ಬೆಂಗಳೂರು : ದುಬಾರಿ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಲಾಭವನ್ನು ರಾಜ್ಯ ಸರ್ಕಾರಗಳು ಬಿಟ್ಟುಕೊಟ್ಟರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಪ್ರತಿ ಲೀಟರ್‌ಗೆ ಕ್ರಮವಾಗಿ ರೂ 2.65 ಮತ್ತು  2 ರೂಗಳಷ್ಟು ಅಗ್ಗವಾಗಲಿವೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಂಶೋಧನಾ ವರದಿ ತಿಳಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸದ್ಯದ ಕಚ್ಚಾ ತೈಲ ಬೆಲೆ ಆಧರಿಸಿ ಹೇಳುವುದಾದರೆ, ರಾಜ್ಯ ಸರ್ಕಾರಗಳು 2018–19ನೇ ಹಣಕಾಸು ವರ್ಷದಲ್ಲಿ ರೂ 18,728 ಕೋಟಿಗಳಷ್ಟು ಹೆಚ್ಚುವರಿ ಲಾಭ ಗಳಿಸಲಿವೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.

ಕಚ್ಚಾ ತೈಲದ ಬೆಲೆಯು ‍ಪ್ರತಿ ಬ್ಯಾರೆಲ್‌ಗೆ 1 ಡಾಲರ್‌ನಷ್ಟು ಹೆಚ್ಚಳಗೊಂಡರೆ ರಾಜ್ಯಗಳ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ರೂ 2,675 ಕೋಟಿ ವರಮಾನ ಹರಿದು ಬರಲಿದೆ.ಆರ್ಥಿಕ ಸ್ಥಿತಿ ಏರುಪೇರಾಗದು: ಈ ಹೆಚ್ಚುವರಿ ವರಮಾನ ಬಿಟ್ಟುಕೊಡು ವುದರಿಂದ ರಾಜ್ಯಗಳ ಹಣಕಾಸು ಪರಿಸ್ಥಿತಿ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಲಾರದು. ಈ ಕಾರಣಕ್ಕೆ ರಾಜ್ಯ ಸರ್ಕಾರಗಳು ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಪ್ರತಿ ಲೀಟರ್‌ಗೆ ಕ್ರಮವಾಗಿ ರೂ 2.65 ಮತ್ತು ರೂ 2ರಷ್ಟು ಕಡಿತಗೊಳಿಸಬಹುದಾಗಿದೆ. ಸದ್ಯದ ಸಂದರ್ಭದಲ್ಲಿ ಇದು ಹೆಚ್ಚು ಸಮಂಜಸವಾದ ನಿರ್ಧಾರವಾಗಿರಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವ್ಯಾಟ್‌ ಸಡಿಲಿಕೆ: ಕೇಂದ್ರ ಸರ್ಕಾರದ ತೆರಿಗೆಯೂ ಒಳಗೊಂಡ ಇಂಧನಗಳ ಬೆಲೆ ಮೇಲೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ವಿಧಿಸುವುದನ್ನು ಕೈಬಿಟ್ಟು ಮೂಲ ಬೆಲೆ ಮೇಲೆ ಮಾತ್ರ ವಿಧಿಸುವುದನ್ನು ಜಾರಿಗೆ ತಂದರೂ ಇಂಧನಗಳ ಮಾರಾಟ ದರ ಕಡಿಮೆಯಾಗಲಿದೆ.

ಇಂತಹ ನೀತಿ ಅಳವಡಿಸಿಕೊಂಡರೆ, ಪೆಟ್ರೋಲ್‌ ದರವು ಪ್ರತಿ ಲೀಟರ್‌ಗೆ ರೂ 5.75 ಮತ್ತು ಡೀಸೆಲ್‌ ದರ ರೂ 3.75ರಷ್ಟು ಅಗ್ಗವಾಗಲಿದೆ. ಹೀಗೆ ಮಾಡಿದರೆ ರಾಜ್ಯ ಸರ್ಕಾರಗಳು ರೂ 34,627 ಕೋಟಿಗಳಷ್ಟು ತೆರಿಗೆ ವರಮಾನವನ್ನು ಬಿಟ್ಟುಕೊಡಬೇಕಾಗುತ್ತದೆ. ಎಕ್ಸೈಸ್‌ ಸುಂಕ: ಕೇಂದ್ರ ಸರ್ಕಾರವು ಎಕ್ಸೈಸ್‌ ಸುಂಕವನ್ನು ರೂ 1ರಷ್ಟು ಕಡಿಮೆ ಮಾಡಿದರೆ ಅದರ ವರಮಾನ ನಷ್ಟವು ರೂ 10,725 ಕೋಟಿಗಳಿಗೆ ತಲುಪಲಿದೆ. ಸುಂಕವನ್ನು ರೂ 2ರಷ್ಟು ಕಡಿಮೆ ಮಾಡಿದರೆ ವರಮಾನ ನಷ್ಟ ಇದರ ದುಪ್ಪಟ್ಟು ಆಗಲಿದೆ. ಇದು ಕೇಂದ್ರದ ವಿತ್ತೀಯ ಕೊರತೆಯನ್ನು ಹೆಚ್ಚಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದ ನಂತರ ಜಾರಿಗೆ ಪುನಃ ಜಾರಿಗೆ ತಂದಿರುವ ಪ್ರತಿ ದಿನದ ದರ ಪರಿಷ್ಕರಣೆಯಿಂದ ದೆಹಲಿಯಲ್ಲಿ ಇದುವರೆಗೆ ಪೆಟ್ರೋಲ್‌ ದರ ರೂ 3.64 ಮತ್ತು ಡೀಸೆಲ್‌ ಬೆಲೆ ರೂ 3.24ರಷ್ಟು ತುಟ್ಟಿಯಾಗಿದೆ.

Please follow and like us:
0
http://bp9news.com/wp-content/uploads/2018/05/26190016-1024x770.jpghttp://bp9news.com/wp-content/uploads/2018/05/26190016-150x150.jpgPolitical Bureauಅಂಕಣಪ್ರಮುಖರಾಜಕೀಯBreaking news: Fuel price reduction from states is possible !!!ಬೆಂಗಳೂರು : ದುಬಾರಿ ಕಚ್ಚಾ ತೈಲದ ಮೇಲಿನ ಹೆಚ್ಚುವರಿ ಲಾಭವನ್ನು ರಾಜ್ಯ ಸರ್ಕಾರಗಳು ಬಿಟ್ಟುಕೊಟ್ಟರೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಗಳು ಪ್ರತಿ ಲೀಟರ್‌ಗೆ ಕ್ರಮವಾಗಿ ರೂ 2.65 ಮತ್ತು  2 ರೂಗಳಷ್ಟು ಅಗ್ಗವಾಗಲಿವೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಸಂಶೋಧನಾ ವರದಿ ತಿಳಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಸದ್ಯದ ಕಚ್ಚಾ ತೈಲ ಬೆಲೆ ಆಧರಿಸಿ ಹೇಳುವುದಾದರೆ, ರಾಜ್ಯ ಸರ್ಕಾರಗಳು 2018–19ನೇ ಹಣಕಾಸು ವರ್ಷದಲ್ಲಿ ರೂ 18,728 ಕೋಟಿಗಳಷ್ಟು ಹೆಚ್ಚುವರಿ ಲಾಭ ಗಳಿಸಲಿವೆ...Kannada News Portal