ಹಾಸನ : ಹಾಸನದಲ್ಲಿ ಜೂನ್ 5 ರಿಂದ 11ರತ ತನಕ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ. ಹಾಸನ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಮಾವು ಮೇಳದ ಬಗ್ಗೆ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಇಲಾಖೆ, ಹಾಸನ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಜಂಟಿಯಾಗಿ ಮಾವು ಮೇಳವನ್ನು ಆಯೋಜಿಸಿವೆ.

ಜೂನ್ 5ರಿಂದ 11ರ ತನಕ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಾವು ಮೇಳ ಆಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಅವರು ಜೂನ್ 5ರಂದು ಬೆಳಗ್ಗೆ 11.30ಕ್ಕೆ ಮಾವು ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ರಾಮನಗರ ಮತ್ತು ಬೆಂಗಳೂರಿನಿಂದ 10 ಪ್ರಗತಿಪರ ಮಾವು ಹಾಗೂ ಹಲಸು ಬೆಳೆಯುವ ರೈತರು ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಮೇಳಕ್ಕಾಗಿ ತರಲಿದ್ದಾರೆ.

ಮಧ್ಯವರ್ತಿಗಳ ಹಾವಳಿಯಿಲ್ಲದೆ ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಸಾರ್ವಜನಿಕರಿಗೆ ಮಾವು, ಹಲಸು ದೊರೆಯಲು ಮಳಿಗೆಗಳಲ್ಲಿ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ.
ದಿನಾಂಕ 5ರಂದು ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯ ವರೆಗೆ ಮೇಳ ನಡೆಯಲಿದೆ. ಕರ್ನಾಟಕ ರಾಜ್ಯದಲ್ಲಿ ಬೆಳೆದ ಕಾರ್ಬೈಡ್ ಮುಕ್ತ ವಿವಿಧ ತಳಿಯ ಮಾವು ತಳಿಗಳು ಹಾಗೂ ಮಾವಿನ ಹಣ್ಣಿನಿಂದ ತಯಾರಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.
ಸುಧಾರಿತ ಮಾವು ತಳಿಗಳಾದ ಆಲ್ಫಾನ್ಸೋ, ಬಾದಾವಿ, ಮಲ್ಲಿಕಾ, ರಸಪುರಿ, ಸೇಂದೂರ, ದಶಹರಿ, ಕೇಸರ್, ನೀಲಮ್, ಮಲ್ಗೋವ ಇತ್ಯಾದಿ ಮಾವಿನ ಹಣ್ಣುಗಳು ಪ್ರದರ್ಶನ ಹಾಗೂ ಮಾರಾಟ ಲಭ್ಯವಿರುತ್ತವೆ.

Please follow and like us:
0
http://bp9news.com/wp-content/uploads/2018/06/City-3-22.jpghttp://bp9news.com/wp-content/uploads/2018/06/City-3-22-150x150.jpgBP9 Bureauಕೃಷಿಪ್ರಮುಖಹಾಸನಹಾಸನ : ಹಾಸನದಲ್ಲಿ ಜೂನ್ 5 ರಿಂದ 11ರತ ತನಕ ಮಾವು ಮತ್ತು ಹಲಸು ಮೇಳವನ್ನು ಆಯೋಜಿಸಲಾಗಿದೆ. ಹಾಸನ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಮಾವು ಮೇಳದ ಬಗ್ಗೆ ಮಾಹಿತಿ ನೀಡಿದ್ದಾರೆ. ತೋಟಗಾರಿಕೆ ಇಲಾಖೆ, ಹಾಸನ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಜಂಟಿಯಾಗಿ ಮಾವು ಮೇಳವನ್ನು ಆಯೋಜಿಸಿವೆ. ಜೂನ್ 5ರಿಂದ 11ರ ತನಕ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಾವು ಮೇಳ...Kannada News Portal