ಬೆಂಗಳೂರು : ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅನಾರೋಗ್ಯದಿಂದ ನಿನ್ನೆ ಸಾವನ್ನಪ್ಪಿದ್ದಾರೆ. ಸದಾಶಿವ ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಬ್ರಹ್ಮಾವರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಕುಟುಂಬದ ಹೊರತು ಬೇರೆ ಯಾರಿಗೂ ತಮ್ಮ ಸಾವಿನ ಸುದ್ದಿ ಗೊತ್ತಾಗಬಾರದು ಅಂತಾ ಮಕ್ಕಳಿಗೆ ಬ್ರಹ್ಮಾವರ್​ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ.

ಸದಾಶಿವ ಬ್ರಹ್ಮಾವರ್​ ಕನ್ನಡ ಚಿತ್ರರಂಗ ಕಂಡ ಅಪರೂಪದ ಪೋಷಕ ನಟ. ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ರಹ್ಮಾವರ್​ ನಟಿಸಿದ್ದಾರೆ. ಡಾ.ರಾಜ್​ಕುಮಾರ್​, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್​ಕುಮಾರ್​, ರವಿಚಂದ್ರನ್ ಸೇರಿದಂತೆ ಅನೇಕ ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಬ್ರಹ್ಮಾವರ್​ ಅವರಿಗೆ ಮರೆವಿನ ಖಾಯಿಲೆಯೂ ಇತ್ತು.

Please follow and like us:
0
http://bp9news.com/wp-content/uploads/2018/09/60069854.jpghttp://bp9news.com/wp-content/uploads/2018/09/60069854-150x150.jpgBP9 Bureauಸಿನಿಮಾಬೆಂಗಳೂರು : ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ ಅನಾರೋಗ್ಯದಿಂದ ನಿನ್ನೆ ಸಾವನ್ನಪ್ಪಿದ್ದಾರೆ. ಸದಾಶಿವ ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಬ್ರಹ್ಮಾವರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಕುಟುಂಬದ ಹೊರತು ಬೇರೆ ಯಾರಿಗೂ ತಮ್ಮ ಸಾವಿನ ಸುದ್ದಿ ಗೊತ್ತಾಗಬಾರದು ಅಂತಾ ಮಕ್ಕಳಿಗೆ ಬ್ರಹ್ಮಾವರ್​ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಇವತ್ತು ಬನಶಂಕರಿಯ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆದಿದೆ. var domain =...Kannada News Portal