ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಭಾರೀ ರಣ ತಂತ್ರಗಳನ್ನು ಬಿಜೆಪಿ ಹಣೆಯುತ್ತಿದೆ. ಕೇಸರಿ ಪಡೆ 150 ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ಕೊಡದೇ ಇರಲು ನಿರ್ಧರಿಸಿದೆ ಎಂದು ಹೇಳಲಾಗಿದ್ದು, ಹಲವು ಸಂಸದರಿಗೆ ಆತಂಕ ತಂದಿಟ್ಟಿದೆ.

ಕೆಲ ಸಂಸದರ ಕಾರ್ಯ ವೈಖರಿ, ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಟಿಕೆಟ್‌ ಕೈತಪ್ಪುವುದು ಖಚಿತವಾಗಿದ್ದು, ಇನ್ನು ಕೆಲವರು ಕಳಪೆ ಸಾಧನೆ , ಸೋಲುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಟಿಕೆಟ್‌ ನೀಡದೆ ಇರಲು ಪಕ್ಷ ತೀರ್ಮಾನ ಮಾಡಿದೆ ಎಂದು ಬಿಜೆಪಿ ಮತ್ತು ಆರ್ ಎಸ್ ಎಸ್ ಮೂಲದಿಂದ ಬಿಪಿ9ಗೆ ಮಾಹಿತಿ ಲಭ್ಯವಾಗಿದೆ.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಆರೋಗ್ಯದ ಕಾರಣಕ್ಕಾಗಿ ಚುನಾವಣೆಗೆ ಸ್ಪರ್ಧಿಸದೆ ಇರಲು ತೀರ್ಮಾನಿಸಿದ್ದು, ಉಮಾ ಭಾರತಿ ಅವರು ಚುನಾವಣೆಗೆ ಸ್ಪರ್ಧಿಸದೆ ಪಕ್ಷದ ಕೆಲಸ ಮಾಡಲು ಮುಂದಾಗಿದ್ದಾರೆ. ಇನ್ನು ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿಲ್ಲ ಎಂದು ತಿಳಿದು ಬಂದಿದೆ.

ಹಿರಿಯ ಸಂಸದರಾದ ಮುರಳಿ ಮನೋಹರ ಜೋಷಿ, ಶಾಂತಕುಮಾರ್‌, ಕರಿಯಾ ಮುಂಡಾ, ಬಿ.ಸಿ.ಖಂಡೂರಿ ಯವರು ವಯಸ್ಸಿನ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸದೇ ಇರಲು ಮುಂದಾಗಿದ್ದಾರೆ.

ಈ ಬಾರಿ 70 ವರ್ಷ ದಾಟಿದವರಿಗೆ ಟಿಕೆಟ್‌ ನೀಡದೆ ಇರಲು ಪಕ್ಷ ನಿರ್ಧರಿಸಿದೆ ಎಂದೂ ತಿಳಿದು ಬಂದಿದ್ದು, 2014ರಲ್ಲಿ ಭರ್ಜರಿ 282 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದಿದ್ದ ಬಿಜೆಪಿ ಆ ಬಳಿಕ ಎದುರಾದ ಉಪಚುನಾವಣೆಗಳಲ್ಲಿ 10 ಕ್ಷೇತ್ರಗಳನ್ನು ಕಳೆದುಕೊಂಡು ಸದ್ಯ 272 ಮಂದಿ ಸಂಸದರನ್ನು ಹೊಂದಿದೆ.

ಕರ್ನಾಟಕದಲ್ಲಿ ಈಗಾಗಲೇ ಬಿ.ಎಸ್‌.ಯಡಿಯೂರಪ್ಪ , ಬಿ.ಶ್ರೀರಾಮುಲು ಅವರ ರಾಜೀನಾಮೆಯಿಂದ ಕ್ರಮವಾಗಿ ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರ ತೆರವಾಗಿದ್ದು ಉಪಚುನಾವಣೆ ಎದುರಾಗಿದೆ. 2014 ರಲ್ಲಿ 17 ಮಂದಿ ಬಿಜೆಪಿ ಸಂಸದರು ಆಯ್ಕೆಯಾಗಿದ್ದು ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ. ಯಾವ ಸಂಸದರು ಟಿಕೆಟ್‌ ಕಳೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

Please follow and like us:
0
http://bp9news.com/wp-content/uploads/2018/05/bjp-999992.jpghttp://bp9news.com/wp-content/uploads/2018/05/bjp-999992-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯBP 9 News Exclusive: The BJP's Greatest Strategy !!! Ticket Dout for 150 MPsಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಲು ಭಾರೀ ರಣ ತಂತ್ರಗಳನ್ನು ಬಿಜೆಪಿ ಹಣೆಯುತ್ತಿದೆ. ಕೇಸರಿ ಪಡೆ 150 ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ಕೊಡದೇ ಇರಲು ನಿರ್ಧರಿಸಿದೆ ಎಂದು ಹೇಳಲಾಗಿದ್ದು, ಹಲವು ಸಂಸದರಿಗೆ ಆತಂಕ ತಂದಿಟ್ಟಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute...Kannada News Portal