ದೆಹಲಿ : ಪಾಕಿಸ್ತಾನಿ ಧ್ವಜದ ತರ ಇರುವ ಸ್ಟಾರ್​​​​ ಮತ್ತು ಅರ್ಧ ಚಂದ್ರಾಕೃತಿಯ ಹಸಿರು ಧ್ವಜಗಳನ್ನು ನಿಷೇಧಿಸುವಂತೆ ಉತ್ತರ ಪ್ರದೇಶದ ಶಿಯಾ ವಕ್ಫ್​​ ಮಂಡಳಿ ಅಧ್ಯಕ್ಷ ವಸೀಮ್​​​ ರಿಜ್ವಿ ಸುಪ್ರೀಂಕೋರ್ಟ್​ಗೆ ಅರ್ಜಿಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆಯನ್ನ ಕೋರ್ಟ್​​ ಇಂದು ವಿಚಾರಣೆ ನಡೆಸಲಿದೆ.

ಭಾರತದಲ್ಲಿ ಇಂತಹ ಧ್ವಜಗಳನ್ನ ನಿಷೇಧಿಸುವಂತೆ ರಿಜ್ವಿ ಏ.17ರಂದು ಅರ್ಜಿ ಸಲ್ಲಿಸಿದ್ದರು. ಪ್ರಕಾಸ್ತಾನದ ಧ್ವಜವನ್ನ ಹೋಲುವ ಫ್ಲ್ಯಾಗ್​​​​ಗಳು ಮುಸ್ಲಿಂ ಏರಿಯಾದಲ್ಲಿ ಕೋಮು ಗಲಾಟೆಗಳಿಗೆ ಕಾರಣವಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಸ್ಟಾರ್​​​​​​​ ಹಾಗೂ ಅರ್ಧ ಚಂದ್ರನನ್ನ ಹೊಂದಿರುವ ಹಸಿರು ಧ್ವಜಗಳು ಪಾಕಿಸ್ತಾನದ  ಧ್ವಜದ ಹೋಲಿಕೆ ಇದ್ದು, ಇಂತಹ ಧ್ವಜವನ್ನ ಸುಪ್ರೀಂ ಕೋರ್ಟ್​  ನಿಷೇಧಿಸಲಿದೆ ಎನ್ನುವ ನಂಬಿಕೆ ಇದೆ. ಅಲ್ಲದೆ ಇದರಿಂದಾಗಿ ಸಮುದಾಯದ ಮೇಲೆ ವ್ಯತಿರಿಕ್ತ ಪಾರಿಣಾಮಗಳು ಆಗುತ್ತಿದ್ದು, ಧ್ವಜ ನಿಷೇಧ ಆದಲ್ಲಿ ಸಾಮಾಜಿಕ ಶಾಂತಿಗೆ ಸಹಕಾರಿ ಆಗಬಹುದು ಎಂದು ರಿಜ್ವಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಇಂದು ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸುಪ್ರೀಂ ಕೋರ್ಟ್​​ ಏನು ಹೇಳಲಿದೆ ಎಂದು ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/05/collage-2-14.jpghttp://bp9news.com/wp-content/uploads/2018/05/collage-2-14-150x150.jpgBP9 Bureauಪ್ರಮುಖರಾಷ್ಟ್ರೀಯದೆಹಲಿ : ಪಾಕಿಸ್ತಾನಿ ಧ್ವಜದ ತರ ಇರುವ ಸ್ಟಾರ್​​​​ ಮತ್ತು ಅರ್ಧ ಚಂದ್ರಾಕೃತಿಯ ಹಸಿರು ಧ್ವಜಗಳನ್ನು ನಿಷೇಧಿಸುವಂತೆ ಉತ್ತರ ಪ್ರದೇಶದ ಶಿಯಾ ವಕ್ಫ್​​ ಮಂಡಳಿ ಅಧ್ಯಕ್ಷ ವಸೀಮ್​​​ ರಿಜ್ವಿ ಸುಪ್ರೀಂಕೋರ್ಟ್​ಗೆ ಅರ್ಜಿಸಲ್ಲಿಸಿದ್ದರು. ಆ ಅರ್ಜಿ ವಿಚಾರಣೆಯನ್ನ ಕೋರ್ಟ್​​ ಇಂದು ವಿಚಾರಣೆ ನಡೆಸಲಿದೆ. ಭಾರತದಲ್ಲಿ ಇಂತಹ ಧ್ವಜಗಳನ್ನ ನಿಷೇಧಿಸುವಂತೆ ರಿಜ್ವಿ ಏ.17ರಂದು ಅರ್ಜಿ ಸಲ್ಲಿಸಿದ್ದರು. ಪ್ರಕಾಸ್ತಾನದ ಧ್ವಜವನ್ನ ಹೋಲುವ ಫ್ಲ್ಯಾಗ್​​​​ಗಳು ಮುಸ್ಲಿಂ ಏರಿಯಾದಲ್ಲಿ ಕೋಮು ಗಲಾಟೆಗಳಿಗೆ ಕಾರಣವಾಗುತ್ತಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸ್ಟಾರ್​​​​​​​...Kannada News Portal