ಬೆಂಗಳೂರು : ಯಕ್ಷಗಾನ ಕ್ಷೇತ್ರಕ್ಕೆ 25 ವರ್ಷಗಳ ಅನುಪಮ ಸೇವೆ ಸಲ್ಲಿಸಿರುವ ಹಣಜಿಬೈಲ್ ಸದಾನಂದ ಹೆಗಡೆ ಅವರನ್ನು ಸನ್ಮಾನಿಸುವ  ‘ಸಮ್ಮಾನ್ಯ ಸದಾನಂದ’  09/06/2018 ರಂದು ಮಧ್ಯಾಹ್ನ 2 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಯಕ್ಷಗಾನವನ್ನು ಪ್ರವೃತ್ತಿಯಾಗಿ ಮಾಡಿಕೊಂಡು, ವೃತ್ತಿಯಷ್ಟೇ ಪ್ರೀತಿ ಹಾಗು ನಿಷ್ಠೆಯಿಂದ ಯಕ್ಷಗಾನ ಸಂಘಟನೆ, ಸಂಯೋಜನೆ, ಪ್ರದರ್ಶನಗಳನ್ನು ಕಳೆದ 25 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದು, ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಕಟ್ಟಿ ಹಲವಾರು ಹವ್ಯಾಸಿ ಉತ್ಸಾಹಿ ಯುವಕ – ಯುವತಿಯರಿಗೆ ವೇದಿಕೆಯನ್ನು ಒದಗಿಸಿಕೊಟ್ಟು, ಮಹಾನಗರದಲ್ಲೂ ಯಕ್ಷಗಾನ ಕಲೆಯನ್ನು ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಣಜಿಬೈಲ್ ಸದಾನಂದ ಹೆಗಡೆ ಇವರ ಹಲವು ಮಜಲುಗಳ ಯಕ್ಷ ಸೇವೆಯನ್ನು ಪರಿಗಣಿಸಿ, ಅವರನ್ನು ಸನ್ಮಾನಿಸುವ – ಪ್ರೋತ್ಸಾಹಿಸುವ ‘ಸಮ್ಮಾನ್ಯ ಸದಾನಂದ’ ಕಾರ್ಯಕ್ರಮವನ್ನು ಸದಾನಂದ ಯಕ್ಷಾಭಿಮಾನಿ ಬಳಗ, ಬೆಂಗಳೂರು ಕಾರ್ಯಕ್ರಮವನ್ನು ಆಯೋಜಿಸಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.   ರಾಘವೇಶ್ವಶ್ರೀಗಳ ದಿವ್ಯಾಶೀರ್ವಾದದೊಂದಿಗೆ ಕಾರ್ಯಕ್ರಮ ಸಂಯೊಜನೆಗೊಳಿಸಲಾಗಿದೆ.

ಮಧ್ಯಾಹ್ನ 2 ಗಂಟೆಗೆ “ಯಕ್ಷ ಧರ್ಮಸಭೆ” ನಡೆಯಲಿದ್ದು, ಬೇಲಿಮಠದ ಶ್ರೀಶ್ರೀ ಶಿವರುದ್ರ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಎಂ.ಎ ಹೆಗಡೆ,  ಕರ್ನಾಟಕ ಯಕ್ಷಧಾಮ ಸಂಸ್ಥೆಯ ಜನಾರ್ದನ ಹಂದೆ, ಕರ್ನಾಟಕ ಕಲಾದರ್ಶಿನಿಯ ಶ್ರೀನಿವಾಸ ಸಾಸ್ತಾನ, ಹಣಜಿಬೈಲ್ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷರಾದ ಬಾಬುರಾವ್ ಅಭ್ಯಾಗತರಾಗಿ ಆಗಮಿಸಲಿದ್ದು, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮಂಜುನಾಥ ಆರಾಧ್ಯ, ಪಂಜಾಬ್ ನ್ಯಾಷನಲ್ ಬ್ಯಾಂಕಿನ ವೃತ್ತ ಮುಖ್ಯಸ್ಥರಾದ ರಾಮದಾಸ ಹೆಗ್ಡೆ, ಹವ್ಯಕ ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, ಹವ್ಯಕ ಮಹಾಮಂಡಲದ ಅಧ್ಯಕ್ಷರಾದ ಈಶ್ವರೀ ಬೇರ್ಕಡವು ಮುಂತಾದವರು ಉಪಸ್ಥಿತರಿರಲಿದ್ದು, ಮಾಹಿತಿ ತಂತ್ರಜ್ಞರು ಹಾಗೂ ಹವ್ಯಾಸಿ ಯಕ್ಷ ಕಲಾವಿದರಾದ ಸುಧೀಂದ್ರ ಹೊಳ್ಳ ಅವರು ಅಭಿನಂದನಾ ನುಡಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸಭಾಕಾರ್ಯಕ್ರಮದ ನಂತರ ಕರ್ನಾಟಕ ಕಲಾದರ್ಶಿನಿ (ರಿ) ಇವರಿಂದ ಶ್ರೀಕೃಷ್ಣಪಾರಿಜಾತ ಹಾಗೂ ಕಲಾಸಿಂಚನ (ರಿ) ಸಿದ್ಧಾಪುರ ಇವರಿಂದ ಬ್ರಹ್ಮಕಪಾಲ ಯಕ್ಷಗಾನ ಪ್ರದರ್ಶನ ನಡೆಯಲಿದೆ.  ಕಾರ್ಯಕ್ರಮದ ಮಾಹಿತಿಗಾಗಿ 9632354127 ಸಂಪರ್ಕಿಸಬಹುದಾಗಿದೆ.

 

 

Please follow and like us:
0
http://bp9news.com/wp-content/uploads/2018/06/FB_IMG_1528360006016-1.jpghttp://bp9news.com/wp-content/uploads/2018/06/FB_IMG_1528360006016-1-150x150.jpgBP9 Bureauಉತ್ತರ ಕನ್ನಡಬೆಂಗಳೂರುಬೆಂಗಳೂರು : ಯಕ್ಷಗಾನ ಕ್ಷೇತ್ರಕ್ಕೆ 25 ವರ್ಷಗಳ ಅನುಪಮ ಸೇವೆ ಸಲ್ಲಿಸಿರುವ ಹಣಜಿಬೈಲ್ ಸದಾನಂದ ಹೆಗಡೆ ಅವರನ್ನು ಸನ್ಮಾನಿಸುವ  ‘ಸಮ್ಮಾನ್ಯ ಸದಾನಂದ'  09/06/2018 ರಂದು ಮಧ್ಯಾಹ್ನ 2 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಯಕ್ಷಗಾನವನ್ನು ಪ್ರವೃತ್ತಿಯಾಗಿ ಮಾಡಿಕೊಂಡು, ವೃತ್ತಿಯಷ್ಟೇ ಪ್ರೀತಿ ಹಾಗು ನಿಷ್ಠೆಯಿಂದ ಯಕ್ಷಗಾನ ಸಂಘಟನೆ, ಸಂಯೋಜನೆ, ಪ್ರದರ್ಶನಗಳನ್ನು ಕಳೆದ 25 ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದು, ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ಕಟ್ಟಿ ಹಲವಾರು ಹವ್ಯಾಸಿ ಉತ್ಸಾಹಿ ಯುವಕ -...Kannada News Portal