ಬೆಂಗಳೂರು : ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಹಿಂದೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ  ಯಶಸ್ವಿಯಾಗಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದರು. ಈ ಹಿಂದೆ  ಡಿ.ಕೆ.ಶಿವಕುಮಾರ್​ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಪರ ಬ್ಯಾಟಿಂಗ್ ಕೂಡ​​ ಮಾಡಿದ್ದರು.

ಹಾಗೂ  ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಮತ್ತು ಜಾರಿಕಿಹೊಳಿ ಅವರ ನಡುವೆ ಮುಸುಕಿನ ಗುದ್ದಾಟ ಜೋರಾಗಿ ನಡೆದಿತ್ತು. ಇವರ ಗಲಾಟೆಯನ್ನು ತಣ್ಣಗೊಳಿಸಲು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದಾರಾಮಯ್ಯ  ಬರೆಬೇಕಾಯಿತು. ಇನ್ನು ನೂತನ ಮಹಿಳ ಘಟಕ ಅಧ್ಯಕ್ಷರಾಗಿ ನೇಮಕಗೊಂಡಿರುವ ಪುಷ್ಪಾ ಅಮರನಾಥ್​ ಅವರು ಹುಣಸೂರು ಮಾಜಿ ಶಾಸಕ ಮಂಜುನಾಥ್​ ಅವರ ನಾದಿನಿ ಆಗಿರುವುದು ವಿಶೇಷವಾಗಿದೆ.

 
ಕೆಪಿಸಿಸಿ ಮಹಿಳಾ ಘಟಕದ ನೂತನ ಅಧ್ಯಕ್ಷೆಯಾಗಿ ಮೈಸೂರಿನ ಪುಷ್ಪಾ ಅಮರನಾಥ್​ ಅವರು ಆಯ್ಕೆಯಾಗಿದ್ದರೆ. ಮಹಿಳಾ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಬಾರಿ ಲಾಬಿ ನಡೆದಿತ್ತು. ಸದ್ಯ ಕೆಪಿಸಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ಪುಷ್ಪಾ ಅಮರನಾಥ್ ಅವರು ಸಿದ್ದರಾಮಯ್ಯ ಅವರ ಅಪ್ತವಲಯದಲ್ಲೂ  ಗುರಿತಿಸಿಕೊಂಡಿದ್ದರು.

ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಸ್ಥಾನಕ್ಕೆ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಪುಷ್ಪಾ ಅಮರನಾಥ ನೇಮಕವಾಗಿರುವುದು ಹಲವರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ. ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ವಿರುದ್ಧ ಜಗಳಕ್ಕೆ ನಿಂತಿದ್ದ ಲಕ್ಷ್ಮೀ ಹೆಬ್ಬಾಳ್ಕರ್​ ವಿವಾದದ ಕೇಂದ್ರಬಿಂದುವಾಗಿದ್ದರು.  ಆ ವೇಳೆ ಅವರು ನೀಡಿದ್ದ ಕೆಲ ಹೇಳಿಕೆಗಳಿಂದಾಗಿ ರಾಜ್ಯ ಕಾಂಗ್ರೆಸ್​ ನಾಯಕರು ಮುಜುಗರ ಅನುಭವಿಸುವಂತಾಗಿತ್ತು.

ಈ ಹಿನ್ನೆಲೆಯಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಸಲು ಆಗಿನಿಂದಲೇ ಕಸರತ್ತು ಆರಂಭವಾಗಿತ್ತು.

ರಾಜ್ಯದ ಕೆಲ ಕಾಂಗ್ರೆಸ್​ ನಾಯಕರು ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಮುಂದುವರೆಸಬೇಕೆಂದು ಹೈಕಮಾಂಡ್​ ಮೇಲೆ ಒತ್ತಡ ಹೇರಿದ್ದರು. ಈ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಗಳಾಗಿದ್ದ ಕೆಪಿಸಿಸಿ  ಕಾರ್ಯದರ್ಶಿಗಳಾದ ನಾಗಲಕ್ಷ್ಮೀ ಚೌಧರಿ, ಶಾರದಾ ಗೌಡ, ಭಾರತಿ ಶಂಕರ್‌, ಮಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೆರ್ಲೆಟ್‌ ಪಿಂಟೋ ಅವರನ್ನು ಹೈಕಮಾಂಡ್​ ನಾಯಕರು  ದೆಹಲಿಗೆ ಕರೆಸಿ ಸಂದರ್ಶನ ನಡೆಸಿದ್ದರು.

ನಾಗಲಕ್ಷ್ಮೀ ಚೌಧರಿ ಮತ್ತು ಪುಷ್ಪಾ ಅಮರನಾಥ್​ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಖಚಿತ ಎನ್ನಲಾಗಿತ್ತು. ಖುದ್ದು ರಾಹುಲ್​ ಗಾಂಧಿಯೇ ಸಂದರ್ಶನ ನಡೆಸಿ  ಪುಷ್ಪಾ ಅಮರನಾಥ್​ ಅವರ ಹೆಸರನ್ನು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ  ಅಂತಿಮಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪುಷ್ಪಾ ಅವರ ಆಯ್ಕೆಯಿಂದ ಅಧ್ಯಕ್ಷೆ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ನಾಗಲಕ್ಷ್ಮೀ ಚೌಧರಿ ಅವರಿಗೆ ಭಾರೀ ನಿರಾಸೆ ಉಂಟಾಗಿದೆ. ಈ ಸ್ಥಾನಕ್ಕಾಗಿ ಸಾಕಷ್ಟು ಲಾಬಿ ನಡೆಸಿದ್ದ ಚೌಧರಿಗೆ ಕೊನೆಗೂ ಹಿನ್ನಡೆಯಾಗಿದೆ. ಪುಷ್ಪಾ ಅಮರನಾಥ್ ಸಿದ್ದರಾಮಯ್ಯನವರ ತವರಿನವರಾಗಿದ್ದು, ಈ ಹಿಂದೆ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿಯೂ ಅಧಿಕಾರ ನಿರ್ವಹಿಸಿದ್ದರು.

Please follow and like us:
0
http://bp9news.com/wp-content/uploads/2018/11/pushpalatha-amarnath.jpghttp://bp9news.com/wp-content/uploads/2018/11/pushpalatha-amarnath-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಬೆಂಗಳೂರು : ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಹಿಂದೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾಗಿ  ಯಶಸ್ವಿಯಾಗಿ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದರು. ಈ ಹಿಂದೆ  ಡಿ.ಕೆ.ಶಿವಕುಮಾರ್​ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಪರ ಬ್ಯಾಟಿಂಗ್ ಕೂಡ​​ ಮಾಡಿದ್ದರು. ಹಾಗೂ  ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಮತ್ತು ಜಾರಿಕಿಹೊಳಿ ಅವರ ನಡುವೆ ಮುಸುಕಿನ ಗುದ್ದಾಟ ಜೋರಾಗಿ ನಡೆದಿತ್ತು. ಇವರ ಗಲಾಟೆಯನ್ನು ತಣ್ಣಗೊಳಿಸಲು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದಾರಾಮಯ್ಯ  ಬರೆಬೇಕಾಯಿತು. ಇನ್ನು ನೂತನ ಮಹಿಳ ಘಟಕ ಅಧ್ಯಕ್ಷರಾಗಿ ನೇಮಕಗೊಂಡಿರುವ ಪುಷ್ಪಾ...Kannada News Portal