ಬೆಂಗಳೂರು: #FlirtWithYourCity ಅಭಿಯಾನದಲ್ಲಿ  ಪ್ರಸಿದ್ಧ ಗಾಯಕ ರಘು ದೀಕ್ಷಿತ್ ಮತ್ತು ಕಿರಿಕ್​​ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಬೆಂಗಳೂರಿನೊಂದಿಗಿನ ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.  

ಗಾಯಕ ರಘು ದೀಕ್ಷಿತ್ ನೆನಪುಗಳನ್ನು ಹಂಚಿಕೊಳ್ಳುತ್ತಾ, ನಾವು ಬೆಂಗಳೂರಿಗೆ ಬಂದಾಗಿನಿಂದ ಅಂದರೆ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಕೃಷ್ಣ ರಾಜೇಂದ್ರ ಹೂವಿನ ಮಾರುಕಟ್ಟೆಯಲ್ಲಿ ಮಾರಾಟಗಾರರ ಮಧ್ಯ ಕುಳಿತಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಅದೆಷ್ಟೋ ಜನ ಬಂದು ನೆಲೆಸಿದ್ದಾರೆ. ನನ್ನ ಪ್ರಕಾರ ಇಲ್ಲಿನ ಹೂವುಗಳು ನಗರವನ್ನು ಅತ್ಯುತ್ತಮವಾಗಿ ಪ್ರತಿನಿಧಿಸುತ್ತವೆ ಎಂದು ಹೇಳಿದ್ದಾರೆ.

ನಗರ ಬಿಇಎಲ್ ರಸ್ತೆಯಲ್ಲಿರುವ ರಾಮಯ್ಯಾ ಕಾಲೇಜಿನಲ್ಲಿ ಪದವಿ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ, ಆ ರಸ್ತೆಯ ಬಗ್ಗೆ ಪ್ರೇಮ ವ್ಯಕ್ತಪಡಿಸುತ್ತಾ, “2014ರಿಂದ ನಾನಿಲ್ಲಿ ವಾಸಿಸುತ್ತಿದ್ದೇನೆ. ನನ್ನ ಕುಟುಂಬ ನನ್ನ ಬಗ್ಗೆ ಭೀತಿಯಿಂದಿತ್ತು. ಹಿಂದೆ ಈ ಪ್ರದೇಶ ಅಭಿವೃದ್ಧಿಯಿಂದ ದೂರ ಉಳಿದಿತ್ತು. ಹೀಗಾಗಿ ಜನ ಇಲ್ಲಿ ವಾಸಿಸಲು ಹಿಂಜರಿಯುತ್ತಿದ್ದರು. ಕಾಲ ಕಳೆದಂತೆ ಬೆಂಗಳೂರು ನಗರ ಮಹಿಳೆಯರಿಗೂ ಸೇರಿದಂತೆ ಎಲ್ಲರಿಗೂ ಸುರಕ್ಷಿತ ನಗರವಾಗಿ ಬದಲಾಗಿದೆ. ರಾತ್ರಿ ವೇಳೆಯೂ ಹೆಣ್ಣುಮಕ್ಕಳು ಭೀತಿಯಿಲ್ಲದೆ ಓಡಾಡುವುದೇ ಇದಕ್ಕೆ ಸಾಕ್ಷಿ. ಇಲ್ಲಿ ಜೀವಿಸುವುದು ನಿಜಕ್ಕೂ ಹೆಮ್ಮೆ ಎಂದು ಹೇಳಿದ್ದಾರೆ.

 

Please follow and like us:
0
http://bp9news.com/wp-content/uploads/2018/07/collage-7.jpghttp://bp9news.com/wp-content/uploads/2018/07/collage-7-150x150.jpgBP9 Bureauಪ್ರಮುಖಬೆಂಗಳೂರುಬೆಂಗಳೂರು ಗ್ರಾಮಾಂತರಬೆಂಗಳೂರು: #FlirtWithYourCity ಅಭಿಯಾನದಲ್ಲಿ  ಪ್ರಸಿದ್ಧ ಗಾಯಕ ರಘು ದೀಕ್ಷಿತ್ ಮತ್ತು ಕಿರಿಕ್​​ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಬೆಂಗಳೂರಿನೊಂದಿಗಿನ ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.   ಗಾಯಕ ರಘು ದೀಕ್ಷಿತ್ ನೆನಪುಗಳನ್ನು ಹಂಚಿಕೊಳ್ಳುತ್ತಾ, ನಾವು ಬೆಂಗಳೂರಿಗೆ ಬಂದಾಗಿನಿಂದ ಅಂದರೆ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಕೃಷ್ಣ ರಾಜೇಂದ್ರ ಹೂವಿನ ಮಾರುಕಟ್ಟೆಯಲ್ಲಿ ಮಾರಾಟಗಾರರ ಮಧ್ಯ ಕುಳಿತಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ಅದೆಷ್ಟೋ ಜನ ಬಂದು ನೆಲೆಸಿದ್ದಾರೆ. ನನ್ನ ಪ್ರಕಾರ ಇಲ್ಲಿನ ಹೂವುಗಳು ನಗರವನ್ನು...Kannada News Portal