ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಖಾತೆ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಒಬ್ಬೊಬ್ಬರೇ ಅಸಮಾಧಾನ ಹೊರ ಹಾಕುತ್ತಿದ್ದು, ಇದೀಗ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ಸಚಿವ ಕೆ.ಜೆ.ಜಾರ್ಜ್​ ಗರಂ ಆಗಿದ್ದಾರೆ.

ಅಂದ ಹಾಗೆ ಜಾರ್ಜ್​ ಪರಮೇಶ್ವರ್ ಮೇಲೆ ಮುನಿಸಿಕೊಂಡಿರುವುದಕ್ಕೆ ಕಾರಣ ಕೆ.ಜೆ.ಜಾರ್ಜ್​​ ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರೆ, ಡಾ.ಜಿ.ಪರಮೇಶ್ವರ್ ಆಯ್ಕೆಯಾಗಿರುವುದು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರ. ಆದರೆ ಜಿ.ಪರಮೇಶ್ವರ್, ಡಿಸಿಎಂ, ಗೃಹ ಖಾತೆ ಜೊತಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿದ್ದಾರೆ. ಇದೇ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಅವರ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ.

ಇಂದು ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ  ಕೆ.ಜೆ.ಜಾರ್ಜ್​, ಜಿ.ಪರಮೇಶ್ವರ್ ಮೂರ್ನಾಲ್ಕು ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಅವರೇ ಉಪಮುಖ್ಯಮಂತ್ರಿ, ಅವರೇ‌ ಕೆಪಿಸಿಸಿ ಅಧ್ಯಕ್ಷರು, ಜೊತೆಗೆ ಅವರೇ ಗೃಹ ಸಚಿವರು. ಜೊತೆಗೆ ಬೆಂಗಳೂರು ನಗರಾಭಿವೃದ್ಧಿ ಬೇರೆ? ಅವರು ಆಯ್ಕೆಯಾಗಿರುವುದು ಎಲ್ಲಿಂದ? ಅವರು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರದಿಂದ ಶಾಸಕರಾಗಿರುವುದು. ಅವರು ತುಮಕೂರು ಜಿಲ್ಲೆಗೆ ಉಸ್ತುವಾರಿ ಆಗಬೇಕಾಗಿರುವುದು?  ಇಲ್ಲಿಗೆ ಹೇಗೆ ಆಗುವುದಕ್ಕೆ ಆಗುತ್ತೆ?

ಬೆಂಗಳೂರಿನಲ್ಲಿ ನಾನು, ಜಮೀರ್, ಕೃಷ್ಣಬೈರೇಗೌಡ ಮೂವರು ಸಚಿವರಿದ್ದೇವೆ. ಈಗ ನಮ್ಮನ್ನ ಯಾವ ಜಿಲ್ಲೆಗೆ ಉಸ್ತುವಾರಿ ಮಾಡ್ತಾರೆ? ಕಳೆದ ಸಂಪುಟದಲ್ಲಿ ನಾನು ಬೆಂಗಳೂರು ನಗರಾಭಿವೃದ್ಧಿ ಸಚಿವನಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಹೀಗಿರುವಾಗ ನನಗೆ ಯಾಕೆ ಬೆಂಗಳೂರು ನಗರಾಭಿವೃದ್ಧಿ ಕೊಟ್ಟಿಲ್ಲ ಎಂದು ಅರ್ಥವಾಗುತ್ತಿಲ್ಲ. ನಾನು ಇದರ ಬಗ್ಗೆ ಖಂಡಿತಾ ಹೈಕಮಾಂಡ್ ಗಮನ ಸೆಳೆಯುತ್ತೇನೆ ಎಂದು ಕೆ.ಜೆ.ಜಾರ್ಜ್​ ತಿಳಿಸಿದ್ದಾರೆ.

 

 

Please follow and like us:
0
http://bp9news.com/wp-content/uploads/2018/06/collage-4-4.jpghttp://bp9news.com/wp-content/uploads/2018/06/collage-4-4-150x150.jpgBP9 Bureauತುಮಕೂರುಪ್ರಮುಖರಾಜಕೀಯಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಖಾತೆ ಅಸಮಾಧಾನ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಒಬ್ಬೊಬ್ಬರೇ ಅಸಮಾಧಾನ ಹೊರ ಹಾಕುತ್ತಿದ್ದು, ಇದೀಗ ಡಿಸಿಎಂ ಡಾ.ಜಿ.ಪರಮೇಶ್ವರ್ ವಿರುದ್ಧ ಸಚಿವ ಕೆ.ಜೆ.ಜಾರ್ಜ್​ ಗರಂ ಆಗಿದ್ದಾರೆ. ಅಂದ ಹಾಗೆ ಜಾರ್ಜ್​ ಪರಮೇಶ್ವರ್ ಮೇಲೆ ಮುನಿಸಿಕೊಂಡಿರುವುದಕ್ಕೆ ಕಾರಣ ಕೆ.ಜೆ.ಜಾರ್ಜ್​​ ಬೆಂಗಳೂರಿನ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದರೆ, ಡಾ.ಜಿ.ಪರಮೇಶ್ವರ್ ಆಯ್ಕೆಯಾಗಿರುವುದು ತುಮಕೂರು ಜಿಲ್ಲೆಯ ಕೊರಟಗೆರೆ ಕ್ಷೇತ್ರ. ಆದರೆ ಜಿ.ಪರಮೇಶ್ವರ್, ಡಿಸಿಎಂ, ಗೃಹ ಖಾತೆ ಜೊತಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಹೊಂದಿದ್ದಾರೆ....Kannada News Portal