ದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್ ವಿರುದ್ಧ ಈಗ ಬಿಜೆಪಿ ಟಾಂಗ್​​ ನೀಡಿದೆ.ಕಾಂಗ್ರೆಸ್ಸಿನ ಪ್ರಭಾವಿ ನಾಯಕರೂ ಆಗಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ವಿದೇಶದಲ್ಲಿ ಬರೋಬ್ಬರಿ 20 ಸಾವಿರ ಕೋಟಿ ರು.ನಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಒಂದು ಬಾಂಬ್ನ್ನ ಬಿಜೆಪಿ ಸಿಡಿಸಿದೆ.

ವಿದೇಶದಲ್ಲಿರುವ ಆಸ್ತಿ ಕುರಿತು ರಹಸ್ಯ ಕಾಪಾಡಿಕೊಂಡ ಸಂಬಂಧ ಚಿದಂಬರಂ ಪತ್ನಿ ನಳಿನಿ, ಪುತ್ರ ಕಾರ್ತಿ ಹಾಗೂ ಸೊಸೆ ಶ್ರೀನಿಧಿ ವಿರುದ್ಧ ಕಳೆದ ಶುಕ್ರವಾರ ಆದಾಯ ತೆರಿಗೆ ಇಲಾಖೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿತ್ತು. ಇದರ ಬೆನ್ನಲ್ಲೇ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ಸಿಗೆ ಅದೇ ಅಸ್ತ್ರವನ್ನು ಬಳಸಿ ಬಿಜೆಪಿ ತಿರುಗೇಟು ನೀಡಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಟ್ವೀಟ್ ಮೂಲಕ ಪ್ರತ್ಯಾರೋಪ ಆರಂಭಿಸಿದ್ದಾರೆ. ಚಿದಂಬರ ಕುಟುಂಬ ಸದಸ್ಯರು ವಿದೇಶದಲ್ಲಿ 20 ಸಾವಿರ ಕೋಟಿ ರು. (3 ಶತಕೋಟಿ ಡಾಲರ್) ಅಕ್ರಮ ಆಸ್ತಿ ಹೊಂದಿದ್ದಾರೆ. ಕಪ್ಪು ಹಣ ಕುರಿತು ವಿಶೇಷ ತನಿಖಾ ತಂಡ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದರೂ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ| ಮನಮೋಹನ ಸಿಂಗ್ ಹಾಗೂ ಅಂದಿನ ಹಣಕಾಸು ಸಚಿವ ಪಿ. ಚಿದಂಬರಂ ಅವರು ಹಿಂದೇಟು ಹಾಕಿದ್ದರು. ಏಕೆಂದರೆ ಎಸ್‌ಐಟಿ ರಚನೆ ಮಾಡಿದ್ದರೆ ಅವರ ನಾಯಕರೇ ಸಿಕ್ಕಿ ಬೀಳುತ್ತಿದ್ದರು’ ಎಂದು ಹರಿಹಾಯ್ದಿದ್ದಾರೆ.

 

 

 

Please follow and like us:
0
http://bp9news.com/wp-content/uploads/2018/05/collage-1-20.jpghttp://bp9news.com/wp-content/uploads/2018/05/collage-1-20-150x150.jpgBP9 Bureauಪ್ರಮುಖರಾಷ್ಟ್ರೀಯದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸುತ್ತಿರುವ ಕಾಂಗ್ರೆಸ್ ವಿರುದ್ಧ ಈಗ ಬಿಜೆಪಿ ಟಾಂಗ್​​ ನೀಡಿದೆ.ಕಾಂಗ್ರೆಸ್ಸಿನ ಪ್ರಭಾವಿ ನಾಯಕರೂ ಆಗಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ವಿದೇಶದಲ್ಲಿ ಬರೋಬ್ಬರಿ 20 ಸಾವಿರ ಕೋಟಿ ರು.ನಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಒಂದು ಬಾಂಬ್ನ್ನ ಬಿಜೆಪಿ ಸಿಡಿಸಿದೆ. ವಿದೇಶದಲ್ಲಿರುವ ಆಸ್ತಿ ಕುರಿತು ರಹಸ್ಯ ಕಾಪಾಡಿಕೊಂಡ ಸಂಬಂಧ ಚಿದಂಬರಂ ಪತ್ನಿ ನಳಿನಿ,...Kannada News Portal