ಸಿನಿಮಾ ಟಾಕ್​ : ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ ತನ್ನ ಅಭಿನಯದ ಹಿರಿಮೆಯನ್ನು ಹೆಚ್ಚಿಸಿಕೊಂಡಿರುವ  ಕಿಚ್ಚ ಸುದೀಪ್​ ಬಾಲಿವುಡ್​​ ನಂಟೇನು  ಹೊಸದೇನಲ್ಲ. ಇದೀಗ ರಾಜಕೀಯ ಪ್ರಚಾರದಿಂದ ರಿಲ್ಯಾಕ್ಸ್​ ಪಡೆದುಕೊಂಡಿರುವ  ಅಭಿನಯ ಚಕ್ರವರ್ತಿ ತಮ್ಮ ಹೊಸ ಚಿತ್ರ  ಪೈಲ್ವಾನ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.  ಈಗ ಅದೇ ಚಿತ್ರಕ್ಕೆ ಆ್ಯಕ್ಟ್​ ಮಾಡಲು ತಮ್ಮ ಬಾಲಿವುಡ್​ ಸ್ನೇಹಿತನನ್ನು  ಕರೆ ತರುತ್ತಿದ್ದಾರೆ ಎನ್ನುವ ಸುದ್ದಿಗಳು ಸಿಕ್ಕಾಪಟ್ಟೆ ಹರಿದಾಡಿದವು. ಅಂದಹಾಗೇ ಆ ಆತ್ಮೀಯ ಬೇರೆ ಯಾರು ಅಲ್ಲ ನಟ  ಸುನೀಲ್​  ಶೆಟ್ಟಿ. ಈಗಾಗಲೇ ಅವರು ಸಿಸಿಎಲ್​ ಫ್ರೆಂಡ್ಸ್​ ಆಗಿದ್ದು ಗೊತ್ತೇ ಇದೆ.

ಆದರೆ ಈ ಹಿಂದೆಯೇ ಸುದೀಪ್​ ಸಿನಿಮಾವೊಂದಕ್ಕೆ  ಬಾಲಿವುಡ್​ ಆ್ಯಕ್ಟರ್​ ಬರ್ತಾರೆ ಅನ್ನೋದು ಸುದ್ದಿ ಇತ್ತು.  ಅದು ಯಾರೆಂದು ಮಾತ್ರ  ಸ್ಪಷ್ಟನೆ ಇರಲಿಲ್ಲ. ಅಲ್ಲದೇ  ಅದು ಸುನೀಲ್​  ಶೆಟ್ಟಿ ಅಂತಾ ಕೂಡ  ಕನ್​ಫರ್ಮ್​ ಆಗಿರಲಿಲ್ಲ. ಸದ್ಯ  ಕಿಚ್ಚ ಖುದ್ದು   ಟ್ವೀಟ್​ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.  ಸುನೀಲ್​ ಶೆಟ್ಟಿ​ ಸುದೀಪ್ ಸಿನಿಮಾದಲ್ಲಿ ಬಾಂಬೆಯಿಂದ ಬರುತ್ತಿದ್ದಾರಂತೆ.  ಸಿನಿಮಾ ಶೂಟಿಂಗ್​  ನಾಳೆಯಿಂದ ಆರಂಭವಾಗಲಿದೆ, ಅದರಲ್ಲಿ ಅವರು ಪಾಲ್ಗೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಪೈಲ್ವಾನ್​ನಲ್ಲಿ  ಅಭಿನಯಿಸಲು ಬಾಲಿವುಡ್​ ನಟಿ ಆಕಾಂಕ್ಷಾ ಕೂಡ ಆಯ್ಕೆ ಆಗಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ.  ಹೆಬ್ಬುಲಿ ನಂತರ ಕೃಷ್ಣ ಕಿಚ್ಚನ ಸಿನಿಮಾವನ್ನು  ನಿರ್ದೇಶನ ಮಾಡುತ್ತಿದ್ದಾರೆ.  ಶೂಟಿಂಗ್​ ವೇಳೆ ಅಷ್ಟರಲ್ಲಿ   ಸಿನಿಮಾದಲ್ಲಿ ನಟಿಸುವ ಕಲಾವಿದರ ಲೀಸ್ಟ್​ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ನಿರ್ದೇಶಕರು.

 

Please follow and like us:
0
http://bp9news.com/wp-content/uploads/2018/05/Kannada-star-Sudeep-to-play-Powerful-role-in-Ram-Charan-and-Boyapati-Srinu-film.pnghttp://bp9news.com/wp-content/uploads/2018/05/Kannada-star-Sudeep-to-play-Powerful-role-in-Ram-Charan-and-Boyapati-Srinu-film-150x150.pngBP9 Bureauಸಿನಿಮಾಸಿನಿಮಾ ಟಾಕ್​ : ಸ್ಯಾಂಡಲ್​ವುಡ್​ನಿಂದ ಬಾಲಿವುಡ್​ ತನ್ನ ಅಭಿನಯದ ಹಿರಿಮೆಯನ್ನು ಹೆಚ್ಚಿಸಿಕೊಂಡಿರುವ  ಕಿಚ್ಚ ಸುದೀಪ್​ ಬಾಲಿವುಡ್​​ ನಂಟೇನು  ಹೊಸದೇನಲ್ಲ. ಇದೀಗ ರಾಜಕೀಯ ಪ್ರಚಾರದಿಂದ ರಿಲ್ಯಾಕ್ಸ್​ ಪಡೆದುಕೊಂಡಿರುವ  ಅಭಿನಯ ಚಕ್ರವರ್ತಿ ತಮ್ಮ ಹೊಸ ಚಿತ್ರ  ಪೈಲ್ವಾನ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.  ಈಗ ಅದೇ ಚಿತ್ರಕ್ಕೆ ಆ್ಯಕ್ಟ್​ ಮಾಡಲು ತಮ್ಮ ಬಾಲಿವುಡ್​ ಸ್ನೇಹಿತನನ್ನು  ಕರೆ ತರುತ್ತಿದ್ದಾರೆ ಎನ್ನುವ ಸುದ್ದಿಗಳು ಸಿಕ್ಕಾಪಟ್ಟೆ ಹರಿದಾಡಿದವು. ಅಂದಹಾಗೇ ಆ ಆತ್ಮೀಯ ಬೇರೆ ಯಾರು ಅಲ್ಲ ನಟ ...Kannada News Portal