ಬೆಂಗಳೂರು: ಎಚ್.ಡಿ ಕುಮಾಸ್ವಾಮಿ ಅವರನ್ನು ಐದು ವರ್ಷಕ್ಕೆ ಮುಖ್ಯಮಂತ್ರಿ ಮಾಡಲಾಗಿದೆ ಆದರೆ ಅವರು ಏಕೆ ನನ್ನ ಅಧಿಕಾರ  ಅವಧಿ ಕೇವಲ ಒಂದೇ ವರ್ಷ, ಅದು  ಕೇವಲ ಲೋಕಸಭಾ ಚುನಾವಣೆ ಮುಗಿಯುವವರಗೆ ಮಾತ್ರ  ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಈ ರೀತಿ  ಕುಮಾರಸ್ವಾಮಿ  ಹೇಳುವ  ಮೂಲಕ ಸರ್ಕಾರದ  ಭದ್ರತೆಗೆ ಅಪಾಯವಿದೆ  ಎಂಬ ಸಂದೇಶವನ್ನು  ಅವರಾಗಿಯೇ  ರವಾನೆ ಮಾಡುತ್ತಿರುವುದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂಬುದನ್ನು  ನೆನಪಿನಲ್ಲಿ ಇಡಬೇಕು ಎಂದು ತಾಕೀತು ಮಾಡಿ,  ಹುಡುಗಾಟದ ಹೇಳಿಕೆ ಸಲ್ಲದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕಾಂಗ್ರೆಸ್ ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಬೆಂಬಲ ಕೊಟ್ಟಿಲ್ಲ, ಮತ್ತು ಸಿಎಂ ಹುದ್ದೆಯನ್ನು 30 ತಿಂಗಳಿಗೆ ಮೀಸಲು ಮಾಡಿ ಅಧಿಕಾರ ಹಂಚಿಕೊಳ್ಳಬೇಕು ಎಂಬ ನಿಬಂಧನೆ ಹಾಕಿಲ್ಲ. ಹೀಗಿರುವಾಗ ಕುಮಾರಸ್ವಾಮಿ  ಸರ್ಕಾದ ಭದ್ರತೆಗೆ  ಅಪನಂಬಿಕೆ ಬರುವ ರೀತಿಯಲ್ಲಿ ಹೆಳುವುದು ತರವಲ್ಲ, ಇದು ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಅಪನಂಬಿಕೆ ಮೂಡುತ್ತದೆ.ಇಂತಹ ಕೆಟ್ಟ ಅಲೋಚನೆಗಳಿಗೆ ಕುಮಾರಸ್ವಾಮಿ ಆಸ್ಪದ ಕೊಡಬಾರದು  ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

Please follow and like us:
0
http://bp9news.com/wp-content/uploads/2018/06/collage-1-18.jpghttp://bp9news.com/wp-content/uploads/2018/06/collage-1-18-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯಬೆಂಗಳೂರು: ಎಚ್.ಡಿ ಕುಮಾಸ್ವಾಮಿ ಅವರನ್ನು ಐದು ವರ್ಷಕ್ಕೆ ಮುಖ್ಯಮಂತ್ರಿ ಮಾಡಲಾಗಿದೆ ಆದರೆ ಅವರು ಏಕೆ ನನ್ನ ಅಧಿಕಾರ  ಅವಧಿ ಕೇವಲ ಒಂದೇ ವರ್ಷ, ಅದು  ಕೇವಲ ಲೋಕಸಭಾ ಚುನಾವಣೆ ಮುಗಿಯುವವರಗೆ ಮಾತ್ರ  ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಸಿಎಂ ವೀರಪ್ಪ ಮೊಯಿಲಿ ಹೇಳಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal