ಕೃಷ್ಣರಾಜಪುರ: ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಅಧಿಕಾರಿಗಳು ಹಾಗೂ   ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಮತದಾನದ ಮಾಡುವುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮುನಿಕೃಷ್ಣಪ್ಪ ಮತದಾನ ಬಗ್ಗೆ  ಮಾತನಾಡುತ್ತಾ, ಮತದಾನವನ್ನು ಕಡ್ಡಾಯವಾಗಿ ಮಾಡುವುದು, ನಮ್ಮೆಲರ ಹಕ್ಕು ನಮ್ಮ ಆದ್ಯ ಕರ್ತವ್ಯ, ಎಲ್ಲಾ ಮತದಾರರು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸುವುದು, ನಮ್ಮೆಲರ ಮತದಾನ ದೇಶಕ್ಕೆ ಆಧಾರ,ಮತದಾನ ಚಲಾಯಿಸಿ ಪ್ರಜಾ ಪ್ರಭುತ್ವ ಉಳಿಸಿ,ಇನ್ನೊಬ್ಬರ ಹೆಸರಿನಲ್ಲಿ ಮತದಾನ ಮಾಡುವುದು ಅಕ್ಷಮ್ಯ ಅಪರಾಧ ಮತ್ತು ಶಿಕ್ಷಾರ್ಹ, ಯಾವುದೇ ಅಮಿಶೆಗಳಿಗೆ ತುತ್ತಾಗದೆ ನಿರ್ಭಿತಿಯಿಂದ ಮಾತಾಚಲಾಯಿಸಿ, ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತ ಪಡಿಸಿಕೊಂಡು ಮತದಾನ ಮಾಡಿ‌ ಎಂಬ ಸಂದೇಶಗಳನ್ನು ಕೆ.ಆರ್.ಪುರದ ಮಾನಸ ಹೋಟೆಲ್, ಬಿಬಿಎಂಬಿ, ಪೋಲಿಸ್ ಠಾಣೆ ರಸ್ತೆಯ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.


ಇದೇ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್, ಹಿರಿಯ ಆರೋಗ್ಯಾಧಿಕಾರಿ ಬಾಬು, ಸಹಯಕ ಅಡಳಿತಾಧಿಕಾರಿ ಗೀತಾಂಜಲಿ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆರ ಮುಖ್ಯಾಸ್ಥೆ ಅಸ್ಮಾ,  ಆಶಾ ಕಾರ್ಯಕರ್ತೆಯರು, ಮುಂತಾದವರು ಉಪಸ್ಥಿತರಿದ್ದರು.

ವರದಿ: ಪರಿಸರ ಮಂಜು, ಕೆ.ಆರ್.ಪುರ

Please follow and like us:
0
http://bp9news.com/wp-content/uploads/2018/03/BP9-News-Web-Portal-89.jpeghttp://bp9news.com/wp-content/uploads/2018/03/BP9-News-Web-Portal-89-150x150.jpegBP9 Bureauಬೆಂಗಳೂರುಬೆಂಗಳೂರು ಗ್ರಾಮಾಂತರಕೃಷ್ಣರಾಜಪುರ: ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಎಲ್ಲಾ ಅಧಿಕಾರಿಗಳು ಹಾಗೂ   ಸಿಬ್ಬಂದಿ ವರ್ಗದವರ ಸಹಯೋಗದಲ್ಲಿ ಮತದಾನದ ಮಾಡುವುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಪೂರ್ವ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮುನಿಕೃಷ್ಣಪ್ಪ ಮತದಾನ ಬಗ್ಗೆ  ಮಾತನಾಡುತ್ತಾ, ಮತದಾನವನ್ನು ಕಡ್ಡಾಯವಾಗಿ ಮಾಡುವುದು, ನಮ್ಮೆಲರ ಹಕ್ಕು ನಮ್ಮ ಆದ್ಯ ಕರ್ತವ್ಯ, ಎಲ್ಲಾ ಮತದಾರರು ತಪ್ಪದೇ ತಮ್ಮ ಹಕ್ಕನ್ನು ಚಲಾಯಿಸುವುದು, ನಮ್ಮೆಲರ ಮತದಾನ ದೇಶಕ್ಕೆ ಆಧಾರ,ಮತದಾನ ಚಲಾಯಿಸಿ ಪ್ರಜಾ ಪ್ರಭುತ್ವ ಉಳಿಸಿ,ಇನ್ನೊಬ್ಬರ ಹೆಸರಿನಲ್ಲಿ ಮತದಾನ...Kannada News Portal