ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಚಿತ್ರರಂಗದ ಇತಿಹಾಸದಲ್ಲಿ ಈವರೆಗೂ ಯಾವೊಂದು ಸಿನಿಮಾನೂ ರಿಲೀಸ್‌ಗೂ ಮೊದಲು ಮಾಡಿರದಷ್ಟು ದೊಡ್ಡ ಮಟ್ಟದನ ವ್ಯವಹಾರ ವಿಲನ್‌ ಸಿನಿಮಾ ಮಾಡಿದೆ. ಈ ಮೂಲಕ ನಿರ್ದೇಶಕ ಜೋಗಿ ಪ್ರೇಮ್‌ ದಾಖಲೆಯ ಬ್ಯುಸಿನೆಸ್‌ ಮಾಡೋದ್ರಲ್ಲೂ ದಿ ಕಿಂಗ್‌ ಅನ್ನೋದು ಸಾಬೀತು ಮಾಡಿದ್ದಾರೆ.

ಪ್ರೇಮ್‌ ಸಿನಿಮಾ ಮೇಕಿಂಗ್‌ ಸ್ಟ್ಯಾಟರ್ಜಿನೇ ಹಾಗಿರುತ್ತೆ. ಅದು ಸ್ಟಾರ್‌ ಕಾಸ್ಟ್‌ನಿಂದ ಹಿಡಿದು, ಮೇಕಿಂಗ್‌ ಬಜೆಟ್‌ನಿಂದ ಹಿಡಿದು, ಹಾಡುಗಳು, ಫೈಟ್‌ಗಳೂ ಎಲ್ಲವೂ ಸಿನಿಪ್ರಿಯರು ಶಿಳ್ಳೆ ಹಾಕಿ,ಕೇಕೆ ಹಾಕುತ್ತಾ ನೋಡುವಂತಿರುತ್ತೆ. ಲೇಟ್‌ ಮಾಡಿದ್ರೂ, ಲೇಟೆಸ್ಟ್‌ ಆಗಿ ವರ್ಕೌಟ್‌ ಮಾಡೋದು ಪ್ರೇಮ್​​​ ಮ್ಯಾಜಿಕ್​​​​. ಈಗ ಮತ್ತೆ  ದಿ ವಿಲನ್‌ ಸಿನಿಮಾ ಮೂಲಕ ದೊಡ್ಡ ಮ್ಯಾಜಿಕ್‌ ಮಾಡಿದ್ದಾರೆ.

ದಿ ವಿಲನ್‌ ಸಿನಿಮಾ ರಿಲೀಸ್‌ಗೂ ಮೊದಲೇ ಬರೊಬ್ಬರಿ 50ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂಲಗಳ ಪ್ರಕಾರ ಈಗಾಗಲೇ ದಿ ವಿಲನ್‌ ಸಿನಿಮಾದ ವಿತರಣೆಯ ಹಕ್ಕು ಸೋಲ್ಡೌಟ್‌ ಆಗಿದೆ. ಬಿಕೆಟಿ, ಎಮ್‌ಎಮ್‌ಸಿಎಚ್‌, ಚಿತ್ರದುರ್ಗಾ, ದಾವಣಗೆರೆ, ಸೌತ್‌ ಕೆನರಾ, ಶಿವಮೊಗ್ಗ ಹೈದ್ರಾಬಾದ್‌ ಕರ್ನಾಟಕ,ಹುಬ್ಬಳ್ಳಿ ಧಾರಾವಾಡ ಸೇರಿದಂತೆ, ಆಲ್ಮೋಸ್ಟ್‌ ಎಲ್ಲಾ ಏರಿಯಾದ ವಿತರಣೆಯ ಹಕ್ಕು ದಾಖಲೆಯ ಬೆಲೆಗೆ ಮಾರಾಟವಾಗಿದೆ. ಚಿತ್ರತಂಡದ ಮೂಲಗಳು ಹೇಳೋ ಪ್ರಕಾರ ದಿ ವಿಲನ್‌ ಚಿತ್ರದ ವಿತರಣೆಯ ಹಕ್ಕು, ಸ್ಯಾಟ್​​​ಲೈಟ್‌ ರೈಟ್ಸ್‌, ಡಿಜಿಟಲ್‌ ರೈಟ್ಸ್‌, ಡಬ್ಬಿಂಗ್‌ ರೈಟ್ಸ್, ಆಡಿಯೋ ವಿಡಿಯೋ ರೈಟ್ಸ್‌ ಎಲ್ಲವೂ ಸೇರಿ 50ಕೋಟಿ ಗಡಿ ದಾಟಿದೆಯಂತೆ.

ಅಂದ ಹಾಗೆ, ದಿ ವಿಲನ್‌ ಸಿನಿಮಾದ ವಿತರಣೆಯ ಹಕ್ಕು ಮಾರಾಟವಾಗಿರೋದು ಔಟ್‌ ರೇಟ್‌ಗಲ್ಲ. ಎನ್‌.ಆರ್‌.ಎ ಲೆಕ್ಕದಲ್ಲಿ, ಅಂದ್ರೆ ಮುಂಗಡ ಹಣ ಮುರುಪಾವತಿ ಮಾಡುವಂತಿಲ್ಲ. ಈ ಲೆಕ್ಕಾಚಾರದಲ್ಲಿ ಸಿನಿಮಾ ಮಾರಾಟವಾಗಿರೋದ್ರಿಂದ, ಮುಂಗಡ ಹಣ ಥಿಯೇಟರ್‌ನಿಂದ ಬಂದ ಮೇಲೆ, ಅದರ ಮೇಲೆ ಎಷ್ಟು ಹಣ ಗಳಿಕೆಯಾಗುತ್ತೋ ಅಷ್ಚು ಕೂಡ ನಿರ್ಮಾಪಕರಿಗೆ ಪಾಲು ಹೋಗುತ್ತೆ. ಈ ಲೆಕ್ಕಾಚಾರದಲ್ಲಿ ನೋಡೋದಾದ್ರೆ, ದಿ ವಿಲನ್‌ ಸಿನಿಮಾ ಹೆಚ್ಚು ಕಮ್ಮಿ ನೂರು ಕೋಟಿಯ ಕ್ಲಬ್‌ ಸೇರೋ ಎಲ್ಲಾ ಲಕ್ಷಣಗಳು ಗಾಢವಾಗಿ ಗೋಚರಿಸ್ತಿದೆ. ಹಾಗೇನಾದ್ರೂ ಆದ್ರೆ, ನಿರ್ದೇಶಕ ಜೋಗಿ ಪ್ರೇಮ್‌, ನಿರ್ಮಾಪಕ ಸಿ.ಆರ್‌. ಮನೋಹರ್‌, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಅಷ್ಟೇ ಯಾಕೆ ಇಡೀ ಚಿತ್ರತಂಡ ನೂರು ಕೋಟಿಗಳಿಸಿದ ಕನ್ನಡದ ಮೊಟ್ಟ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಪಾತ್ರವಾಗುವಲ್ಲಿ ಎರಡು ಮಾತಿಲ್ಲ.

Please follow and like us:
0
http://bp9news.com/wp-content/uploads/2018/09/The-villain-teaser-and-Song-Release-next-june-e1537358731260.jpghttp://bp9news.com/wp-content/uploads/2018/09/The-villain-teaser-and-Song-Release-next-june-e1537358731260-150x150.jpgBP9 Bureauಸಿನಿಮಾಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಚಿತ್ರರಂಗದ ಇತಿಹಾಸದಲ್ಲಿ ಈವರೆಗೂ ಯಾವೊಂದು ಸಿನಿಮಾನೂ ರಿಲೀಸ್‌ಗೂ ಮೊದಲು ಮಾಡಿರದಷ್ಟು ದೊಡ್ಡ ಮಟ್ಟದನ ವ್ಯವಹಾರ ವಿಲನ್‌ ಸಿನಿಮಾ ಮಾಡಿದೆ. ಈ ಮೂಲಕ ನಿರ್ದೇಶಕ ಜೋಗಿ ಪ್ರೇಮ್‌ ದಾಖಲೆಯ ಬ್ಯುಸಿನೆಸ್‌ ಮಾಡೋದ್ರಲ್ಲೂ ದಿ ಕಿಂಗ್‌ ಅನ್ನೋದು ಸಾಬೀತು ಮಾಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var...Kannada News Portal