ಸ್ಯಾಂಡಲ್​ವುಡ್​ ಪುಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದೇ ನಮ್ಮ ಪುರ್ನವಸು. ಹಾಂ..ಅದೇ ವಸು,  ಟಗರು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರಿಟಿ ಗಿಟ್ಟಿಸಿಕೊಂಡ ಕೆಂಡ ಸಂಪಿಗೆ. ಸದ್ಯ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾನ್ವಿತಾ ಅದೆಷ್ಟು ಹಾಟ್​ ಆಗಿದ್ದಾರೆ ಅಂದ್ರೆ ನಿಜಕ್ಕೂ ಈ ಹುಡುಗಿ ಇಷ್ಟು ಬೋಲ್ಡ್​ ಅಂಡ್​ ಹಾಟಾ…ಅಂತಾ ನೋಡಿದವರಿಗೆ ಡೌಟ್​ ಬಂದು ಬಿಡುತ್ತೆ.
ಮುದ್ದು ಮುದ್ದಾಗಿ ಮಾನ್ವಿಯನ್ನು ನೋಡಿದ ಅದೆಷ್ಟೋ ಮಂದಿ ಅವಳ ಸ್ವೀಟ್ ಕ್ಯಾರೆಕ್ಟರ್​ನ್ನ, ಅವಳ ನಟನೆಯನ್ನು ಮೆಚ್ಚಿಕೊಂಡು ಪುಟ್ಟಿ ಸಿಕ್ಕಾಪಟ್ಟೆ ಟ್ಯಾಲೆಂಟೆಡ್​ ಅಂಸಿದ್ದರು. ಟಗರು ಸಿನಿಮಾದಲ್ಲಿ ನೋಡಿದ ಪುರ್ನವಸು ಅಲಿಯಾಸ್​ ಮಾನ್ವಿ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಬ್ಯೂಟಿಫುಲ್​ ಹುಡುಗಿ. ಅಂದಹಾಗೇ ಈ ಸೀರೆ ಫೋಟೋನೊಮ್ಮೆ ನೋಡ್ರೀ. ಅಬ್ಬಬ್ಬಾ! ಕಣ್ಣು ಕುಕ್ಕಿಸುವಂತೆ ಕಾಣುತ್ತಾಳೆ ಸುಂದರಿ ಮಾನ್ವಿ.


ವಿಷಯಕ್ಕೆ ಬರೋಣ. ಸದ್ಯ ದುಬೈನಲ್ಲಿ ನಡೆಯುತ್ತಿರೋ ಸೈಮಾ ಅವಾರ್ಡ್ಸ್​​ನಲ್ಲಿ ಸೀರೆಯುಟ್ಟು ಹಾಟ್​ ಆಗಿ ಪೋಸ್​​ ಕೊಟ್ಟಿದ್ದಾರೆ ಮಾನ್ವಿತಾ.


ಮೇಷ್ಟ್ರು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಟಗರು ಪುಟ್ಟಿ..!
ಒಂದ್ಸಲ ನೋಡ್ತಾ ಇದ್ದಂತೆ ಇವ್ರೇನಾ ಮಾನ್ವಿತಾ ಅನ್ನಿಸಿ ಬಿಡುತ್ತೆ.ಕನ್ನಡದಲ್ಲಿ ಮಾನ್ವಿತಾ ಸದ್ಯ ಮಾಡಿರೋದು ನಾಲ್ಕೇ ಸಿನಿಮಾ ಆದ್ರೂ, ಅವ್ರ ಪಾಪ್ಯುಲಾರಿಟಿಗೇನು ಕಮ್ಮಿ ಇಲ್ಲ. ಅಂದಹಾಗೆ ಮಾನ್ವಿತಾ ಸದ್ಯ ಮೇಷ್ಟ್ರು ನಾಗತೀಹಳ್ಳಿ ಚಂದ್ರಶೇಖರ್​ ನಿರ್ದೇಶನದ ಸಿನಿಮಾದಲ್ಲಿ ವಸಿಷ್ಟ ಸಿಂಹಗೆ ನಾಯಕಿಯಾಗಿ ನಟಿಸ್ತಾ ಇದ್ದಾರೆ. ಚಿತ್ರದ ವಿದೇಶಿ ಭಾಗದ ಚಿತ್ರೀಕರಣ ಕಂಪ್ಲೀಟ್​ ಆಗಿದ್ದು, ಇಷ್ಟ್ರಲ್ಲೆ ಕರ್ನಾಟಕದಲ್ಲಿ ನಡೆಯೋ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಈ ಸಿನಿಮಾ ಮತ್ತೆ ಮಾನ್ವಿತಾರ ಆ್ಯಕ್ಟಿಂಗ್​ ಟ್ಯಾಲೆಂಟ್​ನ ಓರೆಗೆ ಹಚ್ಚಲಿದೆ.

ಒಂದು ಗ್ಲಾಮರಸ್​ ಲುಕ್​ನಲ್ಲಿ ಮಾನ್ವಿತಾ ತೆರೆಗೆ ಬರಲಿದ್ದಾರೆ. ಸೈಮಾ ಸೀರೆ ಲುಕ್​ನ ಇನ್ನಷ್ಟು ಹಾಟ್​ ಫೋಟೋಸ್​ ಇಲ್ಲಿವೆ ನೋಡಿ.

 

Please follow and like us:
0
http://bp9news.com/wp-content/uploads/2018/09/150918_MANVITHA.jpghttp://bp9news.com/wp-content/uploads/2018/09/150918_MANVITHA-150x150.jpgBP9 Bureauಸಿನಿಮಾಸ್ಯಾಂಡಲ್​ವುಡ್​ ಪುಟ್ಟಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅದೇ ನಮ್ಮ ಪುರ್ನವಸು. ಹಾಂ..ಅದೇ ವಸು,  ಟಗರು ಸಿನಿಮಾದಲ್ಲಿ ಸಿಕ್ಕಾಪಟ್ಟೆ ಪಾಪ್ಯುಲರಿಟಿ ಗಿಟ್ಟಿಸಿಕೊಂಡ ಕೆಂಡ ಸಂಪಿಗೆ. ಸದ್ಯ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಾನ್ವಿತಾ ಅದೆಷ್ಟು ಹಾಟ್​ ಆಗಿದ್ದಾರೆ ಅಂದ್ರೆ ನಿಜಕ್ಕೂ ಈ ಹುಡುಗಿ ಇಷ್ಟು ಬೋಲ್ಡ್​ ಅಂಡ್​ ಹಾಟಾ...ಅಂತಾ ನೋಡಿದವರಿಗೆ ಡೌಟ್​ ಬಂದು ಬಿಡುತ್ತೆ. ಮುದ್ದು ಮುದ್ದಾಗಿ ಮಾನ್ವಿಯನ್ನು ನೋಡಿದ ಅದೆಷ್ಟೋ ಮಂದಿ ಅವಳ ಸ್ವೀಟ್ ಕ್ಯಾರೆಕ್ಟರ್​ನ್ನ, ಅವಳ ನಟನೆಯನ್ನು...Kannada News Portal