ಬೆಂಗಳೂರು :  ಮತದಾನದ ಮಹತ್ವ ಸಾರುವುದಕ್ಕಾಗಿ ಇಲ್ಲೊಬ್ಬ ವ್ಯಕ್ತಿ ಮತದಾನ ಮಾಡಿದವರಿಗೆ ಬೈಕ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಅನೇಕ ಪ್ರಯತ್ನಗಳನ್ನ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು, ವ್ಯಕ್ತಿಗಳು, ಚಿತ್ರನಟ-ನಟಿಯರು ಮತದಾನದ ಮಹತ್ವ ಸಾರುತ್ತ ಸಾಥ್ ನೀಡುತ್ತಿದ್ದಾರೆ. ಆದರೆ ಇಲ್ಲಿ ವಿನೂತನ ಶೈಲಿಯಲ್ಲಿ ಮತದಾನ ಮಾಡುವಂತೆ ಪ್ರೆರೆಪಿಸುತ್ತಿದ್ದಾರೆ. ಮತದಾನ ಮಾಡಿದವರಿಗೆ ತಿಂಡಿ ಉಚಿತವಾಗಿ ನೀಡುವ ಹೊಟೆಲ್ ಸುದ್ದಿಯೊಂದು ಬಂದ ಬೆನ್ನಲ್ಲೇ ಈಗ  ಮತದಾನ ಮಾಡಿದವರಿಗೆ ಬೈಕ್ ಅನ್ನು ಉಚಿತವಾಗಿ ನೀಡುವ ಸುದ್ದಿಯೊಂದು ವೈರಲ್ ಆಗುತ್ತಿದೆ.

ಬೆಂಗಳೂರಿನ ರಾಜಾಜಿ ನಗರದ ನಿವಾಸಿ ಶ್ರೀನಿವಾಸ್ ಅವರು ಇಂತಹುದೊಂದು ಬಂಪರ್ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮತದಾನ ಮಾಡಿದ 10 ಅದೃಷ್ಟಶಾಲಿಗಳಿಗೆ ಬೈಕ್ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಮತದಾನ ಮಾಡಿದ ಬಳಿಕ ನಿಮ್ಮ ಕೈ ಬೆರಳಿಗೆ ಹಾಕಿರುವ ಶಾಹಿ ಸಮೇತ ಪೋಟೋ ತೆಗಿಸಿಕೊಂಡು ಅದನ್ನು ಶ್ರೀನಿವಾಸ್ ಅವರಿಗೆ ಕಳುಹಿಸಿದರೆ ಲಕ್ಕಿ ಡ್ರಾ ಮೂಲಕ 10 ಅದೃಷ್ಟಶಾಲಿಗಳಿಗೆ ಉಚಿತ ಬೈಕ್ ನೀಡುತ್ತಾರಂತೆ.

ಫೋಟೋ ಕಳುಹಿಸುವ ವಿಧಾನ..!

 ಮತದಾನ ಮಾಡಿದ ನಂತರ ನಿಮ್ಮ ಕೈಗೆ ಹಾಕಿರುವ ಶಾಹಿಯೊಂದಿಗೆ ಫೋಟೋ ತೆಗೆಸಿಕೊಂಡು ಅದನ್ನು 50 ದಿನಗಳ ಒಳಗಾಗಿ ಅಂದರೆ ಜೂನ್ 30ರ ಒಳಗಾಗಿ ವಾಟ್ಸಪ್ ಸಂಖ್ಯೆ 9590095900  ಮೂಲಕ ಫೋಟೋ ಕಳುಹಿಸಬೇಕು.

ಆಗ ನಿಮ್ಮ ವಾಟ್ಸಪ್ ಸಂಖ್ಯೆಯ ಕೊನೆಯ ಐದು ಸಂಖ್ಯೆಗಳನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಆ ಲಕ್ಕಿ ಡ್ರಾದ ಸಂಪೂರ್ಣ ಪಾರದರ್ಶಕತೆ ಕಾಪಾಡಲು ತಂತ್ರಜ್ಞಾನ ಉಪಯೋಗಿಸಲಾಗುತ್ತಿದೆ. ಬಳಿಕ ಜುಲೈ 10ಕ್ಕೆ ಲಕ್ಕಿ ಡ್ರಾ ಮೂಲಕ 10 ಅದೃಷ್ಟ ಶಾಲಿ ಮತದಾರರನ್ನು ಆಯ್ಕೆ ಮಾಡಲಾಗುತ್ತದೆ. ಆ ಮೂಲಕ  ಗೆದ್ದವರಿಗೆ 10  ಬಜಾಜ್ 110 ಬಿ ಬೈಕ್ ಅನ್ನು ವಿತರಿಸಲಾಗುತ್ತದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-11-at-2.48.03-PM.jpeghttp://bp9news.com/wp-content/uploads/2018/05/WhatsApp-Image-2018-05-11-at-2.48.03-PM-150x150.jpegBP9 Bureauಟೈಮ್ ಪಾಸ್ಪ್ರಮುಖಬೆಂಗಳೂರು :  ಮತದಾನದ ಮಹತ್ವ ಸಾರುವುದಕ್ಕಾಗಿ ಇಲ್ಲೊಬ್ಬ ವ್ಯಕ್ತಿ ಮತದಾನ ಮಾಡಿದವರಿಗೆ ಬೈಕ್ ಅನ್ನು ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಅನೇಕ ಪ್ರಯತ್ನಗಳನ್ನ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳು, ವ್ಯಕ್ತಿಗಳು, ಚಿತ್ರನಟ-ನಟಿಯರು ಮತದಾನದ ಮಹತ್ವ ಸಾರುತ್ತ ಸಾಥ್ ನೀಡುತ್ತಿದ್ದಾರೆ. ಆದರೆ ಇಲ್ಲಿ ವಿನೂತನ ಶೈಲಿಯಲ್ಲಿ ಮತದಾನ ಮಾಡುವಂತೆ ಪ್ರೆರೆಪಿಸುತ್ತಿದ್ದಾರೆ. ಮತದಾನ ಮಾಡಿದವರಿಗೆ ತಿಂಡಿ ಉಚಿತವಾಗಿ ನೀಡುವ ಹೊಟೆಲ್ ಸುದ್ದಿಯೊಂದು ಬಂದ ಬೆನ್ನಲ್ಲೇ ಈಗ...Kannada News Portal