ಬೆಂಗಳೂರು : ವಿಷಯಾಧಾರಿತ ವಿರೋಧವಾದರೆ ವಿಷಯ ಮುಕ್ತಾಯವಾದೊಡಣೆ ವಿರೋಧವೂ ಮುಗಿಯುತ್ತದೆ. ವ್ಯಕ್ತಿಗತ ವಿರೋಧವಾದರೆ, ಆ ವಿರೋಧಕ್ಕೆ ಅಂತ್ಯ ಎಂಬುದೇ ಇಲ್ಲ. ಕೃಷ್ಣನ ಕುರಿತಾಗಿ ವ್ಯಕ್ತಿಗತ ವಿರೋಧ ಹೊಂದಿದ್ದ ರಕ್ಕಸರು, ಒಬ್ಬರಾದ ನಂತರ ಒಬ್ಬರು ಬಾಲ ಕೃಷ್ಣನನ್ನು ಪೀಡಿಸಲು, ಸಂಹರಿಸಲು ಪ್ರಯತ್ನಿಸಿದರು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.

ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ 5 ನೇ ದಿನದ “ಕೃಷ್ಣಕಥಾ”ದಲ್ಲಿ ಸಾನ್ನಿಧ್ಯವಹಿಸಿ, ಪ್ರವಚನವನ್ನು ಅನುಗ್ರಹಿಸಿದ ಶ್ರೀಗಳು, ನಾಯಕನಾದವನು ಮೊದಲು ತನ್ನ ಬಳಗವನ್ನು ಕಾಪಾಡಿಕೊಳ್ಳಬೇಕು, ಇದು ನಾಯಕತ್ವದ ಸಹಜ ಲಕ್ಷಣ. ಬಾಲ ಕೃಷ್ಣ ಹಾಗೂ ಗೋಪ ಕುಮಾರರು ಆಟವಾಡುತ್ತಿದ್ದಾಗ ಹೆಬ್ಬಾವಿನ ರೂಪದಲ್ಲಿ ರಾಕ್ಷಸ ಪ್ರತ್ಯಕ್ಷನಾಗಿ ಗೋಪ ಕುಮಾರರನ್ನು ನುಂಗಲು ಉದ್ಯುಕ್ತನಾದ. ಆಗ ಬಾಲ ಕೃಷ್ಣ ತಾನೇ ಮೊದಲಾಗಿ ಹೆಬ್ಬಾವಿನ ಜೊತೆ ಹೋರಾಟಮಾಡಿ ಕುಮಾರರನ್ನು ರಕ್ಷಿಸಿದ. ಈ ಮೂಲಕ ಭಾಗವತದಲ್ಲಿ ಶ್ರೀಕೃಷ್ಣನ ನಾಯಕತ್ವ ಗುಣವನ್ನು ವಿವರಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರಕೃತಿ ಪೂಜೆಯೇ ಪರಮಾತ್ಮನ ಪೂಜೆ ಎಂಬುದನ್ನು ನಾವೆಲ್ಲರೂ ಗಮನಿಸಬೇಕಿದೆ ಎಂದ ಶ್ರೀಗಳು, ಅಂದು ವೃಂದಾವನದಲ್ಲಿ ನಿರ್ಮಲವಾಗಿ ತುಂಬಿ ಹರಿಯುತ್ತಿದ್ದ ಯಮುನಾ ನದಿ ಇಂದು ದೇಶದ ರಾಜಧಾನಿ ದೆಹಲಿಯ ಕೊಳಕನ್ನು ಹೊತ್ತು ಸಾಗುತ್ತದೆ. ಇದು ದುರಂತ, ಪ್ರಕೃತಿಯಲ್ಲಿ ನಾವು ಪರಮಾತ್ಮನನ್ನು ಕಾಣಬೇಕಿದ್ದು, ಪರಿಸರವನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು. ಪ್ರವಚನದ ಜೊತೆಜೊತೆಗೆ ಸಂದರ್ಭಕ್ಕೆ ತಕ್ಕ ಗಾಯನ – ವಾದನ – ಚಿತ್ರ – ರೂಪಕಗಳ ಮೂಲಕ ಮನೋರಂಜನೆಯ ಜೊತೆ ಶ್ರೀಕೃಷ್ಣನ ತತ್ತ್ವಾದರ್ಶಗಳನ್ನು ಪ್ರಸ್ತುತಪಡಿಸಿದವು.

 

Please follow and like us:
0
http://bp9news.com/wp-content/uploads/2018/09/1-1.jpghttp://bp9news.com/wp-content/uploads/2018/09/1-1-150x150.jpgBP9 Bureauಪ್ರಮುಖಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು : ವಿಷಯಾಧಾರಿತ ವಿರೋಧವಾದರೆ ವಿಷಯ ಮುಕ್ತಾಯವಾದೊಡಣೆ ವಿರೋಧವೂ ಮುಗಿಯುತ್ತದೆ. ವ್ಯಕ್ತಿಗತ ವಿರೋಧವಾದರೆ, ಆ ವಿರೋಧಕ್ಕೆ ಅಂತ್ಯ ಎಂಬುದೇ ಇಲ್ಲ. ಕೃಷ್ಣನ ಕುರಿತಾಗಿ ವ್ಯಕ್ತಿಗತ ವಿರೋಧ ಹೊಂದಿದ್ದ ರಕ್ಕಸರು, ಒಬ್ಬರಾದ ನಂತರ ಒಬ್ಬರು ಬಾಲ ಕೃಷ್ಣನನ್ನು ಪೀಡಿಸಲು, ಸಂಹರಿಸಲು ಪ್ರಯತ್ನಿಸಿದರು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal