ಬೆಂಗಳೂರು: ಇವತ್ತು ಬೆಳಗಿನಿಂದಲೂ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಗಳಾಗುತ್ತಿದ್ವು. ಯಾರು ಮುಖ್ಯಮಂತ್ರಿಯಾಗ್ತಾರೆ? ಯಾವ ಪಕ್ಷಕ್ಕೆ ರಾಜ್ಯಪಾಲರು ಗ್ರೀನ್‌ ಸಿಗ್ನಲ್‌ ಕೊಡ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ.

ನಾಳೆ ಬೆಳಗ್ಗೆ 9.30ಕ್ಕೆ ಸರಿಯಾಗಿ ರಾಜಭವನದ ಗಾಜಿನ ಮನೆಯಲ್ಲಿ ಬಿಎಸ್‌ ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ  ಎಂದು ರಾಜಭವನದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಬಿಜೆಪಿ ಪಕ್ಷದ 105 ಜನ ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಇದರ ಬೆನ್ನಲ್ಲೆ ರಾಜ್ಯಪಾಲರು ಬಿಜೆಪಿ ಬೃಹತ್‌ ಪಕ್ಷ ಎಂದು ಪರಿಗಣಿಸಿ ಯಡಿಯೂರಪ್ಪನವರಿಗೆ ಪ್ರಮಾಣವಚನ ಸ್ವೀಕರಿಸಲು ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಈ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಸುರೇಶ್‌ಕುಮಾರ್‌ ತಮ್ಮ ಫೇಸ್‌ಬುಕ್‌ನಲ್ಲಿ ಅಪ್ಡೇಟ್‌ ಮಾಡಿದ್ದು, ಬೆಳಗ್ಗೆ ಸರಿಯಾಗಿ 9.30ಕ್ಕೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಬರಬೇಕು ಎಂದು ಫೇಸ್‌ಬುಕ್‌ ಮೂಲಕ ಜನತೆಗೆ ಆಹ್ವಾನ ಕೊಟ್ಟಿದ್ದಾರೆ.

ಈ ಮಹತ್ತರ ಬೆಳವಣಿಗೆ ಬೆನ್ನಲ್ಲೆ ರಾಜ್ಯಪಾಲರ ಈ ಗ್ರೀನ್‌ ಸಿಗ್ನಲ್‌ಗೆ  ಜೆಡಿಎಸ್‌- ಕಾಂಗ್ರೆಸ್‌ ನಾಯಕರು ಸುಪ್ರಿಂ ಕೋರ್ಟ್‌ ಮೆಟ್ಟಿಲೇರಲು ಸಿದ್ದರಾಗಿದ್ದಾರೆ.ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ ಆದ್ದರಿಂದ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು 2 ಪಕ್ಷದ ನಾಯಕರು ತಿಳಿಸಿದ್ದಾರೆ. ಇನ್ನು ಈ  ಹೋರಾಟದ ನೇತೃತ್ವವನ್ನು ಹಿರಿಯ ಕಾಂಗ್ರೆಸ್‌ ಮುಖಂಡ ಮತ್ತು ವಕೀಲ ಪಿ ಚಿದಂಬರಂ ವಹಿಸಿಕೊಂಡಿದ್ದಾರೆ. ಇನ್ನೂ ತಡರಾತ್ರಿಯಾದ್ರೂ ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ತೆರಳಿ ದೂರು ನೀಡುವುದಾಗಿ ಹೇಳಿದ್ದಾರೆ. ಹಿರಿಯ ವಕೀಲ ಕಪಿಲ್‌ ಸಿಬಲ್ ಮತ್ತು ಅಭಿಷೇಕ್‌ ಸಿಂಘ್ನಿ ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಎದುರು ಪ್ರಬಲ ವಾದಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ.

 

 

 

Please follow and like us:
0
http://bp9news.com/wp-content/uploads/2018/05/668482-yeddyurappa-1.jpghttp://bp9news.com/wp-content/uploads/2018/05/668482-yeddyurappa-1-150x150.jpgBP9 Bureauಪ್ರಮುಖ  ಬೆಂಗಳೂರು: ಇವತ್ತು ಬೆಳಗಿನಿಂದಲೂ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಬದಲಾವಣೆಗಳಾಗುತ್ತಿದ್ವು. ಯಾರು ಮುಖ್ಯಮಂತ್ರಿಯಾಗ್ತಾರೆ? ಯಾವ ಪಕ್ಷಕ್ಕೆ ರಾಜ್ಯಪಾಲರು ಗ್ರೀನ್‌ ಸಿಗ್ನಲ್‌ ಕೊಡ್ತಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ನಾಳೆ ಬೆಳಗ್ಗೆ 9.30ಕ್ಕೆ ಸರಿಯಾಗಿ ರಾಜಭವನದ ಗಾಜಿನ ಮನೆಯಲ್ಲಿ ಬಿಎಸ್‌ ಯಡಿಯೂರಪ್ಪ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ  ಎಂದು ರಾಜಭವನದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಇದಕ್ಕೆ ಬಿಜೆಪಿ ಪಕ್ಷದ 105 ಜನ ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು...Kannada News Portal