ತೂಮಕೂರು : ಇಂದು ಬಿಎಸ್​​​ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಆದರೆ ಬಿಜೆಪಿ ತನ್ನ ಬಹುಮತವನ್ನ ಹೇಗೆ ಸಾಭೀತು ಪಡಿಸಲಿದೆ ಎಂದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಆದರೆ ಈಗ ಅದಕ್ಕೆ ಸುಳಿವು ಸಿಗುತ್ತಿದ್ದು, ಕಾಂಗ್ರೆಸ್​​ ಶಾಸಕರು ಒಬ್ಬೊಬ್ಬರೆ ಕಾಣೆಯಾಗುತ್ತಿದ್ದಾರೆ. ಆನಂದ ಸಿಂಗ್​​ ನಾಪತ್ತೆಯಾದ ಬೆನ್ನಲ್ಲೇ ಕಾಂಗ್ರೆಸ್​​​ನ ಮತ್ತೊಬ್ಬ ಶಾಸಕ ಈಗ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.ತುಮಕೂರಿನ ಪಾವಗಡ ಕ್ಷೇತ್ರದ ಕಾಂಗ್ರೆಸ್​​​ ಶಾಸಕ ವೆಂಕಟರಮಣಪ್ಪ ಈಗ ಕಾಂಗ್ರೆಸ್​​ ಪಾಳೆಯದಿಂದ ದೂರವಾಗಿದ್ದಾರೆ. ಕೈಗೆ ಸಿಗದೆ ಕಾಣೆಯಾಗಿದ್ದು, ಕಮಲ ಹಿಡಿಯುತ್ತಿದ್ದಾರಾ ಎಂದು ಅನುಮಾನ ದಟ್ಟವಾಗುತ್ತಿದೆ.

ಇನ್ನು ಪಾವಗಡ ಶಾಕರನ್ನ ಬಿಜೆಪಿಯ ಶ್ರೀರಾಮುಲು ನಿರಂತರ ಸಂಪರ್ಕದಲ್ಲಿದ್ದರು ಎಂದು ನಿನ್ನೆ ವರದಿಯಾಗಿತ್ತು. ಅಲ್ಲದೇ ಈ ವೆಂಕಟರಮಣಪ್ಪ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರು ಕೂಡಾ ಆಗಿದ್ದರು. ಆಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು.ಈಗ ಕಾಂಗ್ರೆಸ್​​​ನಿಂದ ಗೆದ್ದಿದ್ದು,ಈಗ ಬಿಜೆಪಿಯತ್ತ ವಾಲುತ್ತಿದ್ದಾರೆ ಎನ್ನಲಾಗುತ್ತಿದೆ.

 

Please follow and like us:
0
http://bp9news.com/wp-content/uploads/2018/05/collage-1-29.jpghttp://bp9news.com/wp-content/uploads/2018/05/collage-1-29-150x150.jpgBP9 Bureauತುಮಕೂರುಪ್ರಮುಖರಾಜಕೀಯತೂಮಕೂರು : ಇಂದು ಬಿಎಸ್​​​ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಆದರೆ ಬಿಜೆಪಿ ತನ್ನ ಬಹುಮತವನ್ನ ಹೇಗೆ ಸಾಭೀತು ಪಡಿಸಲಿದೆ ಎಂದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಆದರೆ ಈಗ ಅದಕ್ಕೆ ಸುಳಿವು ಸಿಗುತ್ತಿದ್ದು, ಕಾಂಗ್ರೆಸ್​​ ಶಾಸಕರು ಒಬ್ಬೊಬ್ಬರೆ ಕಾಣೆಯಾಗುತ್ತಿದ್ದಾರೆ. ಆನಂದ ಸಿಂಗ್​​ ನಾಪತ್ತೆಯಾದ ಬೆನ್ನಲ್ಲೇ ಕಾಂಗ್ರೆಸ್​​​ನ ಮತ್ತೊಬ್ಬ ಶಾಸಕ ಈಗ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.ತುಮಕೂರಿನ ಪಾವಗಡ ಕ್ಷೇತ್ರದ ಕಾಂಗ್ರೆಸ್​​​ ಶಾಸಕ ವೆಂಕಟರಮಣಪ್ಪ ಈಗ ಕಾಂಗ್ರೆಸ್​​ ಪಾಳೆಯದಿಂದ ದೂರವಾಗಿದ್ದಾರೆ. ಕೈಗೆ ಸಿಗದೆ ಕಾಣೆಯಾಗಿದ್ದು, ಕಮಲ...Kannada News Portal