ಹಾಸನ : ಹಿಂದಿನ ಚುನಾವಣೆಯಲ್ಲಿ ಗೆದ್ದು ಸಾಧಿಸಿದ ತಾವು ಹೆಚ್ಚು ಅಭಿವೃದ್ದಿ ಕೆಲಸ ಮಾಡಿಯೂ ಈ ಬಾರಿಯ ಚುನಾವಣೆಯಲ್ಲಿ ಸೋತೆ. ಇದಕ್ಕೆ ತುಂಬಾ ಬೇಸರವಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ.

ಜೆಡಿಎಸ್ ಕಾರ್ಯಕರ್ತರ ಮತ್ತು ಆತ್ಮಾವಲೋಕನದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 2008ರಲ್ಲಿವಿಧಾನಸಭೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಸೋಲು ಕಂಡೆ. 2010ರ ಉಪ ಚುನಾವಣೆಯಲ್ಲಿ ಅಂದಿನ ಬಿಜೆಪಿ ಸರಕಾರವೇ ತಮ್ಮ ವಿರುದ್ದ ನಿಂತು ಹೋರಾಡಿದ ಫಲ ಆಗಲೂ ಸೋತೆ. ಇದಕ್ಕೆ ಬೇಸರವಾಗಿರಲಿಲ್ಲ. ನಂತರ 2013ರ ಚುನಾವಣೆಯಲ್ಲಿ ಗೆದ್ದ ನಂತರ ಅಭಿವೃದ್ದಿ ಕೆಲಸ ಮಾಡಿದರೂ ಈ ಬಾರಿಯ ಸೋಲು ನೋವು ತಂದಿದೆ ಎಂದರು.

ಪಕ್ಷ ಬೇಧವಿಲ್ಲದೆ ನಾನು ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ. ನನಗೆ ನೇರ ನಿಷ್ಟುರವಾಗಿ ಮಾತನಾಡಲಾಗದ ಅಸಹಾಯಕತೆಯಿತ್ತು. ಹಲವು ನೋವನ್ನು ನನ್ನೊಳಗೇ ನುಂಗಿದ್ದೇನೆ. ಕಹಿ ಸತ್ಯವನ್ನು ನನ್ನೊಳಗೇ ಹುದುಗಿಸಿಕೊಂಡಿದ್ದೇನೆ ಎಂದರು.

ನಾನು ಎಷ್ಟೇ ಒಳ್ಳೆಯವನು ಎಂದು ಕರೆಸಿಕೊಂಡರೂ ನನ್ನ ಪರಿವಾರ ಮಾಡಿದ ತಪ್ಪು ಈ ಚುನಾವಣೆಯಲ್ಲಿ ಪರಿಣಾಮ ಉಂಟು ಮಾಡಿರುವುದು ಸತ್ಯ. ಕಳೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತ ನೀಡಿ ಗೆಲ್ಲಿಸಿದ ಕಡೂರಿನ ಜನತೆಯ ಸೇವೆಯನ್ನು ಶಾಸಕನಾದ ನಂತರ ಪ್ರಾಮಾಣಿಕವಾಗಿ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ದುಡಿದಿದ್ದೇನೆ. ವೈಯಕ್ತಿಕ ಜೀವನದ ನೂರಾರು ನೋವನ್ನು ಮರೆತು ಕ್ಷೇತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಆದರೂ ನನ್ನ ಸೋಲು ಒಂದು ಪ್ರಶ್ನೆಯಾಗಿಯೇ ಕಾಡುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕೋಡಿಹಳ್ಳಿ ಮಹೇಶ್ವರಪ್ಪ, ಬಿದರೆ ಜಗದೀಶ್, ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ, ಮುಖಂಡರಾದ ಎಚ್.ಎಂ.ಲೋಕೇಶ್, ಕಂಸಾಗರಶೇಖರ್, ಶೂದ್ರಶ್ರೀನಿವಾಸ್, ಸತೀಶ್‍ನಾಯ್ಕ. ಎನ್.ಕೆ. ಇಮಾಮ್. ಡಿ.ಪ್ರಶಾಂತ್, ಕೆ.ಎಚ್.ಶಂಕರ್, ಮುಂತಾದವರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/05/09BGYSV_DATTA_1451857e.jpghttp://bp9news.com/wp-content/uploads/2018/05/09BGYSV_DATTA_1451857e-150x150.jpgBP9 Bureauಪ್ರಮುಖರಾಜಕೀಯಹಾಸನಹಾಸನ : ಹಿಂದಿನ ಚುನಾವಣೆಯಲ್ಲಿ ಗೆದ್ದು ಸಾಧಿಸಿದ ತಾವು ಹೆಚ್ಚು ಅಭಿವೃದ್ದಿ ಕೆಲಸ ಮಾಡಿಯೂ ಈ ಬಾರಿಯ ಚುನಾವಣೆಯಲ್ಲಿ ಸೋತೆ. ಇದಕ್ಕೆ ತುಂಬಾ ಬೇಸರವಿದೆ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತ ಹೇಳಿದ್ದಾರೆ. ಜೆಡಿಎಸ್ ಕಾರ್ಯಕರ್ತರ ಮತ್ತು ಆತ್ಮಾವಲೋಕನದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಳೆದ 2008ರಲ್ಲಿವಿಧಾನಸಭೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಸೋಲು ಕಂಡೆ. 2010ರ ಉಪ ಚುನಾವಣೆಯಲ್ಲಿ ಅಂದಿನ ಬಿಜೆಪಿ ಸರಕಾರವೇ ತಮ್ಮ ವಿರುದ್ದ ನಿಂತು ಹೋರಾಡಿದ ಫಲ...Kannada News Portal