ಬೆಂಗಳೂರು: ಜಿಮ್​​ ಟ್ರೈನರ್​ ಮಾರುತಿ ಗೌಡರನ್ನ ಕಿಡ್ನಾಪ್​ ಮಾಡಿ ಹಲ್ಲೆ ಮಾಡಿದ ಆರೋಪದ ಮೇಲೆ ನಟ ದುನಿಯಾ ವಿಜಯ್​ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಇದೀಗ ವಿಜಯ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ‌ದುನಿಯಾ ವಿಜಯ್ ಹೆಸರು ಕೇಳಿ ಬಂದಿದೆ. ಹೀಗಾಗಿ ಅವರ ಮೇಲೆ ರೌಡಿ ಶೀಟರ್​ ಖಾತೆ ತೆರೆಯಲು ಪೊಲೀಸರು ಹಿರಿಯ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ರೌಡಿಶೀಟ್​​​ ಓಪನ್ ಮಾಡಲು ಕಾರಣಗಳೇನು?
ಅಪರಾಧ ಪ್ರಕರಣಗಳಲ್ಲಿ ಪದೇ ಪದೇ ವಿಜಯ್​ ಹೆಸರು, ಕೇಳಿ ಬರುತ್ತಿದೆ.
1. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಚನ್ನಮ್ಮ ಅಚ್ಚುಕಟ್ಟು ಠಾಣೆಯಲ್ಲಿ ವಿಜಯ್​ ವಿರುದ್ಧ ಕೇಸ್ ದಾಖಲಾಗಿದೆ.
2. ವಿಜಯ್​ ಅವರ ಮೊದಲ ಪತ್ನಿ ನಾಗರತ್ನ ಅವರು ತಮಗೆ ಬೆದರಿಕೆ ಹಾಕಿದ್ದಾಗಿ ಚನ್ನಮ್ಮ ಅಚ್ಚುಕಟ್ಟು ಠಾಣೆಯಲ್ಲೇ ದೂರು ‌ದಾಖಲಾಸಿದ್ದರು.
3. ನಿರ್ಮಾಪಕ ಜಯಣ್ಣ ಮೇಲೆ ಹಲ್ಲೆ ಮಾಡಿದ‌ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ದುನಿಯಾ ವಿಜಯ್​ ಅವರನ್ನ ವಿಚಾರಣೆ ನಡೆಸಿದ್ದರು.
4. ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಕೇಸ್​ ಸಂಬಂಧ ಚನ್ನಮ್ಮ ಅಚ್ಚುಕಟ್ಟು ಪೊಲೀಸ್​ರಿಂದ ವಿಜಯ್​ ಬಂಧಿತರಾಗಿದ್ದರು.
5. ಇದೀಗ ಕಿಡ್ನಾಪ್ ಕೇಸ್​ನಲ್ಲಿ ಅರೆಸ್ಟ್​ ಆಗಿದ್ದಾರೆ. ಇದರ ಬೆನ್ನಲ್ಲೇ ಮಾಜಿ ಸೈನಿಕರೊಬ್ಬರು ನನಗೂ ವಿಜಯ್​ ಬೆದರಿಕೆ ಹಾಕಿ ಕಿಡ್ನಾಪ್ ಮಾಡುತ್ತೀನಿ ಎಂದು ಬೆದರಿಕೆ ಹಾಕಿದ್ರು ಎಂದು ದೂರು ನೀಡಿದ್ದಾರೆ. ಒಂದು ವೇಳೆ ಡ್ರಗ್ಸ್ ಸೇವನೆ ಆರೋಪ ಸಾಬೀತಾದ್ರೆ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ.
ಹೀಗೆ ಪದೇ ಪದೇ ಅಪರಾಧ ಕೃತ್ಯಗಳಲ್ಲಿ ವಿಜಯ್​ ಮೇಲೆ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ರೌಡಿಶೀಟರ್​ ಖಾತೆ ಓಪನ್​ ಮಾಡಲು ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
Please follow and like us:
0
http://bp9news.com/wp-content/uploads/2018/09/duniya-vijay-arrest-2.pnghttp://bp9news.com/wp-content/uploads/2018/09/duniya-vijay-arrest-2-150x150.pngBP9 Bureauಪ್ರಮುಖಬೆಂಗಳೂರುಸಿನಿಮಾಬೆಂಗಳೂರು: ಜಿಮ್​​ ಟ್ರೈನರ್​ ಮಾರುತಿ ಗೌಡರನ್ನ ಕಿಡ್ನಾಪ್​ ಮಾಡಿ ಹಲ್ಲೆ ಮಾಡಿದ ಆರೋಪದ ಮೇಲೆ ನಟ ದುನಿಯಾ ವಿಜಯ್​ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಇದೀಗ ವಿಜಯ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ‌ದುನಿಯಾ ವಿಜಯ್ ಹೆಸರು ಕೇಳಿ ಬಂದಿದೆ. ಹೀಗಾಗಿ ಅವರ ಮೇಲೆ ರೌಡಿ ಶೀಟರ್​ ಖಾತೆ ತೆರೆಯಲು ಪೊಲೀಸರು ಹಿರಿಯ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. var domain = (window.location != window.parent.location)? document.referrer :...Kannada News Portal