ನವದೆಹಲಿ : ಉತ್ತರಖಂಡಕ್ಕೆ ಪ್ರವಾಸಕ್ಕೆ ತೆರಳಿರುವ ಕರ್ನಾಟಕದ ಯುವಕರ ತಂಡ ಸಂಕಷ್ಟಕ್ಕೀಡಾಗಿದ್ದು, ಅಲ್ಲಿಯ ಸರ್ಕಾರ ಯುವಕರ ಬೆಂಬಲಕ್ಕೆ ನಿಂತು ಸಹಕರಿಸಿದೆ. ಉತ್ತರಖಂಡದ ಪ್ರಸಿದ್ಧ ಕೇತ್ರವಾದ ಯಮುನೋತ್ರಿ ನೋಡಲು ಕರ್ನಾಟಕದ 16 ಜನರ ಯುವಕರ ತಂಡ ಹೋಗಿದೆ. ಆದರೆ ಇವರು ಹೋದ ಸಂದರ್ಭದಲ್ಲಿ ಆ ಕ್ಷೇತ್ರದಲ್ಲಿ ಆಟೋ ಚಾಲಕರ ಮುಷ್ಕರ ಮತ್ತು ಮಳೆಯಿಂದಾಗಿ ಯಮುನೋತ್ರಿಗೆ ಹೋಗಲು ಯಾವುದೇ ವಾಹನವಿಲ್ಲದೆ ಯುವಕರು ಕಂಗಾಲಾಗಿದ್ದರು. ಯಾವುದೇ ರೀತಿಯ ಪರಿಹಾರ ಸಿಗುವುದು ಕಷ್ಟ ಎಂದು ತಿಳಿದ ಯುವಕರು ಉತ್ತರ ಕಾಶಿಯ ಬಾರಾಕೋಟ್​​​ ವಿಭಾಗದ  ತಹಸೀಲ್ದಾರ್​​​ ಅವರನ್ನ ಅವರ ಕಚೇರಿಯಲ್ಲಿ ಭೇಟಿಯಾಗಿದ್ದಾರೆ.

ಹುಡುಗರ ಸಮಸ್ಯೆ ತಿಳಿದ ತಹಸೀಲ್ದಾರ್​​ ಅವರು ತಕ್ಷಣ ಸ್ಪಂದಿಸಿದ್ದಾರೆ. ಸರ್ಕಾರಿ ವಾಹನದ ವ್ಯವಸ್ಥೆ ಮಾಡಿ ಯಮುನೋತ್ರಿಗೆ ಕಳುಹಿಸಿ ಕೊಟ್ಟಿದ್ದಾರೆ. ಇದರಿಂದ ಯುವಕರು ಫುಲ್​ ಖುಷ್​​ ಆಗಿದ್ದು, ತಹಸೀಲ್ದಾರ್ ಅವರ ಸರಳತೆ, ಕಾಳಜಿಗೆ ಧನ್ಯವಾದ ಸಲ್ಲಿಸಿದ್ದಾರೆ. ಬಿಪಿ9 ಜೊತೆ ಮಾತನಾಡಿದ ಯುವಕರು, ತಹಸೀಲ್ದಾರ್ ಅವರ ತಕ್ಷಣದ ಸ್ಪಂಧನೆ ಬಹಳ ಮೆಚ್ಚಬಹುದಂತದ್ದು.  ಪ್ರವಾಸಿಗರಿಗೆ ಅಲ್ಲಿಯ ಸರ್ಕಾರ, ಅದರ ಅಧಿಕಾರಿಗಳು ನೀಡುವ ಗೌರವ, ಕಾಳಜಿ ನೋಡಿ ನಮಗೆ ತುಂಬಾ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.

 

 

Please follow and like us:
0
http://bp9news.com/wp-content/uploads/2018/08/WhatsApp-Image-2018-08-09-at-4.00.48-PM-1024x767.jpeghttp://bp9news.com/wp-content/uploads/2018/08/WhatsApp-Image-2018-08-09-at-4.00.48-PM-150x150.jpegBP9 Bureauಪ್ರಮುಖರಾಷ್ಟ್ರೀಯನವದೆಹಲಿ : ಉತ್ತರಖಂಡಕ್ಕೆ ಪ್ರವಾಸಕ್ಕೆ ತೆರಳಿರುವ ಕರ್ನಾಟಕದ ಯುವಕರ ತಂಡ ಸಂಕಷ್ಟಕ್ಕೀಡಾಗಿದ್ದು, ಅಲ್ಲಿಯ ಸರ್ಕಾರ ಯುವಕರ ಬೆಂಬಲಕ್ಕೆ ನಿಂತು ಸಹಕರಿಸಿದೆ. ಉತ್ತರಖಂಡದ ಪ್ರಸಿದ್ಧ ಕೇತ್ರವಾದ ಯಮುನೋತ್ರಿ ನೋಡಲು ಕರ್ನಾಟಕದ 16 ಜನರ ಯುವಕರ ತಂಡ ಹೋಗಿದೆ. ಆದರೆ ಇವರು ಹೋದ ಸಂದರ್ಭದಲ್ಲಿ ಆ ಕ್ಷೇತ್ರದಲ್ಲಿ ಆಟೋ ಚಾಲಕರ ಮುಷ್ಕರ ಮತ್ತು ಮಳೆಯಿಂದಾಗಿ ಯಮುನೋತ್ರಿಗೆ ಹೋಗಲು ಯಾವುದೇ ವಾಹನವಿಲ್ಲದೆ ಯುವಕರು ಕಂಗಾಲಾಗಿದ್ದರು. ಯಾವುದೇ ರೀತಿಯ ಪರಿಹಾರ ಸಿಗುವುದು ಕಷ್ಟ ಎಂದು...Kannada News Portal