ಬೆಂಗಳೂರು :  ಸ್ಯಾಂಡಲ್​ವುಡ್​ನ ‘ಕಿರಿಕ್​ ಜೋಡಿ’ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಅಂದರೆ​ ರಕ್ಷಿತ್​ ಶೆಟ್ಟಿ- ರಶ್ಮಿಕಾ ಲವ್​ ಬ್ರೇಕಪ್ ಆಗಿದೆ. ರಶ್ಮಿಕಾ ಟಾಲಿವುಡ್​ ಎಂಟ್ರಿಯ ಹಿಂದೆಯೇ ಇಂಥದ್ದೊಂದು ಸುದ್ದಿ ಹರಿದಾಡಿತ್ತು. ಯಾವಾಗ ‘ಗೀತ-ಗೋವಿಂದಂ’ ಸಿನಿಮಾ ಸೆಟ್ಟೇರಿತೊ ಅಲ್ಲಿಂದ ವಿಜಯ್ ದೇವರಕೊಂಡ-ರಶ್ಮಿಕಾ ನಡುವೆಯೂ ಗಾಸಿಪ್ ಹರಿದಾಡಿತ್ತು. ಈ ಎಲ್ಲಾ ಬೆಳವಣಿಗೆಯ ಮಧ್ಯೆ ರಕ್ಷಿತ್​- ರಶ್ಮಿಕಾ ಗಾಸಿಪ್​ಗೆ ತಣ್ಣೀರು ಹಾಕೋಕೆ ಮುಂದಾಗಿದ್ದರು. ಆದರೂ ಬ್ರೇಕಪ್​ ಲಕ್ಷಣಗಳು ಕಾಣಿಸುತ್ತಿದ್ದವು.

ಇದರ ಮಧ್ಯೆ ರಕ್ಷಿತ್​ ಕೂಡ ಸಾಮಾಜಿಕ ಜಾಲತಾಣಗಳಿಗೆ ಗುಡ್​ ಬೈ ಹೇಳಿದ್ದಾರೆ. ಕೆಲವರು ಅದಾಗಲೇ ಬ್ರೇಕಪ್​ ನ್ಯೂಸ್​ ಪಕ್ಕಾ ಅಂದುಕೊಂಡಿದ್ದರು. ಇದೀಗ ನಂಬಲಾರ್ಹ ಮೂಲಗಳಿಂದ ಸುದ್ದಿ ಬಂದಿದೆ. ಅದೇನಂದ್ರೆ, ರಶ್ಮಿಕಾ ಬ್ರೇಕಪ್​ ಮಾಡಿಕೊಳ್ಳಲು ಮುಂದಾಗಿದ್ದಾರಂತೆ.

ರಶ್ಮಿಕಾ ಸದ್ಯ ಟಾಪ್​ ಮೋಸ್ಟ್ ನಟಿ. ಕೈಯಲ್ಲಿ ಹತ್ತಾರು ಸ್ಟಾರ್​ ಸಿನಿಮಾಗಳಿವೆ. ಇದರ ಮಧ್ಯೆ ಬ್ರೇಕಪ್​ ಗಾಸಿಪ್​ನಿಂದ ಜಾಸ್ತಿ ಸುದ್ದಿಯಾಗ್ತಿದ್ದರು. ಹೀಗಾಗಿ ರಶ್ಮಿಕಾ ಕುಟುಂಬಸ್ಥರ ಜೊತೆ ಚರ್ಚಿಸಿ, ಮದುವೆ ವಿಚಾರಕ್ಕೆ ಫುಲ್​ಸ್ಟಾಪ್ ಹಾಕಿದ್ದಾರೆ. ಕನ್ನಡ- ತೆಲುಗು ಎರಡು ಭಾಷೆಯಲ್ಲೂ ರಶ್ಮಿಕಾ ಲೀಡಿಂಗ್​ ಸ್ಟಾರ್ ಆಗಿದ್ದಾರೆ. ಹತ್ತಾರು ಆಫರ್ಸ್ ಹುಡುಕಿ ಬರ್ತಿವೆ. ಇದರ ಮಧ್ಯೆ ಬ್ರೇಕಪ್​ ಗಾಸಿಪ್, ಟ್ರೋಲ್​ನಿಂದ ರಶ್ಮಿಕಾ ಮಾನಸಿಕವಾಗಿ ಕುಗ್ಗಿದ್ದರು. ಹೀಗಾಗಿ, ಕುಟುಂಬಸ್ಥರ ಜೊತೆ ಚರ್ಚಿಸಿ ಮದುವೆಗಿಂತ, ತಮಗೆ ಕೆರಿಯರ್​ ಮುಖ್ಯ ಅಂತಾ ನಿರ್ಧರಿಸಿದ್ದಾರೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ದೂರ ಆಗುತ್ತಿದ್ದಾರಂತೆ.

 

Please follow and like us:
0
http://bp9news.com/wp-content/uploads/2018/09/Rashmika_Mandanna.jpeghttp://bp9news.com/wp-content/uploads/2018/09/Rashmika_Mandanna-150x150.jpegBP9 Bureauಬೆಂಗಳೂರುಸಿನಿಮಾಬೆಂಗಳೂರು :  ಸ್ಯಾಂಡಲ್​ವುಡ್​ನ ‘ಕಿರಿಕ್​ ಜೋಡಿ’ ಸಂಬಂಧದಲ್ಲಿ ಬಿರುಕು ಬಿಟ್ಟಿದೆ. ಅಂದರೆ​ ರಕ್ಷಿತ್​ ಶೆಟ್ಟಿ- ರಶ್ಮಿಕಾ ಲವ್​ ಬ್ರೇಕಪ್ ಆಗಿದೆ. ರಶ್ಮಿಕಾ ಟಾಲಿವುಡ್​ ಎಂಟ್ರಿಯ ಹಿಂದೆಯೇ ಇಂಥದ್ದೊಂದು ಸುದ್ದಿ ಹರಿದಾಡಿತ್ತು. ಯಾವಾಗ ‘ಗೀತ-ಗೋವಿಂದಂ’ ಸಿನಿಮಾ ಸೆಟ್ಟೇರಿತೊ ಅಲ್ಲಿಂದ ವಿಜಯ್ ದೇವರಕೊಂಡ-ರಶ್ಮಿಕಾ ನಡುವೆಯೂ ಗಾಸಿಪ್ ಹರಿದಾಡಿತ್ತು. ಈ ಎಲ್ಲಾ ಬೆಳವಣಿಗೆಯ ಮಧ್ಯೆ ರಕ್ಷಿತ್​- ರಶ್ಮಿಕಾ ಗಾಸಿಪ್​ಗೆ ತಣ್ಣೀರು ಹಾಕೋಕೆ ಮುಂದಾಗಿದ್ದರು. ಆದರೂ ಬ್ರೇಕಪ್​ ಲಕ್ಷಣಗಳು ಕಾಣಿಸುತ್ತಿದ್ದವು. var domain = (window.location...Kannada News Portal