾಧಿ ಬಳಿ ಲಕ್ಷಾಂತರ ಅಭಿಮಾನಿಗಳ ಬಳಗವೆ ಹರಿದು ಬಂದಿತ್ತು. ತಮ್ಮ ನೆಚ್ಚಿನ ನಾಯಕ, ಸರಳ ಜೀವಿ, ಹೃದಯವಂತನ ಸಮಾಧಿಯನ್ನು ಕಣ್ಣಾರೆ ಕಂಡು ಅವರ ಹುಟ್ಟು ಹಬ್ಬ ಆಚರಿಸಲು ಅವರ ಆಶೀರ್ವಾದ ಪಡೆಯಲು ವಿಷ್ಣು ಫ್ಯಾನ್ಸ್  ನೆರೆದಿತ್ತು. ನಟರ ಕುಟಂಬದ ಸದ್ಯಸರನ್ನು ಭೇಟಿಯಾಗಲು ಇಂದು ಸ್ನೇಹ ಲೋಕ ತಂಡ, ವಿಷ್ಣು ಸೇನ ಹಾಗೂ ರಾಜ್ಯಾದ್ಯಂತ ಅಭಿಮಾನಿಗಳ ಬಳಗ ಚಾಮಯ್ಯ ಮೇಷ್ಟ್ರು ಅವರ ಮೆಚ್ಚಿನ ವಿದ್ಯಾರ್ಥಿಯ ಬರ್ತ್​ಡೇ ಸೇಲಬ್ರೇಷನ್ ಪ್ರಯುಕ್ತ ಕೇಕ್ ಗಳನ್ನು, ತರತರ ಹೂವಿನಮಾಲೆಗಳನ್ನು ಸಮಾಧಿಗೆ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಅನ್ನ ಸಂತರ್ಪಣೆ,
ರಕ್ತದಾನ ಶಿಭಿರ ಏರ್ಪಡಿಸಿದ್ದು ವಿಷ್ಣು ಅಭಿಮಾನಿಗಳ ಅಭಿಮಾನಕ್ಕೆ ಸಾಕ್ಷಿಯಾಗಿತ್ತು.

ಇನ್ನು ಇದೇ ದಿನ ನಟ ಕಮ್ ನಿದೇರ್ಶಕ, ನಿರ್ಮಾಪಕ, ಗಾಯಕ, ಮತ್ತು ರಾಜಕಾರಣಿ ಉಪೇಂದ್ರ ಅವರ ಜನ್ಮದಿನದ ಸಂಭ್ರಮ. ಉಪ್ಪಿ ಸ್ಯಾಂಡಲ್ ವುಡ್ ನ ಡಿಫರೆಂಟ್ ಡೈರೆಕ್ಟರ್. ಹಲವು ಕಲಾವಿದರಿಗೆ,ತಂತ್ರಜ್ಞರಿಗೆ, ಸಂಗೀತ  ನಿದೇರ್ಶಕರಿಗೆ ಲೈಫ್ ಮಾಡಿಕೊಟ್ಟ ಪ್ರತಿಭಾವಂತ.  ರಿಯಲ್-ರೀಲು ಎರಡರಲ್ಲೂ ಸೈ ಎನಿಸಿಕೊಂಡ ಬುದ್ಧಿವಂತ ನಿರ್ದೇಶಕ. ರಕ್ತ ಕಣ್ಣೀರು, ಸೂಪರ್ ಸ್ಟಾರ್, ಹಾಲಿವುಡ್, ಶ್, ಸೂಪರ್, ಓಂ ಇನ್ನು ಹಲವಾರು ಸಿನಿಮಾಗಳನ್ನು ಮಾಡಿ  ಕ್ಲಾಸ್ ಗೂ ಮಾಸ್ ಗೂ ಮಿಸ್ಟರ್ ಪರ್ಫೆಕ್ಟ್  ಆದ್ರು ಉಪ್ಪಿ.

H20 ಚಿತ್ರದ ಮುಖಾಂತರ ಎರಡು ರಾಜ್ಯಗಳ ನಡುವೆ ಹರಿಯುವ ಜೀವನದಿ ಬಗ್ಗೆ ಹಾಗೂ  ಜ್ವಲಂತ ಸಮಸ್ಯೆಯನ್ನು ತೆರೆಮೇಲೆ ತಂದ ಕ್ರಿಯೇಟಿವ್ ಡೈರೆಕ್ಟರ್ ಈ ರಿಯಲೆಸ್ಟಿಕ್ ಸ್ಟಾರ್. ಇವರ ಹುಟ್ಟು ಹಬ್ಬದ ಪ್ರಯುಕ್ತ ರಾತ್ರೋರಾತ್ರಿಯಂದೇ ಕತ್ರಿಗುಪ್ಪೆಯ ಉಪ್ಪಿ ನಿವಾಸದ “ ಸುಮ್ಮನೆ”ಗೆ ಅಭಿಮಾನಿಗಳ ದಂಡೆ ಹರಿದು ಬಂದಿತ್ತು. ನಟನ ಬರ್ತಡೇ ಸೇಲಬ್ರೇಶನ್ ಆಚರಣೆಯನ್ನು ವಿಜೃಭಂಣೆಯಿಂದ ಆಚರಿಸಲಾಯಿತು. ರಾಜಕೀಯಕ್ಕೆ ಪ್ರಜಾಕೀಯ ಎಂಬ ರಾಜಕೀಯ ಪಕ್ಷದಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಉಪೇಂದ್ರ ಅವರ ಹುಟ್ಟು ಹಬ್ಬದ ದಿನವೇ ತಮ್ಮ ಅಭಿಮಾನಿಗಳಿಗೆ ಮತ್ತು ರಾಜ್ಯದ ಪ್ರಬುದ್ಧ ಪ್ರಜೆಗಳಿಗೆ ಉತ್ತಮ ಪ್ರಜಾಕೀಯ ಎಂಬ ಹೊಸ ಪಕ್ಷ ಸ್ಥಾಪನೆ ಮತ್ತು ಅಧಿಕೃತವಾದ ಪಕ್ಷದ ಲಾಂಛನವನ್ನು ಬಿಡುಗಡೆ ಗೊಳಿಸಿದರು. ಇದು ಅವರ ಅಭಿಮಾನಿಗಳ ಬಳಗದಲ್ಲಿ ಮತ್ತು ಸಮಾಜದಲ್ಲಿ ರಾಜಕೀಯ ಬದಲಾವಣೆಯನ್ನು ಬಯಸುವ ಜನರಿಗೆ ಇದು ವಿಶೇಷ ದಿನವಾಗಿದ್ದಂತ್ತು ಸುಳ್ಳಲ್ಲಾ.

ಚೆಲುವೆ, ಸಹಜ ನಟಿ, ಮುಗಳು ನಗೆ ಸುಂದರಿ ಶೃತಿ ಅವರ ಹುಟ್ಟು ಹಬ್ಬ ರಾಜಕೀಯದಲ್ಲೂ, ಚಿತ್ರರಂಗದಲ್ಲೂ ಬ್ಯುಸಿ ಯಾಗಿರುವ ಇವರು ಖಾಸಗಿ ವಾಹಿನಿಯ  ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇನ್ನು ಹಲವಾರು ಚಿತ್ರಗಳು ಹಾಗೂ ಪ್ರಾಜೆಕ್ಟ್ ಗಳೂ ಅವರ ಕೈಯಲ್ಲಿ ಇದೆ ಇಂದು ಅವರ ಮನೆಗೆ ಅಭಿಮಾನಿಗಳ ಬಳಗವೇ ಹರಿದು ಬಂದಿತ್ತು.  ಅವರೊಟ್ಟಿಗೆ ಸಮಯ ಹಾಗೂ ಬರ್ತ್​ಡೇ ಸೆಲಬ್ರೇಷನ್ನನಲ್ಲಿ ಭಾಗಿಯಾಗಿದ್ದರು.

Please follow and like us:
0
http://bp9news.com/wp-content/uploads/2018/09/upendra-1.pnghttp://bp9news.com/wp-content/uploads/2018/09/upendra-1-150x150.pngBP9 Bureauಪ್ರಮುಖಸಿನಿಮಾಬೆಂಗಳೂರು : ಇಂದು ಕನ್ನಡ ಚಿತ್ರ ರಸಿಕರಿಗೆ ಅಮೋಘ ದಿನ. ಕಾರಣ ಸೆಪ್ಟೆಂಬರ್ 18/09/2017ರಂದೇ   ಸ್ಯಾಂಡಲ್ ವುಡ್ ನ ಮೂರು ತಾರೆಗಳ ಹುಟ್ಟುಹಬ್ಬ ಬಂದಿದೆ. ನಾಗರಹಾವು,ಬಂಧನ,ಮುತ್ತಿನಹಾರ,ನಿಷ್ಕರ್ಷ, ಸಾಹಸ ಸಿಂಹ, ಯಜಮಾನ, ಸೂರ್ಯವಂಶ, ದಿಗ್ಗಜರು, ಸಿರಿವಂತ,ಆಪ್ತಮಿತ್ರ,ಮಾತಾಡು ಮಾತಾಡು ಮಲ್ಲಿಗೆ ಇನ್ನೂ ನೂರಾರು   ಚಿತ್ರಗಳ ಮುಖಾಂತರ ತಮ್ಮ ಕೋಟ್ಯಾಂತರ ಅಭಿಮಾನಿಗಳನ್ನು ಸಂಪತ್ತಾಗಿ ಪಡೆದ ಸಂಪತ್ ಕುಮಾರ್ ಅಂದ್ರೆ ಡಾ. ವಿಷ್ಣು ವರ್ಧನ್. ಇಂದು ಅವರು ನಮ್ಮೊಂದಿಗಿಲ್ಲ ಆದರೆ ಅವರ ನೆನೆಪು ಮಾತ್ರ ಅಮರ. ಇವರ...Kannada News Portal