ಬೆಂಗಳೂರು : ವಿದ್ಯಾರ್ಥಿಯ ಅಂತಃ ಸತ್ವದ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿದ್ದ ಗೊಳಿಸುವುದೇ ಶಿಕ್ಷಕರ ತರಬೇತಿಯ ಮೂಲ ಉದ್ದೇಶ ಎಂದು ಶ್ರೀ ಸಂಸ್ಥಾನದ ವಿದ್ಯಾ ಕಾರ್ಯದರ್ಶಿ ಪ್ರಮೋದ ಪಂಡಿತ್​​ ಹೇಳಿದರು.

ಡಿ.ಸಿ.ಎಸ್ ಸಮೂಹ ಸಂಸ್ಥೆಗಳ ವಿದ್ಯಾಲಯಗಳ ಶಿಕ್ಷಕರಿಗಾಗಿ ಬೆಂಗಳೂರಿನ ಹಂಪಿ ನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ ಏರ್ಪಡಿಸಿದ್ದ “ಜ್ಞಾನ ವರ್ಗಾವಣೆ ಕೌಶಲ್ಯ” ಎಂಬ ಕಾರ್ಯಾಗಾರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಅಧ್ಯಾಪಕರು ಅಧ್ಯಾಪನವನ್ನು ವೃತ್ತಿಯಾಗಿ ನೋಡದೇ ಅದನ್ನು ಜೀವನ ಕ್ರಮವಾಗಿ ಸ್ವೀಕರಿಸಬೇಕು ಎಂದರು. ಶಿಕ್ಷಕ ವಿಷಯದ ಬಗ್ಗೆ ಆಸಕ್ತಿ ಹೊಂದಿದ್ದರೆ ಮಾತ್ರ ವಿದ್ಯಾರ್ಥಿಯಲ್ಲಿ ಆಸಕ್ತಿ ಹುಟ್ಟಿಸಬಲ್ಲ.ನಿರಂತರ ಯೋಜನೆ ,ಯೋಚನೆ ಹಾಗು ಅಧ್ಯಯನ ಇದು ಪರಿಪೂರ್ಣತೆಯ ದಾರಿ ಎಂದರು.

ಮುಂದುವರಿದು ಮಾತನಾಡುತ್ತಾ ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಬೆರೆತು ಪ್ರತಿಭಾವಂತರ ತಂಡ ನಿರ್ಮಾಣ ಕಾರ್ಯದಲ್ಲಿ ಭಾಗಗಳಾಗಿ ಎಂದರು. ಶ್ರೀ ರಾಮಚಂದ್ರಾಪುರ ಮಠದ ಡಿ.ಸಿ.ಎಸ್. ಶಾಲಾ ಮಾಲಿಕೆಯ 9 ವಿದ್ಯಾಲಯಗಳ  62 ಶಿಕ್ಷಕರು ಭಾಗವಹಿದ್ದರು. ಇದೇ ಸಂದರ್ಭದಲ್ಲಿ ಈ ವಿದ್ಯಾಲಯಗಳ ಆಡಳಿತ ಮಂಡಳಿಯ ಸದಸ್ಯರಿಗೆ ನಾಯಕತ್ವ ತಬೇತಿ ಕೂಡ ನಡೆಸಲಾಯಿತು. ಶ್ರೀ ಸತೀಶ ಭಟ್ಟರ ಸ್ವಾಗತಿಸಿದರು. ISRO ನಿವೃತ್ತ ವಿಜ್ಞಾನಿ ಶ್ರೀ ಪಿ.ಜೆ.ಭಟ್ಟರು ಉಪಸ್ಥಿತರಿದ್ದು ವಿದ್ಯಾ ವಿಭಾಗದ ಕಾರ್ಯವನ್ನು ಪ್ರಶಂಸಿದರು. ಶ್ರೀ ಟಿ.ಜಿ.ಭಟ್ಟ ನಿರೂಪಿಸಿ ವಂದಿಸಿದರು.

 

Please follow and like us:
0
http://bp9news.com/wp-content/uploads/2018/09/DCs-Workshop-1.jpghttp://bp9news.com/wp-content/uploads/2018/09/DCs-Workshop-1-150x150.jpgBP9 Bureauಪ್ರಮುಖಬೆಂಗಳೂರುಶ್ರೀ ರಾಮಚಂದ್ರಾಪುರ ಮಠಬೆಂಗಳೂರು : ವಿದ್ಯಾರ್ಥಿಯ ಅಂತಃ ಸತ್ವದ ಅನಂತ ಸಾಧ್ಯತೆಯನ್ನು ಅನಾವರಣಗೊಳಿಸಲು ಶಿಕ್ಷಕನ‌ನ್ನು ಸಿದ್ದ ಗೊಳಿಸುವುದೇ ಶಿಕ್ಷಕರ ತರಬೇತಿಯ ಮೂಲ ಉದ್ದೇಶ ಎಂದು ಶ್ರೀ ಸಂಸ್ಥಾನದ ವಿದ್ಯಾ ಕಾರ್ಯದರ್ಶಿ ಪ್ರಮೋದ ಪಂಡಿತ್​​ ಹೇಳಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಡಿ.ಸಿ.ಎಸ್ ಸಮೂಹ ಸಂಸ್ಥೆಗಳ...Kannada News Portal