ಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಜೆಟ್ ಮಂಡನೆಯ ವಿಚಾರವೇ ಪ್ರಮುಖ ಸವಾಲಾಗಿದೆ. ಹೊಸ ಬಜೆಟ್ ಅನಿವಾರ್ಯವಾಗಿದೆ ಎಂದು ಹಾಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ  ಹೇಳಿದರೆ, ಬೇಕಿಲ್ಲ ಹಳೆ ಬಜೆಟ್ ಕಾರ್ಯಕ್ರಮಗಳಿಗೆ ಹಣಕೊಟ್ಟು ಅದನ್ನೇ  ಮುಂದುವರಿಸಿದರೆ  ಸಾಕು, ಹೊಸ ಬಜೆಟ್ ಅಗತ್ಯವೇ ಇಲ್ಲ ಬೇಕಾದರೆ ಪೂರಕ ಬಜೆಟ್ ಮಂಡನೆ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ    ಮತ್ತು ಕಾಂಗೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹೊಸ ಸರ್ಕಾರ ಜಾರಿಗೆ ಬಂದಿರುವುದರಿಂದ ಮೇಲಾಗಿ ರೈತರ ಸಾಲ ಮನ್ನಾ ಮಾಡುವ ಅನಿವಾರ್ಯತೆ ಕುಮಾರಸ್ವಾಮಿ ಅವರ ಜೆಡಿಎಸ್ ಪಕ್ಷಕ್ಕೆ ಇರುವ  ಹಿನ್ನಲೆಯಲ್ಲಿ ಹೊಸದಾಗಿ ಬಜೆಟ್ ಮಂಡನೆ ಮಾಡಲೇಬೇಕು ಮತ್ತು ಸಾವಿರಾರು ಕೋಟಿ ಸಾಲ ಮನ್ನಾ ಮಾಡುವ ಮಹತ್ವ ನಿರ್ಧಾರಗಳಿಗೆ ವಿಧಾನಮಂಡಲದ ಎರಡೂ ಮನೆಯ ಒಪ್ಪಿಗೆ ಪಡೆಯಬೇಕು ಇದು ಅನಿವಾರ್ಯ ಎಂದು ಹಲವು ಅಧಿಕಾರಿಗಳು ಮತ್ತು ರಾಜಕೀಯ ತಜ್ಞರ ಅಭಿಪ್ರಾಯ. ಎರಡು ಪಕ್ಷಗಳು ಜನತೆಗೆ ಕೊಟ್ಟಿರುವ ಭರವಸೆ ಈಡೇರಿಸಲು ಹೊಸ ಬಜೆಟ್ ಅನಿವಾರ್ಯ ಎಂಬುದು  ಹಾಲಿ ಸಿಎಂ ವಾದ. ಮೆಲಾಗಿ ಸರ್ಕರ ತನ್ನ ಉದ್ದೇಶ ಗುರಿಯನ್ನು ಜನರಿಗೆ ಮನವರಿಕೆ ಮಾಡಿಕೋಡಲು ಇದು ಬಹಳ ಅಗತ್ಯವಾಗಿದೆ ಎಂದು ಕುಮಾರಸ್ವಾಮಿ ವಾದ. ಒಟ್ಟಿನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಈಗ ಬಜೆಟ್ ಮಂಡನೆಯೆ ಒಂದು ಸವಾಲಾಗಿದೆ.

Please follow and like us:
0
http://bp9news.com/wp-content/uploads/2018/06/india-elections_47d279ca-5846-11e8-b431-73159b4b09e2.jpghttp://bp9news.com/wp-content/uploads/2018/06/india-elections_47d279ca-5846-11e8-b431-73159b4b09e2-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ರಾಜ್ಯದ ಸಮ್ಮಿಶ್ರ ಸರ್ಕಾರಕ್ಕೆ ಬಜೆಟ್ ಮಂಡನೆಯ ವಿಚಾರವೇ ಪ್ರಮುಖ ಸವಾಲಾಗಿದೆ. ಹೊಸ ಬಜೆಟ್ ಅನಿವಾರ್ಯವಾಗಿದೆ ಎಂದು ಹಾಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ  ಹೇಳಿದರೆ, ಬೇಕಿಲ್ಲ ಹಳೆ ಬಜೆಟ್ ಕಾರ್ಯಕ್ರಮಗಳಿಗೆ ಹಣಕೊಟ್ಟು ಅದನ್ನೇ  ಮುಂದುವರಿಸಿದರೆ  ಸಾಕು, ಹೊಸ ಬಜೆಟ್ ಅಗತ್ಯವೇ ಇಲ್ಲ ಬೇಕಾದರೆ ಪೂರಕ ಬಜೆಟ್ ಮಂಡನೆ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ    ಮತ್ತು ಕಾಂಗೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. var domain = (window.location !=...Kannada News Portal