ಬೆಂಗಳೂರು : ಕಿರಕ್ ಪಾರ್ಟಿ ಚಿತ್ರದ ಮುಖಾಂತರ ತಮ್ಮ ಸಿನಿ ಕೆರಿಯರ್ ಸ್ಟಾರ್ಟ್ ಮಾಡಿದ ಮಲೆನಾಡಿನ ಬೆಡಗಿ ಸಂಯುಕ್ತ ಹೆಗ್ಡೆ. ಅಥಿತಿಯಾಗಿ ಬಿಗ್ ಬಾಸ್ ಗೆ ಹೊದ ಸಂಯುಕ್ತ ಅಲ್ಲು ಕಿರಿಕ್ ಮಾಡಿ ಹೊರ ಬಂದಿದ್ದಳು. ಇದರ ಬೆನ್ನಲೆ ಕನ್ನಡದಲ್ಲಿ ಕಾಲೇಜು ಕುಮಾರ ಚಿತ್ರದಲ್ಲಿ ನಟಿಸಿ ನಟನೆಯಲ್ಲಿ ಸೈಯನಿಸಿಕೊಂಡಿದ್ದಾಳೆ ಹೆಗ್ಡೆ. ಸದ್ಯ ತಮಿಳು ಚಿತ್ರರಂಗದಲ್ಲಿ ನಟಿಸತ್ತಿದ್ದು ಕಾಲಿವುಡ್ ನಲ್ಲಿ ಬ್ಯುಸಿಯಾಗಿದ್ದ ಇಕೆಗೆ  ಈಗ ಕಾಲಿವುಡ್ ನಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ ಈಗ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿದೆ.

ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಜಯಂ ರವಿ ಜೊತೆ ನಟಿಸುತ್ತಿದ್ದು, ಈ ಚಿತ್ರ ಪಕ್ಕ ಕಾಮಿಡಿ, ಕಮರ್ಶೀಯಲ್ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಯುಕ್ತಾ ಟ್ವೀಟ್ ಮಾಡುವ ಮೂಲಕ ತಮ್ಮ ನೆಕ್ಷಟ್ ಪ್ರಾಜೆಕ್ಟ್ ಬಗ್ಗೆ ಖುಷಿಯಿಂದ ಈ ಮಾಹಿತಿಯನ್ನು  ಶೇರ್  ಮಾಡಿದ್ದಾರೆ.

ಜಯಂ ರವಿ ಅವರ ಸಿನಿಮಾಗೆ ಈಗಾಗಲೇ ನಟಿ ಕಾಜಲ್ ಅಗರ್ ವಾಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಜಯಂ ರವಿ ಮತ್ತು ಕಾಜಲ್ ಇವರಿಬ್ಬರು ಒಟ್ಟಿಗೆ ಅಭಿನಯಿಸುತ್ತಿರುವ ಮೊದಲ ಚಿತ್ರಿ ಇದಾಗಿದ್ದು. ಈ ಸಿನಿಮಾದಲ್ಲಿ ಸಂಯುಕ್ತಾ ಕೂಡ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ಸಿನಿಮಾವನ್ನು ಪ್ರದೀಪ್ ರಂಗನಾಥನ್ ಅವರು ಡೈರೆಕ್ಟ್ ಮಾಡುತ್ತಿದ್ದಾರೆ.

ಸಂಯುಕ್ತಾ ಅಭಿನಯಿಸುತ್ತಿರುವ ತಮಿಳು ಭಾಷೆಯ ಎರಡನೇ ಸಿನಿಮಾವಾಗಿದ್ದು. ಈಗಾಗಲೇ ನಟ್ಟುದೇವ್ ಜೊತೆ ಸಂಯುಕ್ತಾ ಜೋಡಿಯಾಗಿ `ಪಪ್ಪಿ’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ‘ಪಪ್ಪಿ’ ಚಿತ್ರದಲ್ಲಿ ಕಥೆ ಅದ್ಭುತವಾಗಿರುವ ಕಾರಣದಿಂದ ಈ ಸಿನಿಮಾದಲ್ಲಿ ನಟಿಸಲು ಒಪ್ಪಿರೋದಾಗಿ  ತಿಳಿಸಿದ್ದಾರೆ.

ತಮಿಳಿನಿಂದ ಸಾಲು ಸಾಲು ಅವಕಾಶಗಳು ಬರುತ್ತಿರುವುದರಿಂದ ಸಂಯುಕ್ತಾ ಖುಷಿಯ ಮೂಡಿನಲ್ಲಿದ್ದಾರೆ. ಸದ್ಯಕ್ಕೆ ಪಪ್ಪಿ ಸಿನಿಮಾದ ಶೂಟಿಂಗ್ ನಲ್ಲಿ ಸಂಯುಕ್ತಾ ಹೆಗ್ಡೆ ಬ್ಯುಸಿಯಾಗಿದ್ದಾರೆ.
Please follow and like us:
0
http://bp9news.com/wp-content/uploads/2018/09/samyuktha-hegde-3.pnghttp://bp9news.com/wp-content/uploads/2018/09/samyuktha-hegde-3-150x150.pngBP9 Bureauಪ್ರಮುಖಬೆಂಗಳೂರುಸಿನಿಮಾ  ಬೆಂಗಳೂರು : ಕಿರಕ್ ಪಾರ್ಟಿ ಚಿತ್ರದ ಮುಖಾಂತರ ತಮ್ಮ ಸಿನಿ ಕೆರಿಯರ್ ಸ್ಟಾರ್ಟ್ ಮಾಡಿದ ಮಲೆನಾಡಿನ ಬೆಡಗಿ ಸಂಯುಕ್ತ ಹೆಗ್ಡೆ. ಅಥಿತಿಯಾಗಿ ಬಿಗ್ ಬಾಸ್ ಗೆ ಹೊದ ಸಂಯುಕ್ತ ಅಲ್ಲು ಕಿರಿಕ್ ಮಾಡಿ ಹೊರ ಬಂದಿದ್ದಳು. ಇದರ ಬೆನ್ನಲೆ ಕನ್ನಡದಲ್ಲಿ ಕಾಲೇಜು ಕುಮಾರ ಚಿತ್ರದಲ್ಲಿ ನಟಿಸಿ ನಟನೆಯಲ್ಲಿ ಸೈಯನಿಸಿಕೊಂಡಿದ್ದಾಳೆ ಹೆಗ್ಡೆ. ಸದ್ಯ ತಮಿಳು ಚಿತ್ರರಂಗದಲ್ಲಿ ನಟಿಸತ್ತಿದ್ದು ಕಾಲಿವುಡ್ ನಲ್ಲಿ ಬ್ಯುಸಿಯಾಗಿದ್ದ ಇಕೆಗೆ  ಈಗ ಕಾಲಿವುಡ್ ನಲ್ಲಿ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿರುವ ಸುದ್ದಿ...Kannada News Portal