ಬೆಂಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೊಸ ತಂತ್ರಜ್ಞಾನವನ್ನು  ಬಳಸಿಕೊಳ್ಳುವ ಮೂಲಕ  ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಶ್ರೀಮತಿ ಫಿಲೋಮಿನಾ ಲೋಬೋರವರು ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ  ಭಾರತದಲ್ಲೇ ಮೊದಲ ಬಾರಿಗೆ ಪ್ರಾರಂಭಿಸಿರುವ ವಿನ್ಯಾಸ ಅನುಭವ ಕೇಂದ್ರ –  ಡಿಸೈನ್ ಎಕ್ಸ್ಪೀರಿಯೆನ್ಸ್ ಕೇಂದ್ರವನ್ನು ಉದ್ಘಾಟನೆ ಮಾಡಿದರು.

ವೈಜ್ಞಾನಿಕವಾಗಿ ವಿಜ್ಞಾನ ತಂತ್ರಜ್ಞಾನ ಮುಂದುವರೆದರೂ ನಾವು ಹಳೆಯ ಕಾಲದ ಚಾಲ್ತಿಯಲ್ಲಿರುವ ಕೆಲಸಗಳನ್ನೆ ಅವಲಂಬಿಸಿದ್ದೇವೆ. ನಾವು ವೈಜ್ಞಾನಿಕ ತಳಹದಿಯ ಶಿಕ್ಷಣವನ್ನು ಪಡೆಯುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕಾಗಿದೆ. ಬದಲಾವಣೆಗೆ ಹತ್ತಿರವಿರುವ ಶಿಕ್ಷಣವನ್ನು ಡಿಕ್ಯೂ ಲ್ಯಾಬ್ ಒದಗಿಸುತ್ತಿದೆ. ಡಿಕ್ಯೂ ಲ್ಯಾಬ್ ನ ಉದ್ದೇಶ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ಭೋದನಾ ತರಬೇತಿ ನೀಡುತ್ತಿದೆ. ರಾಜ್ಯದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ 35 ಕ್ಕೂ ಹೆಚ್ಚು ಶಿಕ್ಷಕರಿಗೆ ಕರಕುಶಲ ತರಬೇತಿ ನೀಡುವ ಕೆಲಸ ಪ್ರಶಂಸನೀಯ ಎಂದರು.

ಐಐಟಿ ದೆಹಲಿಯ ಡಿಸೈನರ್ ಉಮೇಶ್ ಕುಮಾರ್ ಮಾತನಾಡಿ,  ಕಲೆ ಮತ್ತು ಕರಕುಶಲತೆಯೂ ವಿದ್ಯಾರ್ಥಿಗಳ ಉನ್ನತ ಮಟ್ಟದ ಸಂಶೋಧನಾ ಮತ್ತು ಅಭಿವೃದ್ಧಿ ಉದ್ಯೋಗಗಳಲ್ಲಿ ತೊಡಗಿಕೊಳ್ಳಲು ಭಾರತದ 1.3 ಬಿಲಿಯನ್ ಜನಸಂಖ್ಯೆ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ಕಾರ್ಯಗಾರದಲ್ಲಿ  ವಿನ್ಯಾಸಕರು ಸಾಫ್ಟ್ವೇರ್ ಐಟಿ,  ಜಾಹೀರಾತು ಫ್ಯಾಷನ್, ಆಟೋಮೊಬೈಲ್ ಮತ್ತು ಇತರೆ ಕಂಪನಿಗಳಲ್ಲಿ ಉದ್ಯೋಗ ಗಳನ್ನು ಪಡೆಯಲು ಸಹಾಕರಿಯಾಗಲ್ಲಿದೆ, ಇವರಿಂದ ಸೃಜನಾತ್ಮಕ ವಿದ್ಯಾರ್ಥಿಗಳಿಗೆ ಆರ್ಕಿಟೆಕ್ಚರ್ ಮತ್ತು ವಿನ್ಯಾಸಕಾರರಾಗಲು ಸಲಹೆ ನೀಡುತ್ತಾದೆ ಎಂದು ತಿಳಿಸಿದರು‌‌.

ಐಐಟಿ ಪ್ರೊಡಕ್ಷನ್ ಡಿಸೈನ್ ಕಾನ್ಸೆಪ್ಟ್ ಸ್ಕೆಚಿಂದಗ್ ಮತ್ತು ಮಾಡಲ್ ಮೇಕಿಂಗ್ ಬಗ್ಗೆ ಪ್ರೋ. ರತನ್ ಗಂಗಾಧರ್ ಮುಂಬೈ ಡಿಸೈನರ್  ‘ ರಿಂದ ಸೆಪ್ಟೆಂಬರ್  1  ಮತ್ತು 2 ರಂದು ಉಚಿತವಾಗಿ ಡಿಕ್ಯೂ ಲ್ಯಾಬ್ಸ್ ಇಂದಿರಾನಗರ, ಮಲ್ಲೇಶ್ವರಂ, ಮಾರತ್ತಹಳ್ಳಿ, ಜಯನಗರ ಕೇಂದ್ರಗಳಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ ಆಸಕ್ತರು ಭಾಗವಹಿಸಬಹುದಾಗಿದೆ.

ಜನರ ಜೀವನದ ಗುಣಮಟ್ಟವನ್ನು ಹೇಗೆ ಉತ್ತಮಗೊಳಿಸಬಹುದು ಎಂದು  ಸಾರ್ವಜನಿಕರಿಗೆ ತೋರಿಸುವುದು, ವಿನ್ಯಾಸ ಅನುಭವ ಕೇಂದ್ರದ ಉದ್ದೇಶವಾಗಿದೆ,‌  ಬೆಂಗಳೂರಿನ ವಿವಿಧ ಶಾಲೆಗಳಿಂದ 7ನೇ ತರಗತಿಯಿಂದ 12 ನೇ ತರಗತಿಯವರಿಗಿನ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶವನ್ನು ಉಚಿತವಾಗಿ ಆಯೋಜಿಸಿದು ಇದನ್ಮು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಉಪಯೋಗ ಪಡಿದುಕೊಳಬೇಕೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಡಾ. ಸೌಮ್ಯಜೀತ್ ಗೋಷಲ್, ಲೂರೆಂಟ್ , ಡಿಯೋನ್,  ಶಾನ್ ಡೀಸಾ, ಶಾಮ್, ಯಶೋಧ,  ಡಿಕ್ಯೂ ಲ್ಯಾಬ್ಸ್ ಸಂಸ್ಥೆಯ ಶಿಕ್ಷಕ ವೃಂದದವರು, ತರಬೇತು ವಿದ್ಯಾರ್ಥಿಗಳು  ಮುಂತಾದವರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/08/WhatsApp-Image-2018-08-30-at-3.16.59-PM-1024x768.jpeghttp://bp9news.com/wp-content/uploads/2018/08/WhatsApp-Image-2018-08-30-at-3.16.59-PM-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಬೆಂಗಳೂರು: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಹೊಸ ತಂತ್ರಜ್ಞಾನವನ್ನು  ಬಳಸಿಕೊಳ್ಳುವ ಮೂಲಕ  ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಶ್ರೀಮತಿ ಫಿಲೋಮಿನಾ ಲೋಬೋರವರು ಅಭಿಪ್ರಾಯ ಪಟ್ಟಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ  ಭಾರತದಲ್ಲೇ ಮೊದಲ ಬಾರಿಗೆ ಪ್ರಾರಂಭಿಸಿರುವ ವಿನ್ಯಾಸ ಅನುಭವ ಕೇಂದ್ರ -  ಡಿಸೈನ್ ಎಕ್ಸ್ಪೀರಿಯೆನ್ಸ್ ಕೇಂದ್ರವನ್ನು ಉದ್ಘಾಟನೆ ಮಾಡಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ?...Kannada News Portal