ಬೆಂಗಳೂರು : ಬರಿ ಪೋಸ್ಟರ್ , ಫಸ್ಟ್ ಲುಕ್ ನಿಂದ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿರುವ  ಚಿತ್ರ ದಿ ಟೆರರಿಸ್ಟ್‌. ಮುಖ್ಯ ಭುಮಿಕೆಯಲ್ಲಿ ಬೋಲ್ಡ್ ಅಂಡ್ ಡೆರಿಂಗ್ ರಾಗಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಮತ್ತು ಕುತೂಹಲವನ್ನು ಮೂಡಿಸದೆ. ಇತ್ತೀಚಿಗಷ್ಟೇ ಚಿತ್ರತಂಡ ಟೀಸರ್ ಅನ್ನು ಬಿಡುಗಡೆಮಾಡಿತ್ತು. ಟೀಸರ್ ಬಿಡುಗಡೆಯಾದ ಕೆಲ ದಿನಗಳಲ್ಲೇ ಲಕ್ಷಕ್ಕೂ ಹೆಚ್ಚು  ವೀಕ್ಷಣೆ ಮಾಡಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಪಿ.ಸಿ ಶೇಖರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರಕ್ಕೆ ಸಂಗೀತ ಸಂಯೊಜನೆ ಮಾಡಿದ್ದಾರೆ ಪ್ರದೀಪ್ ವರ್ಮ. ಇನ್ನು  ತಮ್ಮ ಚಿತ್ರಗಳಲ್ಲಿ ಹಾಡುಗಳಿಂದಲೇ ಚಿತ್ರ ರಸಿಕರನ್ನು ಮೋಡಿ ಮಾಡಿರುವ ಪಿ.ಸಿ.ಶೇಖರ್,   ರೋಮಿಯೋ, ರಾಗ, ಸ್ಟೈಲ್‌ ಕಿಂಗ್‌ ಮತ್ತು ಅರ್ಜುನ ಹೀಗೆ  ಈ ಎಲ್ಲ ಚಿತ್ರಗಳಲ್ಲಿ ಮೇಲೌಡಿ, ಫೀಲಿಂಗ್ , ರೋಮ್ಯಾಂಟಿಕ್  ವಿಧಗಳಲ್ಲಿ ಸೂಪರ್ ಹಿಟ್      ಸಾಂಗ್ಸ್ ಗಳನ್ನು ನೀಡಿದ್ದಾರೆ.  ಪಿ.ಸಿ. ಶೇಖರ್‌ ಈಗ ಇನ್ನೊಂದು ಹೊಸ ಜಾನರ್‌ನ ಸಿನಿಮಾವನ್ನು ತೆರೆಗೆ ತರಲು ಸಿದ್ಧರಾಗಿದ್ದಾರೆ. ಆ ಚಿತ್ರವೇ ದಿ ಟೆರರಿಸ್ಟ್‌ ಆಗಿದ್ದು ಇದು  ಭಯೋತ್ಪಾದನೆ ಸುತ್ತ ಹೆಣೆದಿರುವ ಕತೆಯಾಗಿದೆ.  ಚಿತ್ರದ ಟ್ರೇಲರ್‌ಗೆ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದ್ದು,  ಈಗ ಮೊದಲ ಲಿರಿಕ್ಸ್ ಹಾಡನ್ನು ರಿಲೀಸ್‌ ಮಾಡಲು ಸಿದ್ಧರಾಗಿದ್ದಾರೆ.  ನಾಳೆ  ಅಂದ್ರೆ 21ರಂದು ಸಂಜೆ 7.30ಕ್ಕೆ ಆನ್‌ಲೈನ್‌ನಲ್ಲಿ ಈ ಲಿರಿಕಲ್‌ ಸಾಂಗ್‌ನ ವಿಡಿಯೋ ಬಿಡುಗಡೆ ಆಗಲಿದೆ.

ಅನನ್ಯ ಭಟ್‌ ಹಾಡಿರುವ ‘ಸುರಿಯೋ ಕಣ್ಣೀರ..’ ಹಾಡು ಇದಾಗಿದೆ. ಮಹೇಶ್‌ ರಾಜ್‌ ಬರೆದ ಹಾಡಿಗೆ ಪ್ರದೀಪ್‌ ವರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಕಾಲಿವುಡ್‌ನ ಮುರಳಿ ಕ್ರಿಶ್‌ ಛಾಯಾಗ್ರಹಣ ಮಾಡಿದ್ದಾರೆ. ಲಿರಿಕಲ್‌ ವಿಡಿಯೋದಲ್ಲಿ ಗಾಯಕಿ ಅನನ್ಯ ಭಟ್‌ ಕಾಣಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಬಾಂಬ್‌ ಬ್ಲಾಸ್ಟ್‌ ನ ಹಿನ್ನೆಲೆಯಲ್ಲಿ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶೇಖರ್‌. ಈ ಚಿತ್ರಕ್ಕಾಗಿ ಬೆಂಗಳೂರಿನ ಜನನಿಬಿಡ ರಸ್ತೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ರಾಗಿಣಿ ಮೊದಲ ಬಾರಿಗೆ ಮುಸ್ಲಿಂ ಹುಡುಗಿಯಾಗಿ ಪಾತ್ರದಲ್ಲಿ ನಟಿಸಿದ್ದಾರೆ. ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಹುಡುಗಿಯಾಗಿದ್ದರೂ ಬೋಲ್ಡ್‌ ಪಾತ್ರ ಇದು ಎಂದಿದ್ದಾರೆ ಶೇಖರ್‌.

Please follow and like us:
0
http://bp9news.com/wp-content/uploads/2018/09/BP9-NEWS.jpeghttp://bp9news.com/wp-content/uploads/2018/09/BP9-NEWS-150x150.jpegBP9 Bureauಪ್ರಮುಖಸಿನಿಮಾಬೆಂಗಳೂರು : ಬರಿ ಪೋಸ್ಟರ್ , ಫಸ್ಟ್ ಲುಕ್ ನಿಂದ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಮೂಡಿಸಿರುವ  ಚಿತ್ರ ದಿ ಟೆರರಿಸ್ಟ್‌. ಮುಖ್ಯ ಭುಮಿಕೆಯಲ್ಲಿ ಬೋಲ್ಡ್ ಅಂಡ್ ಡೆರಿಂಗ್ ರಾಗಣಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್ ಮತ್ತು ಕುತೂಹಲವನ್ನು ಮೂಡಿಸದೆ. ಇತ್ತೀಚಿಗಷ್ಟೇ ಚಿತ್ರತಂಡ ಟೀಸರ್ ಅನ್ನು ಬಿಡುಗಡೆಮಾಡಿತ್ತು. ಟೀಸರ್ ಬಿಡುಗಡೆಯಾದ ಕೆಲ ದಿನಗಳಲ್ಲೇ ಲಕ್ಷಕ್ಕೂ ಹೆಚ್ಚು  ವೀಕ್ಷಣೆ ಮಾಡಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ. ಪಿ.ಸಿ ಶೇಖರ್ ನಿರ್ದೇಶನದಲ್ಲಿ...Kannada News Portal