ಬೆಂಗಳೂರು : ನರೇಂದ್ರ ಮೋದಿಯವರ ಮೇಕ್​​ ಇನ್​​ ಇಂಡಿಯಾ ಚಿಂತನೆ ಭಾರತದಲ್ಲಿ ಸಂಚಲನ ಮೂಡಿಸಿ ಅನೇಕರಿಗಿ ಪ್ರೇರಣೆ ದೊರೆತು ಹೊಸ, ಹೊಸ ಪ್ರಯೋಗಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಸಮಾಜಿಕ ಜಾಲತಾಣಗಳಿಗೆ ಪೈಪೋಟಿಗೆ ಸಿದ್ದವಾಗಿದೆ ಭಾರದ ಒಂದು ಸಮಾಜಿಕ ಜಾಲತಾಣ.. ಆ ಬಗ್ಗೆ  ಮಾಹಿತಿ ಇಲ್ಲಿದೆ ನೋಡಿ…

ನನಗೆ ಯೂಟ್ಯೂಬ್ ನಲ್ಲಿ ಟೆಕ್ ನ್ಯೂಸ್ ನೋಡುವುದೆಂದರೆ ಅದೇನೋ ಹುಚ್ಚು! ಅವತ್ತು ಅಗಸ್ಟ್ ಹದಿನೈದು ಶರ್ಮಾಜಿ ಟೆಕ್ನಿಕಲ್ ಎಂಬ ಯೂಟ್ಯೂಬ್ ಚಾನಲ್ ಅಲ್ಲಿ ಭಾರತೀಯ ಮೂಲದ ಮೂಷಕ್ ಬಗ್ಗೆ ಪರಿಚಯ ಮಾಡಲಾಯ್ತು! ಜೊತೆಗೆ ಸಂಸ್ಥಾಪಕ ಅನುಪಮ್ ಗೌರ್ ಜೊತೆಯಲ್ಲಿ ಸಂದರ್ಶನವಿತ್ತು! ನನಗಂತು ಒಮ್ಮೆ ಖುಷಿ ತಡೆಯೋಕಾಗಲಿಲ್ಲ..!

ಭಾರತ ನಮ್ಮ ಕೈ ಕೆಳಗಿನ ಆಳು ಎಂದು ಅಣುಕಿಸುತ್ತಿದ್ದ ವಿದೇಶಿ ಸಾಮಾಜಿಕ ಜಾಲತಾಣಗಳಿಗೆ ಸೆಡ್ಡು ಹೊಡೆಯೋದಕ್ಕೆ ಭಾರತೀಯ ಜಾಲತಾಣ ಮೂಷಕ ತಯಾರಾಗಿ ನಿಂತಿದ್ದ..! ಸುಮಾರು ನಾಲ್ಕುವರೆ ವರ್ಷಗಳ ಶ್ರಮ ಅದು! ೨೦೧೪ರ ಅಂತ್ಯದಲ್ಲಿ ಸಣ್ಣ ಸರ್ವರ್ ಒಂದಿಗೆ ತಯಾರಾದ ಮೂಷಕ್ ಇವತ್ತು ಟ್ವಿಟ್ಟರ್ ಅನ್ನು ನಾಚಿಸುವಂತೆ ಬೆಳೆದು ನಿಂತಿದೆ..!

ಅನುಪಮ್ ಗೌರ್​​ಗೆ ಪ್ರೇರಣೆ ಸಿಕ್ಕಿದ್ದು ನೆರೆಯ ದೇಶ ಚೀನಾದಿಂದ! ಚೀನಾಕ್ಕೆ ತನ್ನದೆ ಆದ ಭಾಷೆಯಲ್ಲಿ ತನ್ನದೆ ಆದ ಜಾಲತಾಣಗಳಿವೆ, ಜಪಾನ್ಗೂ ಅಷ್ಟೆ! ರಷ್ಯಾ ಕೂಡ ಇದಕ್ಕೆ ಹೊರತಾಗಿಲ್ಲ! ಭಾರತಕ್ಕೇನಿದೆ ಅಂತ ಒಮ್ಮೆ ಪ್ರಶ್ನಿಸಿದರೆ ಊಹೂಂ ಅಂತಹದೊಂದು ಜಾಲತಾಣ ಸಿಕ್ಕೋದಿಲ್ಲ! ಈ ಒಂದು ಪ್ರಶ್ನೆ ಅನುಪಮ್ ಗೌರ್ ಮೂಷಕವನ್ನ ತಯಾರಿಸುವಂತೆ ಮಾಡಿತ್ತು! ಮೂಷಕ್ ಜಾಲತಾಣದ ಮೂಲ ಉದ್ದೇಶವೆ ಟ್ವಿಟ್ಟರ್ನಂತಹ ಜಾಲತಾಣಗಳಿಗೆ ಸೆಡ್ಡು ಹೊಡೆಯಬೇಕು ಅನ್ನೋದು! ಇತ್ತ ಟ್ವಿಟ್ಟರ್ ಅಷ್ಟು ಮೂಷಕ್ ಬೆಳೆದಿಲ್ಲ! ಮೂಷಕ್ಗೆ ದೇಶಿಯ ಸೊಗಡಿದೆ, ಟ್ವಿಟ್ಟರ್ ನಂತೆ ಆಂಗ್ಲಿಯತೆಯ ಛಾಪು ಎಳ್ಳಷ್ಟು ಕಾಣಿಸೋದಿಲ್ಲ! ವಾರದ ಹಿಂದೆ ಕನ್ನಡದಲ್ಲಿ ಮೂಷಕ್ ಬಿಡುಗಡೆಯಾಗಿತ್ತು! ಮೂಷಕ್ ಕನ್ನಡದಲ್ಲಿ ಕೆಲಸ ಮಾಡುವ ಭಾಗ್ಯವೂ ಸಿಕ್ಕಿತ್ತು, ನಿಜ ಹೇಳ ಬೇಕೆಂದರೆ ಅನುಪಮ್ ಗೌರ್ ಆರ್ಥಿಕವಾಗಿ ಸ್ಥಿತಿವಂತರಲ್ಲ! ಒಮ್ಮೆ ಮೂಷಕದ ಕನಸು ಬಿಟ್ಟೇ ಬಿಡಬೇಕೆಂದು ಯೋಚಿಸಿ ಬಿಟ್ಟಿದ್ದರಂತೆ! ಆದರೂ ದೇಶಿಯತೆಯ ಹುರುಪು ಅವರನ್ನ ಕೈ ಬಿಡಲಿಲ್ಲ, ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮೂಷಕ್ ತಯಾರಾಗಿದ್ದಾನೆ! ಭಾರತಕ್ಕೆ ತನ್ನದೇ ಆದ ಜಾಲತಾಣವಿಲ್ಲ ಎಂಬ ಶಾಪವನ್ನ ಅಳಿಸುವ ಪ್ರಯತ್ನ ಆತನದ್ದು.

ಫೇಸ್ಬುಕ್ – ಟ್ವಿಟರ್ ಭಾರತ ಸೇರಿದಂತೆ ಬಹಳಷ್ಟು ದೇಶದ ಭದ್ರತೆಯ ಮೇಲೆ ಕಣ್ಣಿಟ್ಟು ಕುಳಿತಿವೆ, ಅಮೇರಿಕಾವನ್ನ ಪ್ರೊಟೆಕ್ಟ್ ಮಾಡಿಕೊಳ್ಳೋದಕ್ಕೆ ಪೇಸ್ಬುಕ್ ಟ್ವಿಟ್ಟರ್ಗಳನ್ನ ಅಮೇರಿಕಾ ಕದ್ದು ನೋಡುತ್ತಿದೆ! ಪೇಸ್ಬುಕ್ ಬಂದು ಹದಿನಾಲ್ಕು ವರ್ಷ! ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲತಾಣವಾಗಿ ಬೆಳೆದುನಿಂತಿದೆ! ಅದನ್ನ ಬೆಳೆಸಿದವರಲ್ಲಿ ಮುಕ್ಕಾಲು ಅಂಶ ಭಾರತೀಯರ ಪಾಲು ಇದ್ದೇ ಇದೆ! ಇತ್ತ ಟ್ವಿಟ್ಟರ್ ಅಲ್ಲಾಗಿರಲಿ ಅಥವಾ ಪೇಸ್ಬುಕ್ ಅಲ್ಲಾಗಿರಲಿ ಎಳ್ಳಷ್ಟು ಭಾರತೀಯ ಛಾಪು ಇಲ್ಲವೇ ಇಲ್ಲ! ಮೂಷಕ್ ಶುದ್ಧ ದೇಸಿಯತೆಗೆ ಒಗ್ಗಿಕೊಳ್ಳುವಂತಿದೆ! ಮೂಷಕ ನಿರ್ಮಾತೃ ಅನುಪಮ್ ಗೌರ್ ಮೂಷಕದಲ್ಲಿ ಆಂಗ್ಲ ಭಾಷೆಗಿಂತ ಪ್ರಾದೇಶಿಕ ಭಾಷೆಗಳಿಗೆ ಅನುವು ಮಾಡಿಕೊಟ್ಟಿದ್ದಾರೆ! ಕನ್ನಡಿಗರಿಗೆ ಶುದ್ಧ  ಕನ್ನಡ, ಹಿಂದಿಗಳಿಗೆ ಶುದ್ಧ ಹಿಂದಿ ಗುಜರಾತಿಗರಿಗೆ ಅಪ್ಪಟ ಗುಜರಾತಿ ನೋಡೋದಕ್ಕೆ ಸಿಗುತ್ತೆ! “ಪ್ರತಿಯೊಬ್ಬನಿಗೂ ಅವನ ಮಾತೃ ಭಾಷೆಯ ಮೇಲೆ ಪ್ರೀತಿ ಇರಲೇ ಬೇಕು, ಆದರೆ ಇತ್ತೆಚೆನ ದಿನಗಳಲ್ಲಿ ಇಂಗ್ಲೀಷ್ ಮತ್ತು ಇತರ ಭಾಷೆಗಳ ಪ್ರಭಾವದಿಂದಾಗಿ ಮಾತೃಭಾಷೆಯ ಮೌಲ್ಯವನ್ನ ಅರಿತುಕೊಳ್ಳುವ ಶಕ್ತಿ ಆತನಲ್ಲಿಲ್ಲ ಆದುದರಿಂದ ಮೂಷಕ್ ತಯಾರಿಸಿದ್ದೇವೆ, ಹಿಂದಿ ಸೇರಿದಂತೆ ಕನ್ನಡ ಇತ್ಯಾದಿ ಭಾಷೆಗಳು ಬೆಳೆಯಬೇಕು, ಬಹಳಷ್ಟು ಜನರಿಗೆ ಶುದ್ಧ ಮಾತೃಭಾಷೆಯ ಅರಿವಿಲ್ಲ” ಎಂದು ಅನುಪಮ್ ಗೌರ್ ಮೂಷಕದ ಸ್ಥಾಪನೆಯ ಹಿಂದೆ ತಾನು ಕಂಡ ಕನಸನ್ನ ಹಂಚಿಕೊಳ್ಳುತ್ತಾರೆ! ಏನೆ ಇರಲಿ ಭಾರತಕ್ಕೆ ಜಾಲತಾಣವಿಲ್ಲವೆಂದು ಹಂಗಿಸುತ್ತಿದ್ದ ಕೆಲವು ದೇಶಗಳಿಗಂತು ಮೂಷಕ್ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಬಹುದು. ಸ್ನಾಪ್ ಚಾಟ್ ಭಾರತದಂತ ಬಡ ರಾಷ್ಟ್ರಗಳಿಗಲ್ಲ ಎಂದಿದ್ದ ಸಿ.ಇ.ಓ ಹಾಗೂ ಭಾರತೀಯರು ಇಂಗ್ಲೆಂಡಿಗರ ಕೈ ಕೆಳಗೆ ದುಡಿಯಬೇಕು ಎಂದು ಹಂಗಿಸಿದ್ದ ಪೇಸ್ಬುಕ್ ಕಾರ್ಯದರ್ಶಿಗಳ ನೆನಪು ನನಗಾಗುತ್ತೆ.

 

ಕಾರಣ ಇಷ್ಟೆ ಅವರಿಗೆಲ್ಲ ತಕ್ಕ ಉತ್ತರ ನೀಡೋದಕ್ಕೆ ಮೂಷಕ್ ಬಂದಿದೆ ಎಂದು, “ಮೂಷಕ್ ಭಾರತದ್ದು, ಭಾರತೀಯರದ್ದು, ನಾನು ಪ್ರಥಮ ಸೇವಕ” ಎಂದು ಅನುಪಮ್ ಗೌರ್ ನನ್ನೊಡನೆ ಆಡಿದ ಮಾತಿನ್ನು ಕಿವಿಯಲ್ಲಿ ಗುಯ್ ಗುಡುತ್ತಿದೆ, ಕನ್ನಡತನ ಉಳಿಸುವುದಕ್ಕೆ ಮೂಷಕ್ ಕನ್ನಡ ತಯಾರಾಗಿ ನಿಂತಿದೆ! ಈಗಾಗಲೆ ಒಂದಷ್ಟು ಮಂದಿ ಮೂಷಕ್ ಜೊತೆ ಕೈ ಜೋಡಿಸಿದ್ದಾರೆ ಮುಂಬರುವ ದಿನಗಳಲ್ಲಿ ಮೂಷಕ್ ಬಹುದೊಡ್ಡ ಜಾಲತಾಣವಾಗಬೇಕು, ಮೂಷಕ್ ಟ್ವಿಟ್ಟರ್ಗೂ ಸೆಡ್ಡು ಹೊಡೆಯಬೇಕು ಎಂಬುದು ಮೂಷಕ್ ಕನ್ನಡ ತಂಡದ ಆಶಯ! ಮೂಷಕ್ ಜೊತೆ ಕನ್ನಡಿಗರು ಕೈ ಜೋಡಿಸಿದ್ದಲ್ಲಿ ಮೂಷಕ್ ವಿಶ್ವ ಸ್ಥರಕ್ಕೆ ಏರುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ! ಹಾ!! ಹಾಗೆ ಇನ್ನೋಂದು ವಿಷಯ, ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ! ಭಾರತದೊಡನೆ ಭಾರತೀಯರು ಹೆಜ್ಜೆ ಹಾಕಬೇಕಷ್ಟೆ! ಮೂಷಕ್ ಜೊತೆ ನೀವು ಕೈ ಜೋಡಿಸುತ್ತೀರೆಂಬ ನಂಬಿಕೆ ನಮ್ಮಲ್ಲಿದೆ!ಇದೇ ಆತ್ಮವಿಶ್ವಾಸದಿಂದ ಮೂಷಕ್ ಕನ್ನಡ ತಂಡ ಕಾರ್ಯನಿರ್ವಹಿಸುತ್ತಿದೆ! ನಮ್ಮನ್ನ ಹಾಲಿಗೆ ಹಾಕುತ್ತಿರೋ ಅಥವಾ ನೀರಿಗೆ ಹಾಕುತ್ತಿರೋ ಅದು ನಿಮಗೆ ಬಿಟ್ಟದ್ದು! (ಮೂಷಕ ಆಂಡ್ರಾಯ್ಡ್ ಆಪ್ ಪ್ಲೇ ಸ್ಟೋರ್ ಅಲ್ಲಿ ಲಭ್ಯವಿದ್ದು, Mooshak ಎಂದು ಹುಡುಕುವ ಮೂಲಕ ಡೌನ್ಲೋಡ್ ಮಾಡಬಹುದು).

-ನಾಗರಾಜ್ ಬಾಳೆಗದ್ದೆ

 

Please follow and like us:
0
http://bp9news.com/wp-content/uploads/2018/03/mooshak-506x400.jpghttp://bp9news.com/wp-content/uploads/2018/03/mooshak-506x400-150x150.jpgBP9 Bureauಅಂಕಣ  ಬೆಂಗಳೂರು : ನರೇಂದ್ರ ಮೋದಿಯವರ ಮೇಕ್​​ ಇನ್​​ ಇಂಡಿಯಾ ಚಿಂತನೆ ಭಾರತದಲ್ಲಿ ಸಂಚಲನ ಮೂಡಿಸಿ ಅನೇಕರಿಗಿ ಪ್ರೇರಣೆ ದೊರೆತು ಹೊಸ, ಹೊಸ ಪ್ರಯೋಗಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಸಮಾಜಿಕ ಜಾಲತಾಣಗಳಿಗೆ ಪೈಪೋಟಿಗೆ ಸಿದ್ದವಾಗಿದೆ ಭಾರದ ಒಂದು ಸಮಾಜಿಕ ಜಾಲತಾಣ.. ಆ ಬಗ್ಗೆ  ಮಾಹಿತಿ ಇಲ್ಲಿದೆ ನೋಡಿ... ನನಗೆ ಯೂಟ್ಯೂಬ್ ನಲ್ಲಿ ಟೆಕ್ ನ್ಯೂಸ್ ನೋಡುವುದೆಂದರೆ ಅದೇನೋ ಹುಚ್ಚು! ಅವತ್ತು ಅಗಸ್ಟ್ ಹದಿನೈದು ಶರ್ಮಾಜಿ ಟೆಕ್ನಿಕಲ್ ಎಂಬ ಯೂಟ್ಯೂಬ್ ಚಾನಲ್ ಅಲ್ಲಿ...Kannada News Portal