ಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿ ಅಸಮಾಧಾನದ ಹೊಗೆ ತೀವ್ರಗೊಂಡು  ರಾಜಕೀಯದ ಪಡಸಾಲೆಯಲ್ಲಿ ಹೊಸ  ಸಂಚಲನ ಮೂಡಿಸುತ್ತಿರುವಾಗಲೇ ಬಿಜೆಪಿ ಅಭ್ಯರ್ಥಿ ಬಿ.ಎನ್ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದ    ತೆರವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಾರಿ ಬಿಗಿಭದ್ರತೆಯೊಂದಿಗೆ  ಆರಂಭವಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ . ಚುನಾವಣೆಗಾಗಿ 1400 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಣಿಚೆನ್ನಮ್ಮ ಶಾಲೆಯ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಮತ ಚಲಾಯಿಸಿದ್ದಾರೆ.

ಬೆಳಿಗ್ಗೆಯಿಂದಲೇ ಮತದಾನ ಉತ್ಸಾಹದೊಂದಿಗೆ  ಆರಂಭವಾಗಿದೆ. ಸರಕಾರ ಉಳಿಸಿಕೊಳ್ಳಲು ಮತ್ತು ಹೇಗಾದರು ಮಾಡಿ ಮರಳಿ ಅಧಿಕಾರ  ಪಡೆಯಲು ಬಿಜೆಪಿ ಮತ್ತೆ -ಮತ್ತೆ ಪ್ರಯತ್ನ ಮಾಡುತ್ತಿರುವ ಹಿನ್ನಲೆಯಲ್ಲಿ ಜಯನಗರ ಫಲಿತಾಂಶ ಬಹಳ ಮುಖ್ಯವಾಗಿದೆ.

ಕಣದಲ್ಲಿ ಒಟ್ಟು 19 ಅಭ್ಯರ್ಥಿಗಳಿದ್ದು, ಕಾಂಗ್ರೆಸಿನಿಂದ  ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರ ಪುತ್ರಿ  ಸೌಮ್ಯ ರೆಡ್ಡಿ, ಬಿಜೆಪಿಯಿಂದ  ಬಿ.ಎನ್ ವಿಜಯಕುಮಾರ್  ಅವರ ಹೋದರ  ಪ್ರಹ್ಲಾದ್ ಬಾಬು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸಾಮಾಜಿಕ ಹೋರಾಟಗಾರ ರವಿ ಕೃಷ್ಣಾರೆಡ್ಡಿ  ಕಣದಲ್ಲಿ ಇದ್ದಾರೆ.  13 ರಂದು ಫಲಿತಾಂಶ ಪ್ರಕಟವಾಗಲಿದೆ.

 

Please follow and like us:
0
http://bp9news.com/wp-content/uploads/2018/06/collage-16.jpghttp://bp9news.com/wp-content/uploads/2018/06/collage-16-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು : ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳೆಯದಲ್ಲಿ ಅಸಮಾಧಾನದ ಹೊಗೆ ತೀವ್ರಗೊಂಡು  ರಾಜಕೀಯದ ಪಡಸಾಲೆಯಲ್ಲಿ ಹೊಸ  ಸಂಚಲನ ಮೂಡಿಸುತ್ತಿರುವಾಗಲೇ ಬಿಜೆಪಿ ಅಭ್ಯರ್ಥಿ ಬಿ.ಎನ್ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದ    ತೆರವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಾರಿ ಬಿಗಿಭದ್ರತೆಯೊಂದಿಗೆ  ಆರಂಭವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ . ಚುನಾವಣೆಗಾಗಿ 1400 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಣಿಚೆನ್ನಮ್ಮ ಶಾಲೆಯ...Kannada News Portal