ಮುಂಬೈ: ನಟಿ ಅಲಿಯಾ ಭಟ್ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಅವರ ಅಭಿನಯದ ಸಿನಿಮಾ ರಾಝೀ  ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಗಲ್ಲಾಪೆಟ್ಟಿಗೆ ತುಂಬಿಸುತ್ತಿದೆ. ವಿಕ್ಕಿ ಕೌಶಲ್ ಅಭಿನಯದ ಮೇಘನಾ ಗುಲ್ಜಾರ್ ಆ್ಯಕ್ಷನ್ ಕಟ್ ಹೇಳಿರುವ ‘ರಾಝೀ’ ಸಿನಿಮಾ ಬಾಕ್ಸ್ ಆಫೀಸಲ್ಲಿ ಸೌಂಡ್​ ಮಾಡುತ್ತಿದೆ.

ಒಟ್ಟಾರೆ ಮೊದಲ ವಾರದ ಗಳಿಕೆ 56.59 ಕೋಟಿಗಳಷ್ಟಾಗಿದೆಯಂತೆ. ಆಲಿಯಾ ಭಟ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 70 ರ ದಶಕದ ಬ್ಯಾಕ್‌ಡ್ರಾಪ್‌ನಲ್ಲಿ ಚಿತ್ರ ತಯಾರಾಗಿದೆ. ಇದೇ ಸಮಯದಲ್ಲಿ ಪಾಕ್​ ಸೊಸೆಯಾಗಿ, ಭಾರತೀಯ ಮಗಳಾಗಿ ಡಬಲ್​ ಶೇಡ್​ನಲ್ಲಿ ಕಾಣಿಸಿಕೊಂಡ ಆಲಿಯಾ ಭಟ್​  ಕ್ಯಾರೆಕ್ಟರ್​ ಅಂತೂ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತಿದೆ.

ಇನ್ನು ಸಿನಿಮಾ ಹಿಟ್‌ ಆಗಲು ಕಾರಣವಾದ ಇಡೀ ತಂಡಕ್ಕೆ ಮೇಘನಾ ಧನ್ಯವಾದ ಹೇಳಿದ್ದಾರೆ. ಜಂಗ್ಲಿ ಪಿಕ್ಚರ್ಸ್‌ ಮತ್ತು ಧರ್ಮ ಪ್ರೊಡಕ್ಷನ್‌ ಬ್ಯಾನರ್‌ನಡಿ ವಿನೀತ್‌ ಜೈನ್‌, ಕರಣ್‌ ಜೋಹರ್‌ ಇನ್ನಿತರರು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/PAh1Ofi5_400x400.jpghttp://bp9news.com/wp-content/uploads/2018/05/PAh1Ofi5_400x400-150x150.jpgBP9 Bureauಸಿನಿಮಾಮುಂಬೈ: ನಟಿ ಅಲಿಯಾ ಭಟ್ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಅವರ ಅಭಿನಯದ ಸಿನಿಮಾ ರಾಝೀ  ಇತ್ತೀಚೆಗೆ ಬಿಡುಗಡೆಯಾಗಿ ಬಾಕ್ಸ್​ ಆಫೀಸ್​ನಲ್ಲಿ ಗಲ್ಲಾಪೆಟ್ಟಿಗೆ ತುಂಬಿಸುತ್ತಿದೆ. ವಿಕ್ಕಿ ಕೌಶಲ್ ಅಭಿನಯದ ಮೇಘನಾ ಗುಲ್ಜಾರ್ ಆ್ಯಕ್ಷನ್ ಕಟ್ ಹೇಳಿರುವ 'ರಾಝೀ' ಸಿನಿಮಾ ಬಾಕ್ಸ್ ಆಫೀಸಲ್ಲಿ ಸೌಂಡ್​ ಮಾಡುತ್ತಿದೆ. ಒಟ್ಟಾರೆ ಮೊದಲ ವಾರದ ಗಳಿಕೆ 56.59 ಕೋಟಿಗಳಷ್ಟಾಗಿದೆಯಂತೆ. ಆಲಿಯಾ ಭಟ್‌ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 70...Kannada News Portal