ಬೆಂಗಳೂರು: ದೋಸ್ತಿ  ಸರ್ಕಾರದಲ್ಲಿ  ಹಲವು ತಿಕ್ಕಾಟ ನಡೆಯುತ್ತಿರುವ ಸಮಯದಲ್ಲೇ ನಾನು ಕೆಪಿಸಿಸಿ  ಅಧ್ಯಕ್ಷ ಗಾದಿಯ ಆಕಾಂಕ್ಷಿಯಲ್ಲ, ನನಗೆ ಅದರ ಅಗತ್ಯವೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ನನನ್ನು  ಇನ್ನು ಒಂದು ವರ್ಷ   ಯಾರು ಟಚ್ ಮಾಡಲು ಸಾಧ್ಯವಿಲ್ಲ ಎಂದು ಹಾಲಿ ಸಿಎಂ ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಮೇಲಾಗಿ ನನಗೆ ಇದು ಅರ್ಥವಾಗುವುದು  ಬೇಡ,  ಏಕೆ ಹೇಳಿದ್ದಾರೆ , ಅವರ ಉದ್ದೇಶವೇನು ಎಂಬುದರ ಬಗ್ಗೆ ಅವರನ್ನೇ  ಕೇಳಿ ಎಂದು ಹೇಳಿದ್ದಾರೆ.

ಪೂರ್ಣ ಬಜೆಟ್ ಮಂಡನೆ  ಮಾಡದೆ ಈಗಾಗಲೇ ಘೊಷಣೆಯಾಗಿರುವ ಕಾರ್ಯಕ್ರಮಗಳಿಗೆ  ಹಣ ಮಂಜೂರು ಮಾಡಲು ಸಂವಿಧಾನದಲ್ಲಿ ಅವಕಾಶವಿದೆ ಅದನ್ನು ಉಪಯೋಗ ಮಾಡಿಕೊಂಡು ಹಣ ಬಿಡುಗಡೆ ಮಾಡಲಿ, ಇನ್ನು ಬೇಕೆಂದರೆ ಪೂರಕ ಬಜೆಟ್ ಮಂಡನೆ ಮಾಡಿಕೊಳ್ಳಲಿ ಅದು ಬಿಟ್ಟು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡುವುದು ಬೇಕಿಲ್ಲ , ಅಗತ್ಯವೂ ಇಲ್ಲ ಎಂದೂ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/06/sidharamiha2-kXdG-621x414@LiveMint.jpghttp://bp9news.com/wp-content/uploads/2018/06/sidharamiha2-kXdG-621x414@LiveMint-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ದೋಸ್ತಿ  ಸರ್ಕಾರದಲ್ಲಿ  ಹಲವು ತಿಕ್ಕಾಟ ನಡೆಯುತ್ತಿರುವ ಸಮಯದಲ್ಲೇ ನಾನು ಕೆಪಿಸಿಸಿ  ಅಧ್ಯಕ್ಷ ಗಾದಿಯ ಆಕಾಂಕ್ಷಿಯಲ್ಲ, ನನಗೆ ಅದರ ಅಗತ್ಯವೂ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನನನ್ನು  ಇನ್ನು ಒಂದು ವರ್ಷ   ಯಾರು ಟಚ್ ಮಾಡಲು ಸಾಧ್ಯವಿಲ್ಲ ಎಂದು ಹಾಲಿ ಸಿಎಂ ಕುಮಾರಸ್ವಾಮಿ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಮೇಲಾಗಿ ನನಗೆ ಇದು ಅರ್ಥವಾಗುವುದು  ಬೇಡ,  ಏಕೆ ಹೇಳಿದ್ದಾರೆ , ಅವರ ಉದ್ದೇಶವೇನು ಎಂಬುದರ ಬಗ್ಗೆ...Kannada News Portal