ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೆಲುವಿನ ರೂವಾರಿ ಎಂದೇ ಕರೆಯಲಾಗುವ ಚುನಾವಣಾ ಪರಿಣಿತ ಪ್ರಶಾಂತ್ ಕಿಶೋರ್ ಇಂದು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇವತ್ತು ಜೆಡಿಯು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಐ-ಪ್ಯಾಕ್( Indian Political Action Committee) ಸಂಸ್ಥಾಪಕರಾದ ಕಿಶೋರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಿಹಾರದಿಂದ ನನ್ನ ಹೊಸ ಜರ್ನಿ ಆರಂಭಿಸಲು ತುಂಬಾ ಉತ್ಸುಕನಾಗಿದ್ದೀನಿ ಎಂದು ಹೇಳಿದ್ದಾರೆ.

2014ರ ಚುನಾವಣೆ ಸಂದರ್ಭದಲ್ಲಿ ಪ್ರಶಾಂತ್ ಕಿಶೋರ್ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ನಂತರ ಬಿಜೆಪಿಯಿಂದ ದೂರವಾದ ಅವರು, 2015ರಲ್ಲಿ ಬಿಹಾರ ಚುನಾವಣೆ ವೇಳೆ ವಿಪಕ್ಷಗಳಾದ ಜೆಡಿಯು, ಆರ್ಜೆಡಿ ಹಾಗೂ ಕಾಂಗ್ರೆಸ್​​​​​​ ಮಹಾಘಟಬಂಧನ್​​ ಗೆಲ್ಲಿಸಲು ನೆರವಾಗಿದ್ದರು.

ಆದರೆ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ವೇಳೆ ಕಿಶೋರ್ ತಂತ್ರಗಾರಿಕೆ ವರ್ಕೌಟ್ ಆಗಿರಲಿಲ್ಲ. ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿ ತಂತ್ರದ ಹೊರತಾಗಿಯೂ ಬಿಜೆಪಿ ಮುಂದೆ ಸೋಲನ್ನು ಅನುಭವಿಸಬೇಕಾಯಿತು. ಇದೀಗ ಕಿಶೋರ್ ಜೆಡಿಯು ಸೇರ್ಪಡೆಯಾಗುತ್ತಿರುವುದು 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

Please follow and like us:
0
http://bp9news.com/wp-content/uploads/2018/09/UwQZ5aTq_400x400.jpghttp://bp9news.com/wp-content/uploads/2018/09/UwQZ5aTq_400x400-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಗೆಲುವಿನ ರೂವಾರಿ ಎಂದೇ ಕರೆಯಲಾಗುವ ಚುನಾವಣಾ ಪರಿಣಿತ ಪ್ರಶಾಂತ್ ಕಿಶೋರ್ ಇಂದು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal