ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿತ್ತು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ ಈಗ ಬಹುತೇಕ ತರಕಾರಿಗಳ ಬೆಲೆ ಅಗ್ಗವಾಗಿದ್ದು, ಬೆಂಗಳೂರಿಗರಿಗೆ ತುಸು ಸಮಾಧಾನ ಎನಿಸಿದೆ.

ಕೆ.ಆರ್‌ ಮಾರುಕಟ್ಟೆಯಲ್ಲಿ ಬದನೆ ಕಾಯಿ, ಸೀಮೆ ಬದನೆ, ಬೀಟ್ರೋಟ್, ನವಿಲುಕೋಸು, ಹೀರೆಕಾಯಿ, ಆಲೂಗಡ್ಡೆ ದರಗಳು ಪ್ರತಿ ಕೆಜಿಗೆ 20ರಿಂದ 30ರೂ ಆಸುಪಾಸಿನಲ್ಲಿದ್ದವು. ಈಗ ಅವುಗಳ ದರ 10ರಿಂದ 20ರೂ.ಗೆ ಇಳಿಕೆಯಾಗಿದೆ.

ಡಬ್ಬಲ್‌ ಬೀನ್ಸ್‌, ಬಟಾಣಿ ಕೆಲ ತರಕಾರಿಗಳು 100ರೂ. ಗಡಿ ದಾಟಿದೆ. ಇಪ್ಪತ್ತು ದಿನಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 7 ರಿಂದ 8 ರೂ.ಗೆ ಮಾರಾಟವಾಗುತ್ತಿದ್ದ ಟೊಮೆಟೋ ಕೆಜಿಗೆ 10ಕ್ಕೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಜನಸಾಮಾನ್ಯರನ್ನು ಕಂಗೆಡಿಸಿದ್ದ ಈರುಳ್ಳಿ ಇದೀಗ 6 ಕೆಜಿಗೆ 100 ರೂನಂತೆ ಮಾರಾಟವಾಗುತ್ತಿದೆ.

ಇನ್ನು ಹಾಪ್‌ಕಾಮ್ಸ್‌ನಲ್ಲಿ ತರಕಾರಿಗಳು ಬೀನ್ಸ್‌ 50 ರೂ, ಬದನೆಕಾಯಿ 21ರೂ, ಕ್ಯಾರೇಟ್‌ 28 ರೂ., ಡಬ್ಬಲ್‌ ಬೀನ್ಸ್ 135 ರೂ., ಆಲೂಗಡ್ಡೆ 31ರೂ., ಟೊಮೆಟೋ 14 ರೂ. ಗೆ ದರದಲ್ಲಿ ಮಾರಾಟವಾಗುತ್ತಿದೆ.

Please follow and like us:
0
http://bp9news.com/wp-content/uploads/2018/06/MARKET.jpghttp://bp9news.com/wp-content/uploads/2018/06/MARKET-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು ಗ್ರಾಮಾಂತರಬೆಂಗಳೂರು: ಕಳೆದ ಎರಡು ತಿಂಗಳಿನಿಂದ ಮುಂಗಾರು ಪೂರ್ವ ಮಳೆ ಸುರಿಯುತ್ತಲೇ ಇದೆ. ಇದರಿಂದಾಗಿ ಕೆಲವು ಬೆಳೆಗಳಿಗೆ ಹಾನಿಯಾಗಿತ್ತು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿತ್ತು. ಆದರೆ ಈಗ ಬಹುತೇಕ ತರಕಾರಿಗಳ ಬೆಲೆ ಅಗ್ಗವಾಗಿದ್ದು, ಬೆಂಗಳೂರಿಗರಿಗೆ ತುಸು ಸಮಾಧಾನ ಎನಿಸಿದೆ. ಕೆ.ಆರ್‌ ಮಾರುಕಟ್ಟೆಯಲ್ಲಿ ಬದನೆ ಕಾಯಿ, ಸೀಮೆ ಬದನೆ, ಬೀಟ್ರೋಟ್, ನವಿಲುಕೋಸು, ಹೀರೆಕಾಯಿ, ಆಲೂಗಡ್ಡೆ ದರಗಳು ಪ್ರತಿ ಕೆಜಿಗೆ 20ರಿಂದ 30ರೂ ಆಸುಪಾಸಿನಲ್ಲಿದ್ದವು. ಈಗ ಅವುಗಳ ದರ 10ರಿಂದ 20ರೂ.ಗೆ ಇಳಿಕೆಯಾಗಿದೆ. ಡಬ್ಬಲ್‌ ಬೀನ್ಸ್‌, ಬಟಾಣಿ...Kannada News Portal