ಬೆಂಗಳೂರು : ನಿಂಬೆ, ಮೋಸಂಬಿಗಳಂತೆಯೇ ಸಿಟ್ರಸ್‌ ಜಾತಿಗೆ ಸೇರಿದ ಹಣ್ಣು ಚಕೋತಾ. ಕರಾವಳಿಯಲ್ಲಿ ಧಾರಾಳವಾಗಿ ಬೆಳೆಯ ಬಹುದಾಗಿದ್ದು, ಆದರೆ ರೈತರು ಇದರ ಕೃಷಿಯಲ್ಲಿ ಅನಾಸಕ್ತರಾಗಿದ್ದಾರೆ. ಆದರೆ ಈ ಹಣ್ಣಿಗೂ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದ್ದು, ಅದನ್ನ ಬೆಳೆಸುವ ವಿಧಾನ ಇಲ್ಲಿದೆ.

ಹಣ್ಣಿನೊಳಗಿರುವ ಬೀಜದಿಂದ ಗಿಡ ತಯಾರಿಸಿ ನೆಟ್ಟರೆ ಫ‌ಸಲು ಸಿಗಲು ಏಳೆಂಟು ವರ್ಷ ಬೇಕಾಗುತ್ತದೆ. ಆದರೆ ಮರದ ಟೊಂಗೆಯನ್ನು ಕತ್ತರಿಸಿ ಫ‌ಲವತ್ತಾದ ಮಣ್ಣಿನಲ್ಲಿ ನೆಟ್ಟು ಗಿಡ ಬೇರೊಡೆಯುವಂತೆ ಮಾಡಿದರೆ ಎರಡನೆಯ ವರ್ಷದಿಂದಲೇ ಹಣ್ಣು ಕೊಡುತ್ತದೆ. ಒಂದು ಮರವಿದ್ದರೆ ಇಡೀ ಜಮೀನಿನಲ್ಲಿ ಅದರ ತಳಿಯನ್ನು ತುಂಬಿಸಬಹುದೆಂದು ಅನುಭವಸ್ತ ರೈತರ ಮಾತು.

ಅಲ್ಲದೆ ಬೇಸಿಗೆಯಲ್ಲಿ ಬುಡಕ್ಕೆ ನೀರು ಹರಿಸಿ, ಒಂದಿಷ್ಟು ಸುಡುಮಣ್ಣು, ಸಾವಯವ ಗೊಬ್ಬರ ನೀಡಿದರೆ ರಾಶಿ ರಾಶಿ ಹಣ್ಣುಗಳನ್ನು ಕೊಡುತ್ತದೆ. ಹಣ್ಣುಗಳಿಗೆ ಪೇಟೆಯಲ್ಲಿ ಬೇಡಿಕೆಯೂ ಇದೆ. ಕೀಟಗಳ ಬಾಧೆ ಇಲ್ಲ. ಚಕೋತಾ ಮರ ಹಲವು ವರ್ಷ ಬದುಕುತ್ತದೆ.

ಚಕೋತ ಮರ ಕರಾವಳಿಯ ಹವೆ ಮತ್ತು ಮಣ್ಣಿನ ಗುಣಕ್ಕೆ ಹೊಂದಿಕೊಂಡು ಬದುಕಿ ವರ್ಷದುದ್ದಕ್ಕೂ ಹೂ ಬಿಟ್ಟು ಗೊಂಚಲು ತುಂಬ ಹಣ್ಣುಗಳಿಂದ ಬಾಗಿರುತ್ತದೆ. ಒಂದರಿಂದ ಎರಡು ಕಿ.ಲೋವರೆಗೆ ತೂಗುವ, 15-20 ಸೆ. ಮೀ. ಸುತ್ತಳತೆ ಇರುವ ದುಂಡಗಿನ ಹಣ್ಣಿನೊಳಗೆ ಒಂಭತ್ತರಿಂದ ಹದಿನೈದು ತೊಳೆಗಳಿರುತ್ತವೆ. ಮೋಸಂಬಿಯ ತೊಳೆಗಳಂತೆ ಇದ್ದರೂ ಒಳಗಿನ ಎಸಳುಗಳ ರಸಬಿಂದುಗಳ ಗಾತ್ರ ದೊಡ್ಡದು. ತೊಳೆಗಳ ಮೇಲಿರುವ ಬಿಳಿಯ ಪೊರೆಯಂತಹ ಸಿಪ್ಪೆ ಕಹಿಯಾಗಿದ್ದರೆ ಒಳಗಿರುವ ತೊಳೆ ತೀರಾ ಸಿಹಿಯಾಗಿರುತ್ತದೆ. ಹಾಗೆಯೇ ತಿನ್ನಬಹುದು. ಪಾನಕ, ಜೆಲ್ಲಿ, ಸಿರಪ್‌ ತಯಾರಿಕೆಗೂ ಸೂಕ್ತವಾಗಿದೆ.

ತ್ವಚೆಯ ಆರೋಗ್ಯಕ್ಕೆ ಚಕೋತ ಸಹಕಾರಿ

ಚಕೋತ ಪೋಷಕಾಂಶಗಳ ಕಣಜವೂ ಹೌದು. ದೇಹದ ಕೊಬ್ಬು ಕರಗಿಸಲು ನೆರವಾಗುವ ನಾರಿನಂಶ ಹೊಂದಿದೆ. ಎ, ಬಿ1, ಬಿ2, ಬಯೋಫ್ಲಾವೊನೈಡ್‌, ಆರೋಗ್ಯಕರ ಕೊಬ್ಬು, ಪ್ರೊಟೀನ್‌, ಮೆಗ್ನೇಶಿಯಮ್‌, ಶೇ. 37ರಷ್ಟು ಪೊಟ್ಯಾಷಿಯಮ್‌, ಫಾಲಿಕ್‌ ಮತ್ತು ಆಸ್ಕೊರ್ಬಿಕ್‌ ಆಮ್ಲಗಳು, ಮೂಳೆಗಳಿಗೆ ಬಲದಾಯಕವಾದ ಕಿಣ್ವಗಳು ಅಲ್ಲದೆ ಅತ್ಯಧಿಕವಾಗಿ ಸಿಹಿ ಜೀವಸತ್ವಗಳ ಆಗರವಾಗಿದೆ. ಇದರಲ್ಲಿರುವ ವಿಶೇಷವಾದ ಸ್ಟರ್ಮೆಡೀಸ್‌ ಅಂಶವು ಇದನ್ನು ನಿತ್ಯ ಸೇವಿಸುವವರ ದೇಹಕ್ಕೆ ಮುಪ್ಪು ಆವರಿಸಿರುವುದು ಅರಿವಾಗದಷ್ಟು ತ್ವಚೆಯ ಆರೋಗ್ಯದ ರಕ್ಷಣೆಗೆ ಸಹಕರಿಸುತ್ತದೆ.

ನಿತ್ಯವೂ ಚಕ್ಕೋತ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಅತ್ಯಂತ ಸಹಕಾರಿ ಎನ್ನುತ್ತವೆ ವೈದ್ಯ ಗ್ರಂಥಗಳು. ಅದರಲ್ಲಿರುವ ಪೆಕ್ಟಿನ್‌, ರಕ್ತದ ಒತ್ತಡ ನಿಯಂತ್ರಿಸಿ ಸುಗಮ ಪರಿಚಲನೆಯ ವೇಗ ಹೆಚ್ಚಿಸುತ್ತದೆ. ಹೃದಯಾಘಾತ, ಪಾರ್ಶ್ವವಾಯುಗಳನ್ನು ದೂರವಿಡುತ್ತದೆ ಎಂದೂ ಹೇಳಲಾಗುತ್ತದೆ.

Please follow and like us:
0
http://bp9news.com/wp-content/uploads/2018/08/pomelo.jpghttp://bp9news.com/wp-content/uploads/2018/08/pomelo-150x150.jpgBP9 Bureauಕೃಷಿಪ್ರಮುಖಬೆಂಗಳೂರು : ನಿಂಬೆ, ಮೋಸಂಬಿಗಳಂತೆಯೇ ಸಿಟ್ರಸ್‌ ಜಾತಿಗೆ ಸೇರಿದ ಹಣ್ಣು ಚಕೋತಾ. ಕರಾವಳಿಯಲ್ಲಿ ಧಾರಾಳವಾಗಿ ಬೆಳೆಯ ಬಹುದಾಗಿದ್ದು, ಆದರೆ ರೈತರು ಇದರ ಕೃಷಿಯಲ್ಲಿ ಅನಾಸಕ್ತರಾಗಿದ್ದಾರೆ. ಆದರೆ ಈ ಹಣ್ಣಿಗೂ ಮಾರುಕಟ್ಟೆಯಲ್ಲಿ ಬಹುಬೇಡಿಕೆ ಇದ್ದು, ಅದನ್ನ ಬೆಳೆಸುವ ವಿಧಾನ ಇಲ್ಲಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal