ಕೆ.ಆರ್. ಪುರಂ:  ಸಾರ್ವಜನಿಕರಿಗೆ  ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಕ್ಕಾಗಿ ಶ್ರಮಿಸುತ್ತಿದ್ದು ಇಂದು ಹೊರಮಾವು ವಾರ್ಡ್ನ ಸುಮಾರು 300 ಮನೆಗಳಿಗೆ ಕಾವೇರಿ ಪೈಪ ಲೈನ್ ಅಳವಡಿಸುವ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ ನೀಡಿದರು.

ಹೊರಮಾವು ವಾರ್ಡ್’ನ ಸಾಂಗ್ಲಿಯಾನ ಲೇಔಟ್,  ಮಾರುತಿ ಬಡಾವಣೆ, ಚಂದ್ರಿಕಾ ಸೋಪ್ ಫ್ಯಾಕ್ಟರಿ ರಸ್ತೆ ಹಾಗೂ ಸ್ಪಂದನ ಬಡಾವಣೆಯಲ್ಲಿ ಸುಮಾರು 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ 300 ಮನೆಗಳಿಗೆ ಕಾವೇರಿ ನೀರಿನ ಸೌಲಭ್ಯಗಳನ್ನು ಒದಗಿಸಲು ಪೈಪ್ ಲೈನ್ ಕಾಮಗಾರಿಗೆ ಚಾಲನೆ ನೀಡಿದ್ದು.

ಈ ಕಾಮಗಾರಿಯು  1 ತಿಂಗಳಲ್ಲಿ ಮುಗಿಯಲಿದ್ದು ಸುಮಾರು 750 ಕಿ.ಮಿ ದೂರದಷ್ಟು ಕಾವೇರಿ ನೀರು ಸರಬರಾಜು ಮಾಡಲಾಗುವುದು. 110 ಹಳ್ಳಿ ಕಾವೇರಿ ಕುಡಿಯುವ ನೀರಿನ ಯೋಜನೆಯ ಅಡಿಯಲ್ಲಿ ಹೋರಮಾವು ಅಗರದ ಹಲವು ಬದವಣೆಗಳು ಹಾಗೂ  ಮುಂತಾದ ಬಡಾವಣೆಗಳಲ್ಲಿ ಕಾವೇರಿ ಪೈಪ್ ಲೈನ್ ಕಾಮಗಾರಿಗೆ ಮಾಡಲಾಗಿದೆ.

ಇದೆ ವೇಳೆ ಶಾಸಕರು ಬಡಾವಣೆಯ ಮುಖಂಡರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿ, ಶೀಘ್ರವೇ ಗುಣಮಟ್ಟದ ಕಾಮಗಾರಿಗಳನ್ನು ಮಾಡಿ ವಾರ್ಡ್ ನ ಜನರಿಗೆ ನೀರಿನ ಸೌಲಭ್ಯ ದೊರೆಯುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇದೆ ಸಂದರ್ಭದಲ್ಲಿ ಬಿ.ಎಸ್.ಏನ್. ಎಲ್. ನಿರ್ದೇಶಕರಾದ ರಾಜೇಶ್, ಮುಖಂಡರಾದ ಸತೀಶ್, ಪಟೇಲ್, ಬಿಜು ಪ್ಯಾರೆಲ್, ಪಟೇಲ್ ಪತಿ, ಆನಂದ್, ಹನುಮಂತು ಹಾಗೂ ಮುಂತಾದವರು ಉಪಸ್ಥಿತರಿದ್ದರು.
ವರದಿ: ಪರಿಸರ ಮಂಜು, ಕೆ.ಆರ್.ಪುರ

Please follow and like us:
0
http://bp9news.com/wp-content/uploads/2018/03/WhatsApp-Image-2018-03-26-at-8.56.04-AM-1024x768.jpeghttp://bp9news.com/wp-content/uploads/2018/03/WhatsApp-Image-2018-03-26-at-8.56.04-AM-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಕೆ.ಆರ್. ಪುರಂ:  ಸಾರ್ವಜನಿಕರಿಗೆ  ಮೂಲ ಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಅಭಿವೃದ್ಧಿಕ್ಕಾಗಿ ಶ್ರಮಿಸುತ್ತಿದ್ದು ಇಂದು ಹೊರಮಾವು ವಾರ್ಡ್ನ ಸುಮಾರು 300 ಮನೆಗಳಿಗೆ ಕಾವೇರಿ ಪೈಪ ಲೈನ್ ಅಳವಡಿಸುವ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ್ ಚಾಲನೆ ನೀಡಿದರು. ಹೊರಮಾವು ವಾರ್ಡ್'ನ ಸಾಂಗ್ಲಿಯಾನ ಲೇಔಟ್,  ಮಾರುತಿ ಬಡಾವಣೆ, ಚಂದ್ರಿಕಾ ಸೋಪ್ ಫ್ಯಾಕ್ಟರಿ ರಸ್ತೆ ಹಾಗೂ ಸ್ಪಂದನ ಬಡಾವಣೆಯಲ್ಲಿ ಸುಮಾರು 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ 300 ಮನೆಗಳಿಗೆ ಕಾವೇರಿ ನೀರಿನ ಸೌಲಭ್ಯಗಳನ್ನು ಒದಗಿಸಲು...Kannada News Portal