ಬೆಂಗಳೂರು :  ಹವ್ಯಕ ಭವನ ಮಲ್ಲೇಶ್ವರಂನಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಹಾಗೂ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅಭಿಮಾನಿ ಬಳಗ ಇವರಿಂದ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಹಾಗೂ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅಭಿಮಾನಿ ಬಳಗ ಇವರಿಂದ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಇವರು ಪ್ರಸ್ತುತ ವಿಧಾನ ಸಭೆಯ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿರುವುದಕ್ಕೆ ಅಭಿನಂದನಾ ಪೂರ್ವಕ ಸನ್ಮಾನವನ್ನು ಮಾಡಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಮಾತನಾಡಿದ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅವರು ಅಖಿಲ ಹವ್ಯಕ ಮಹಾಸಭೆಯೊಂದಿಗೆ ಸಂಪರ್ಕ ಮತ್ತು ಕೆಲಸ ಕಾರ್ಯಗಳಲ್ಲಿ ನಾನೂ ಈ ಹಿಂದೆಯೂ ಸಹಾ ಇದ್ದೇನೆ ಈಗಲೂ ಇರುತ್ತೇನೆ ಎಂದು ಮಹಾಸಭೆಯ ಬಗ್ಗೆ ಇರುವ ಭಾವನೆ ಹಂಚಿಕೊಂಡರು. ಹಾಗೇ ನನ್ನ ಅಭಿಮಾನಿ ಬಳಗಕ್ಕೂ ಸಹ ಇನ್ನೂ ಮುಂದೆ ನನ್ನ ಸಹಾಯ ಮತ್ತು ಸಂಪರ್ಕವನ್ನಿಟ್ಟು ಸಹಕರಿಸುತ್ತೇನೆ ಹಾಗೂ ಮಲ್ಲೇಶ್ವರಂ ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದು ಹೇಳಿದರು.

ಈ ಸಭೆಯಲ್ಲಿ ಅಭ್ಯಾಗತರಾಗಿ ಕಾಡುಮಲ್ಲೇಶ್ವರ ವಾರ್ಡ್‌ನ ಶ್ರೀ ಮಂಜುನಾಥ ರಾಜು ಉಪಸ್ಥಿತರಿದ್ದರು. ಡಾ. ಸಿ.ಎನ್. ಅಶ್ವಥ್‌ನಾರಾಯಣ್ ರವರಿಗೆ ಅಭಿನಂದನಾ ನುಡಿಯನ್ನು ಮಹಾಸಭೆಯ ನಿರ್ದೇಶಕರಾದ ಶ್ರೀ ಎನ್.ಆರ್. ಹೆಗಡೆ ರಾಘೋಣ ನುಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಕಜೆಯವರು ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅವರು ಮಹಸಭೆಯೊಂದಿಗಿದ್ದು ಎಲ್ಲಾ ಕೆಲಸ ಮತ್ತು ಅವರ ಸಮಾಜಸೇವೆಗೆ ತಮ್ಮ ಶ್ರಮ ವಹಿಸುತ್ತಿರುವುದರ ಬಗ್ಗೆ ಶ್ಲಾಘಿಸಿದರು. ಮತ್ತು ಈ ಸಮಾರಂಭದದಲ್ಲಿ ಹಾಗೂ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅಭಿಮಾನಿ ಬಳಗದ ಪ್ರತಿನಿಧಿಯಾದ ವಿನಾಯಕ ಪ್ರಾವಿಶನ್ ಸ್ಟೋರ‍್ಸ್ ಮಾಲಿಕರಾದ ಶ್ರೀ ರಾಮಣ್ಣ ಇವರಿಗೂ ಸನ್ಮಾನಿಸಲಾಯಿತು. ಈ ಅಭಿನಂದನಾ ಸಮಾರಂಭದಲ್ಲಿ ಮಹಾಸಭೆಯ ಉಪಾಧ್ಯಕ್ಷರಾದ ಶ್ರೀಧರ ಜೆ ಭಟ್ಟ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾದ ಶ್ರೀ ಪ್ರಶಾಂತಕುಮಾರ ಭಟ್ಟ ಹಾಗೂ ಶ್ರೀಧರ ಎಸ್ ಭಟ್ಟ, ಸಾಲೇಕೊಪ್ಪ ಮತ್ತು ಕೋಶಾಧಿಕಾರಿಯಾದ ಕೃಷ್ಣಮೂರ್ತಿ ಭಟ್ಟ ಯಲಹಂಕ, ನಾರಾಯಣ ಭಟ್ಟ ಹುಳೇಗಾರು ಹಾಗೂ ಮಹಾಸಭೆಯ ನಿರ್ದೇಶಕರು, ಆಡಳಿತ ಮಂಡಳಿ ಸದಸ್ಯರು, ಸಂಚಾಲಕರು, ಹಾಗೂ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅಭಿಮಾನಿ ಬಳಗದ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

 

Please follow and like us:
0
http://bp9news.com/wp-content/uploads/2018/07/DSCF1825-1.jpghttp://bp9news.com/wp-content/uploads/2018/07/DSCF1825-1-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು ಗ್ರಾಮಾಂತರಬೆಂಗಳೂರು :  ಹವ್ಯಕ ಭವನ ಮಲ್ಲೇಶ್ವರಂನಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ.) ಬೆಂಗಳೂರು ಹಾಗೂ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅಭಿಮಾನಿ ಬಳಗ ಇವರಿಂದ ಡಾ. ಸಿ.ಎನ್. ಅಶ್ವಥ್‌ನಾರಾಯಣ್ ಅವರಿಗೆ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180727110746'); document.getElementById('div_1520180727110746').appendChild(scpt); ಅಖಿಲ...Kannada News Portal