ಬೆಂಗಳೂರು:  ಸಾಮಾನ್ಯವಾಗಿ ಕಬ್ಬು ಬೆಳೆದರೆ ದುಬಾರಿ ಖರ್ಚು . ಅಧಿಕ ಪ್ರಮಾಣದಲ್ಲಿ ನೀರು ಬೇಕು. ವಿಪರೀತ ಕಳೆ ಹಾಗೂ ನಿರಂತರ ಶ್ರಮ ಅಗತ್ಯವೆಂದು ಬಹುತೇಕ ಎಲ್ಲರ ಅಭಿಪ್ರಾಯ. ಸತ್ಯ ಕೂಡ ಹೌದು. ಆದರೆ ಕಬ್ಬು ಬೆಳೆಯಲ್ಲಿ  ಸಾವಯವ ಕೃಷಿ ಪದ್ಧತಿ ಅನುಸರಿಸಿದರೆ  ಪ್ರಮಾಣ ನೀರು ಸಾಕಾಗುತ್ತದೆ. ಭೂಮಿಯಲ್ಲಿ ತೇವಾಂಶ ಇದ್ದರೆ ಅಷ್ಟೇ ಸಾಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹದು. ಅಷ್ಟೇ ಅಲ್ಲ, ಕಬ್ಬಿನ ಜತೆಗೆ ವಿವಿಧ ಮಿಶ್ರ ಬೆಳೆಯನ್ನೂ ಬೆಳೆದು ಉತ್ತಮ ಆದಾಯ ಪಡೆಯ ಬಹುದಾಗಿದೆ.

ಕಬ್ಬಿನ ಕಣ್ಣಿನಿಂದ ಸಸಿ ನಾಟಿ ಮಾಡಿ ಬಿತ್ತಿದರೆ ಕಬ್ಬಿನ ಬೆಳೆಗೆ ಸಮರ್ಪಕ ಸೂರ್ಯನ ಕಿರಣ ಹಾಗೂ ಗಾಳಿ ದೊರೆಯುತ್ತದೆ. ಅಲ್ಲದೆ, ಸಾವಯವ ಕೃಷಿ ಪದ್ಧತಿಯಲ್ಲಿ ಅತಿ ಕಡಿಮೆ ನೀರು ಬಳಕೆ ಮಾಡಿ ಕಬ್ಬಿನೊಂದಿಗೆ ಅಂತರ ಬೆಳೆಗಳನ್ನು ಬೆಳೆಯುವ ಮೂಲಕ ಬೇಸಿಗೆ ಕಾಲದಲ್ಲೂ ಕಡಿಮೆ ಖರ್ಚಿನಲ್ಲಿ ಅಧಿಕ ಆದಾಯ ಪಡೆಯಬಹುದು.

ಸಾಂಪ್ರದಾಯಿಕ ಕಬ್ಬಿನ ಕೃಷಿಯಲ್ಲಿ ವಿಪರೀತ ನೀರು ಕೊಡಲಾಗುತ್ತದೆ. ಅಲ್ಲದೆ, ಸಣ್ಣ ಸಣ್ಣ ಸಾಲು ಕೊರೆದು ಇಕ್ಕಟ್ಟಾಗಿ ಕಬ್ಬು ನಾಟಿ ಮಾಡುವುದರಿಂದ ಕಬ್ಬು ಸಮೃದ್ಧವಾಗಿ ಬೆಳೆಯುವುದಿಲ್ಲ. ಇಕ್ಕಟ್ಟಾಗಿ ಕಬ್ಬು ನಾಟಿ ಮಾಡಿದರೆ ಕಳೆ ಕೀಳುವುದು ಹಾಗೂ ನೀರುಣಿಸುವುದೂ ಬಲು ಕಷ್ಟ ಎನ್ನುತ್ತಾರೆ ಹಲವು ರೈತರು. ಸಾಮಾನ್ಯವಾಗಿ ನಾಟಿಗೆ ಸಿದ್ಧಗೊಂಡ ಕಬ್ಬಿನ ಸಸಿಯಲ್ಲಿ ಸರಾಸರಿ 10ರಿಂದ 15 ಎಲೆ ಇರುತ್ತವೆ. ಇವುಗಳಲ್ಲಿ ಕನಿಷ್ಠ 6ರಿಂದ 8 ಎಲೆಗಳು ಪ್ರೌಢಾವಸ್ಥೆ ಹೊಂದಿರುತ್ತವೆ. ಸಮರ್ಪಕ ಹಾಗೂ ದಿನದ ಹೆಚ್ಚು ಅವಧಿಯಲ್ಲಿ ಸೂರ್ಯನ ಬೆಳಕು ಈ ಎಲೆಗಳ ಮೇಲೆ ಬಿದ್ದರೆ ಅವು ಇನ್ನಷ್ಟು ಸದೃಢವಾಗುತ್ತವೆ.

ಪಟ್ಟಾ ಪದ್ಧತಿ

ಬಹುತೇಕ ರೈತರು ಎರಡೂವರೆಯಿಂದ 3 ಅಡಿ ಅಂತರದಲ್ಲಿ ಕಬ್ಬು ನಾಟಿ ಮಾಡುತ್ತಾರೆ. ಆದರೆ ಈ  ಪಟ್ಟಾ ಪದ್ಧತಿ ಅಳವಡಿಸಿಕೊಂಡರೆ  ಸಾಲಿನಿಂದ ಸಾಲಿಗೆ 5 ಅಡಿ ಹಾಗೂ ಬೀಜದಿಂದ ಬೀಜಕ್ಕೆ 3 ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಕಬ್ಬಿನ ಪ್ರತಿ ಸಾಲಿನ ನಡುವಿನ ಅಂತರದಲ್ಲಿ ಮಿಶ್ರ ಬೆಳೆ ಬೆಳೆಯುವುದು ಪಟ್ಟಾ ಪದ್ಧತಿಯ ಮೂಲ ಉದ್ದೇಶ. ಅಲ್ಲದೆ, ಹೆಚ್ಚು ಅಂತರ ಬಿಟ್ಟು ಕಬ್ಬು ನಾಟಿ ಮಾಡಿದರೆ ಕಳೆ ಪ್ರಮಾಣ ಕಡಿಮೆಯಾಗಿ ಬೆಳೆ ಸಮೃದ್ಧವಾಗಿ ಬೆಳೆಯುತ್ತದೆ.  ಕಬ್ಬಿನೊಂದಿಗೆ ಅಂತರ ಬೆಳೆಯಾಗಿ ಚೆಂಡು ಹೂವು, ಅರಿಶಿಣ, ಮೆಣಸಿನಕಾಯಿ ಸೇರಿ ವಿವಿಧ ತರಕಾರಿ ಬೆಳೆ ಬೆಳೆಯುವ ಮೂಲಕ ಉತ್ತಮ ಆದಾಯ ಪಡೆಯ ಬಹುದಾಗಿದೆ.

 

 

Please follow and like us:
0
http://bp9news.com/wp-content/uploads/2018/08/Sugar-Cane-farm-1.jpghttp://bp9news.com/wp-content/uploads/2018/08/Sugar-Cane-farm-1-150x150.jpgBP9 Bureauಕೃಷಿಪ್ರಮುಖಬೆಂಗಳೂರು:  ಸಾಮಾನ್ಯವಾಗಿ ಕಬ್ಬು ಬೆಳೆದರೆ ದುಬಾರಿ ಖರ್ಚು . ಅಧಿಕ ಪ್ರಮಾಣದಲ್ಲಿ ನೀರು ಬೇಕು. ವಿಪರೀತ ಕಳೆ ಹಾಗೂ ನಿರಂತರ ಶ್ರಮ ಅಗತ್ಯವೆಂದು ಬಹುತೇಕ ಎಲ್ಲರ ಅಭಿಪ್ರಾಯ. ಸತ್ಯ ಕೂಡ ಹೌದು. ಆದರೆ ಕಬ್ಬು ಬೆಳೆಯಲ್ಲಿ  ಸಾವಯವ ಕೃಷಿ ಪದ್ಧತಿ ಅನುಸರಿಸಿದರೆ  ಪ್ರಮಾಣ ನೀರು ಸಾಕಾಗುತ್ತದೆ. ಭೂಮಿಯಲ್ಲಿ ತೇವಾಂಶ ಇದ್ದರೆ ಅಷ್ಟೇ ಸಾಕು. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯಬಹದು. ಅಷ್ಟೇ ಅಲ್ಲ, ಕಬ್ಬಿನ ಜತೆಗೆ ವಿವಿಧ ಮಿಶ್ರ...Kannada News Portal